ಹುಬ್ಬಳ್ಳಿ(ಮಾ.07): ರಾಜ್ಯ ಸರ್ಕಾರದ ಖಜಾನೆಯಲ್ಲಿ ದುಡ್ಡೇ ಇಲ್ಲ ಎಂದು ವಿರೋಧ ಪಕ್ಷಗಳು ಹಲವಾರು ಬಾರಿ ಆರೋಪಿಸುತ್ತಿವೆ. ಇದಕ್ಕೆ ಇಂಬು ನೀಡುವಂತ ಸುದ್ದಿಯೊಂದು ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಹೌದು, ಇದಕ್ಕೆಲ್ಲ ಕಾರಣವಾಗಿದ್ದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರ ಸಂದೇಶ.

ಪೊಲೀಸ್‌ ಇಲಾಖೆಯಲ್ಲಿ ಫೆಬ್ರುವರಿ ತಿಂಗಳಿನ ವೇತನ ಆಗಿಲ್ಲ. ಹೀಗಾಗಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಡಿಸಿಪಿ, ಎಸಿಪಿ ಮತ್ತು ಪಿಐಗಳಿಗೆ ಫ್ಯಾಕ್ಸ್ ಸಂದೇಶವೊಂದನ್ನ ಕಳುಹಿಸಿದ್ದಾರೆ. 

ಫೆಬ್ರುವರಿ ಮಾಹೆಯ ವೇತನವು ಅನುದಾನದ ಕೊರತೆಯಿಂದ ವಿಳಂಬವಾಗುವ ಸಾಧ್ಯತೆ ಇದ್ದು, ಆದ್ದರಿಂದ ಸಾಯಂಕಾಲ ಬ್ರೀಫ್ ಮೀಟಿಂಗ್ ಸಮಯದಲ್ಲಿ ಎಲ್ಲ ಪೊಲೀಸ್‌ ಅಧಿಕಾರಿ, ಸಿಬ್ಬಂದಿಯವರಿಗೆ ಸದರಿ ವಿಷಯವನ್ನ ಗಮನಕ್ಕೆ ತರಲು ಕೋರಲಾಗಿದೆ ಎಂದು ಫ್ಯಾಕ್ಸ್‌ ಕಳುಹಿಸಿದ್ದಾರೆ. 

ಫ್ಯಾಕ್ಸ್ ಮೂಲಕ ಈ ಸಂದೇಶವನ್ನು ಮಾ.6 ರಂದು ಈ ಸಂದೇಶ ರವಾನಿಸಿದ್ದಾರೆ. ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪೊಲೀಸರಿಗೂ ಸಂಬಳ ನೀಡದಷ್ಟು ರಾಜ್ಯ ಸರಕಾರ ಅನುದಾನದ ಕೊರತೆ ಅನುಭವಿಸುತ್ತಿದೆಯಾ.? ಎಂಬುವಂತ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಎದುರಾಗಿದೆ.