ಶಿವಮೊಗ್ಗ [ಮಾ.07] : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಗಾದಿ ಬಿಜೆಪಿ ತೆಕ್ಕೆಗೆ ಒಲಿದಿದೆ. 

ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಆಲುವಳ್ಳಿ ವಿರೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ವಿರೇಶ್ ವಿರುದ್ಧ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಮೌಳಿ ಪರಾಭವಗೊಂಡಿದ್ದಾರೆ. 

'ನೌಕರರಿಗೆ ಸಂಬಳ ನೀಡುವಷ್ಟೂ ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ವಾ?...

ಒಟ್ಟು 12 ಸದಸ್ಯಬಲವನ್ನು ಹೊಂದಿರುವ ಹೊಸನಗರ ತಾಲೂಕು ಪಂಚಾಯತ್ ನಲ್ಲಿ 6 ಬಿಜೆಪಿ, ಐವರು ಕಾಂಗ್ರೆಸ್ ಸದಸ್ಯರಿದ್ದು, ಒರ್ವ ಪಕ್ಷೇತರ ಸದಸ್ಯರಿದ್ದಾರೆ. 

ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿರೇಶ್ ಆಲುವಳ್ಳಿ 7 ಮತಗಳಿಂದ ಜಯಗಳಿಸಿದ್ದು, ಕಾಂಗ್ರೆಸಿನ ಚಂದ್ರಮೌಳಿ 5 ಮತ ಪಡೆದಿದ್ದಾರೆ. 

 ತಾಪಂ ಅಧ್ಯಕ್ಷರಾಗಿದ್ದ ಬಿಜೆಪಿಯ ವಾಸಪ್ಪ ಗೌಡ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆದು ಬಿಜೆಪಿ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.