ಬಸವಕಲ್ಯಾಣ(ಏ.13): ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಬೆಂಬಲಿಗರು ಸಿಎಂ ಯಡಿಯೂರಪ್ಪ ಕಾರಿಗೆ ಮುತ್ತಿಗೆ ಯತ್ನ ನಡೆಸಿದ್ದಾರೆ.

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಸೋಮವಾರ ಬಸವಕಲ್ಯಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸುತ್ತಿದ್ದ ಸಂದರ್ಭದಲ್ಲಿ, ಇಲ್ಲಿನ ತ್ರಿಪುರಾಂತನ ಖೂಬಾ ಅವರ ನಿವಾಸದ ಹೊರಗಡೆ ಜಮಾಯಿಸಿದ್ದ ಖೂಬಾ ಅವರ ಕಾರ್ಯರ್ತರು, ಸ್ವಾಭಿಮಾನಿ ಬಳಗದವರು ಬಸವಲ್ಯಾಣ ಸ್ವಾಭಿಮಾನಕ್ಕೆ ಜಯವಾಗಿವಾಲಿ ಎಂದು ಕೂಗಿದರು.

ಸಿಎಂ ಬರುತ್ತಿದ್ದಂತೆ ಪೊಲೀಸರು ರಸ್ತೆ ಮೇಲೆ ಖೂಬಾ ಅವರ ಅಭಿಮಾನಿ ಮತ್ತು ಸ್ವಾಭಮಾನಿ ಬಳಗದವರಿಗೆ ಯಾರಿಗೂ ಬರಲು ಅವಕಾಶ ನೀಡಲಿಲ್ಲ. ರಸ್ತೆ ಪಕ್ಕದಲ್ಲಿ ಜಮಾಯಿಸಿದ ಜನರನ್ನು ಪೊಲೀಸರು ತಡೆಹಿಡಿದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಲಾಕ್‌ಡೌನ್ ಎಚ್ಚರಿಕೆ ಕೊಟ್ಟ ಸಿಎಂ ಬಿಎಸ್‌ವೈಗೆ ಮಹತ್ವದ ಸಲಹೆ ನೀಡಿದ ಸಿದ್ದರಾಮಯ್ಯ

ಸ್ಥಳಕ್ಕಾಗಮಿಸಿದ ಸ್ವತಂತ್ರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ಮುಖ್ಯಮಂತ್ರಿಗಳ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ಬಿಜೆಪಿಯಿಂದ 16 ಟಿಕೆಟ್‌ ಅಕಾಂಕ್ಷಿಗಳು ಕೇಳಿದರೂ ಬಸವಕಲ್ಯಾಣ ಕ್ಷೇತ್ರದವರಿಗೆ ಟಿಕೆಟ್‌ ನೀಡದೆ ಅನ್ಯಾಯವಾಗಿದೆ. ಹೀಗಾಗಿ ನಮಗೆ ಅನ್ಯಾಯವಾದ ಬಗ್ಗೆ ಸಿಎಂಗೆ ಕೇಳುವುದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ. 

ಏ.15ರಂದು ಬೆಳಿಗ್ಗೆ 11ಕ್ಕೆ ಬಸವಕಲ್ಯಾಣ ನಗರದಲ್ಲಿ ಸ್ವಾಭಿಮಾನಿ ಬಳಗದಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ, ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ಈ ಚುನಾವಣೆಯಲ್ಲಿ ಹೊರಗಿನಿಂದ ಬಂದು ಇಲ್ಲಿ ಪ್ರಚಾರ ಮಾಡುತ್ತಿದ್ದಾರೆ, ಜನರನ್ನು ಕರೆಸುತ್ತಿದ್ದಾರೆ. ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಬಸವಕಲ್ಯಾಣಕ್ಕೆ ಬಂದು ಯಾರು ಸುಳ್ಳು ಹೇಳುತ್ತಾರೆ, ಅನ್ಯಾಯ ಮಾಡುತ್ತಾರೆ, ಅಂಥವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದರು.

ಬಸವಕಲ್ಯಾಣ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ನಾವು ಸುತ್ತಾಡಿ ಪ್ರಚಾರ ಮಾಡಲಾಗುತ್ತಿದೆ. ನಮಗೆ ಜನರು ಸಹಕಾರ ನೀಡಿ ಗೌರವಿಸುತ್ತಿದ್ದಾರೆ. ಅದಕ್ಕಾಗಿ ಕ್ಷೇತ್ರದ ಎಲ್ಲಾ ಸ್ವಾಭಿಮಾನಿಗಳ ಬಳಗದವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಮುಂಬರುವ ದಿನಗಳಲ್ಲಿ ಬಸವಕಲ್ಯಾಣ ಜನತೆ ವಿರೋಧಿಗಳಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.