ಶಿವಮೊಗ್ಗ (ಸೆ.01): ಶಿರಾ ಹಾಗೂ ಆರ್‌.ಆರ್‌.ನಗರ ಉಪ​ಚು​ನಾವಣೆಗಳ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಸಚಿವ ಕೆ.ಎಸ್‌.ಈ​ಶ್ವ​ರಪ್ಪ, ಚುನಾವಣೆ ಎಂದರೆ ಅದು ಬಿಜೆಪಿ ಗೆಲವು ಎಂದೇ ಅರ್ಥ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.  

ಬಿಜೆಪಿಯದ್ದೇ ಗೆಲುವು ಇದನ್ನು ಬರೆದಿಟ್ಟುಕೊಳ್ಳಿ ಎಂದು  ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಯಾವುದೇ ಚುನಾವಣೆಗಳು ನಡೆಯಲಿ, ಅಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಮೊನ್ನೆ ನಡೆದ 15 ಕ್ಷೇತ್ರದ ಉಪ ಚುನಾವಣೆಯಲ್ಲಿ 12 ಸ್ಥಾನವನ್ನು ಬಿಜೆಪಿ ಗೆದ್ದಿತ್ತು. ಹಾಗಾಗಿ ಶಿರಾ ಮತ್ತು ಆರ್‌.ಆರ್‌.ನಗರ ಉಪ ಚುನಾವಣೆಯಲ್ಲಿ ಗೆಲವು ನಮ್ಮದೇ ಎಂದಿದ್ದಾರೆ.

ಬಿಜೆಪಿ ಅಭ್ಯರ್ಥಿಯಿಂದ ನಕಲಿ ಮತದಾರರ ನೋಂದಣಿ ಆರೋಪ

 ಕಾಂಗ್ರೆಸ್‌ಗೆ ಸಹ ಇದು ಗೊತ್ತಿದೆ. ಆ ಪಕ್ಷದವರಿಗೇ ಗೆಲುವಿನ ಭರವಸೆ ಇಲ್ಲ. ಒಂದು ಕಡೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಡಿದಾಡುತ್ತಿದ್ದಾರೆ. ಇನ್ನು ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ನಮ್ಮದೂ ಒಂದು ಪಕ್ಷ ಇದೆ ಎಂದು ನೆಪ ಮಾತ್ರಕ್ಕೆ ಹೇಳುತ್ತಿದ್ದಾರೆ. ಇವರೆಲ್ಲ ಎಲ್ಲಿದ್ದಾರೆ? ಇವರ ಪಕ್ಷ ಎಲ್ಲಿದೆ’ಎಂದು ಪ್ರಶ್ನಿ​ಸಿ​ದ್ದಾರೆ.