Asianet Suvarna News Asianet Suvarna News

ಬೀದರ್: ಹಾಸ್ಟಲ್ ವಾರ್ಡನ್‌ಗೆ ಜೈಲಿಗೆ ಕಳುಹಿಸುವ ಧಮ್ಕಿ ಹಾಕಿದ ಬಿಜೆಪಿ ಶಾಸಕ..!

ಬಸವಕಲ್ಯಾಣದ ನಾರಾಯಣಪುರ ಬಳಿಯ ಮೆಟ್ರಿಕ್ ಪೂರ್ವ ಹಾಸ್ಟೆಲ್ ನ ಅವ್ಯವಸ್ಥೆ ಬಗ್ಗೆ ಸಾಕಷ್ಟು ಬಾರಿ ಶಾಸಕರಿಗೆ ದೂರು ಬಂದಿದ್ದಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಕೋಣೆಗಳು, ಊಟದ ವ್ಯವಸ್ಥೆ, ಊಟಕ್ಕೆ ತಯಾರಿಸಲು ಇಟ್ಟಿದ್ದ ದವಸ- ಧಾನ್ಯಗಳು, ಜೋಳ ಮತ್ತು ಕಡ್ಲೆ ಬೇಳೆ ಹಿಟ್ಟು ಪರಿಶೀಲನೆ ನಡೆಸಿದಾರೆ.  

BJP MLA Sharanu Salagar Slams Hostel Warden in Bidar grg
Author
First Published Nov 2, 2023, 12:00 AM IST

ವರದಿ- ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್

ಬೀದರ್(ನ.02):  ಬಡವರು ಹಿಂದೂಳಿದ ವರ್ಗದವರು, ದೀನ- ದಲಿತರ ಮಕ್ಕಳು ಅಭಿವೃದ್ಧಿಗಾಗಿ ಸರ್ಕಾರ ಬಿಸಿಎಂ ಹಾಸ್ಟೆಲ್ ಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ನೀಡುತ್ತಿದೆ ಆದರೆ ಹೀಗೆ ಬಡವರ ಹೆಸರಲ್ಲಿ ಬರುವ ಅನುದಾನ ಸರ್ಕಾರಿ ಅಧಿಕಾರಿಗಳು ನುಂಗಿ ನೀರು ಕುಡಿಯುತ್ತಿರುವ ಪ್ರಕರಣ ಬಸವಣ್ಣನ ಕರ್ಮ ಭೂಮಿ ಎನಿಸಿಕೊಂಡಿರುವ ಬಸವಕಲ್ಯಾಣದಲ್ಲಿ ಕಂಡು ಬಂದಿದೆ. ನಾರಾಯಣಪುರ ಗ್ರಾಮದ ಮೆಟ್ರಿಕ್ ಪೂರ್ವ ವಸತಿ ಶಾಲೆಗೆ ಸ್ಥಳೀಯ ಶಾಸಕ ಶರಣು ಸಲಗರ ದಿಢೀರ್‌ ಭೇಟಿ ನೀಡಿದ್ದಾರೆ. ಈ ವೇಳೆ ಹಾಸ್ಟೆಲ್ ಅವ್ಯವಸ್ಥೆ ನೋಡಿ ವಾರ್ಡನ್ ಮತ್ತು ಬಿಸಿಎಂ ತಾಲೂಕಾ ಅಧಿಕಾರಿ ವಿರುದ್ಧ ಸ್ಥಳೀಯ ಶಾಸಕ ಸಲಗರ ಫುಲ್ ಗರಂ ಆಗಿದ್ದಾರೆ.

ಬಸವಕಲ್ಯಾಣದ ನಾರಾಯಣಪುರ ಬಳಿಯ ಮೆಟ್ರಿಕ್ ಪೂರ್ವ ಹಾಸ್ಟೆಲ್ ನ ಅವ್ಯವಸ್ಥೆ ಬಗ್ಗೆ ಸಾಕಷ್ಟು ಬಾರಿ ಶಾಸಕರಿಗೆ ದೂರು ಬಂದಿದ್ದಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಕೋಣೆಗಳು, ಊಟದ ವ್ಯವಸ್ಥೆ, ಊಟಕ್ಕೆ ತಯಾರಿಸಲು ಇಟ್ಟಿದ್ದ ದವಸ- ಧಾನ್ಯಗಳು, ಜೋಳ ಮತ್ತು ಕಡ್ಲೆ ಬೇಳೆ ಹಿಟ್ಟು ಪರಿಶೀಲನೆ ನಡೆಸಿದಾರೆ.  ಹಾಸ್ಟೆಲ್ ನಲ್ಲಿ ತೀವ್ರ ಕಳೆಪೆ ಗುಣಮಟ್ಟದ ದವಸ ಧಾನ್ಯಗಳು ಸಂಗ್ರಹಿಸಿಟ್ಟಿದ್ದು ನೋಡಿ ಶಾಸಕರು ಬಿಸಿಎಂ ಅಧಿಕಾರಿ ಮತ್ತು ವಾರ್ಡನ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದಾರೆ. ಇನ್ನು ಜೋಳ, ಕಡ್ಲೆ ಹಿಟ್ಟಿನಲ್ಲಿ ಹುಳುಗಳು(ನುಶಿ) ಸಿಕ್ಕಿವೆ ಇದನ್ನ ಗಮನಿಸಿ ಶಾಸಕ ಸಲಗರ ಬಿಸಿಎಂ ಹಾಸ್ಟೆಲ್ ತಾಲೂಕು ಆಪೀಸರ, ಹಾಸ್ಟೆಲ್ ವಾರ್ಡನ್ ವಿರುದ್ಧ ಕೆಂಡಕಾರಿದಾರೆ ನಿಮ್ಮ ಮಕ್ಕಳಿಗೆ ಇದೇ ರೀತಿ ಅನ್ನ ಕೊಡುತ್ತೀರಾ ನಿಮಗೆ ಮನುಷ್ಯತ್ವ ಇದಿಯಾ ಎಂದು ಪ್ರಶ್ನಿಸಿ ಫುಲ್ ಕ್ಲಾಸ್ ತೆಗೆದುಕೊಂಡು, ನಿಮಗೆ ಸಸ್ಪೆಂಡ್ ಇಲ್ಲ ಜೈಲಿಗೆ ಕಳುಹಿಸಬೇಕೆಂದು ಕಿಡಿಕಾರಿದ್ದಾರೆ. 

ಮಹಾರಾಷ್ಟ್ರದಲ್ಲಿ ಮೀಸಲು ಹೋರಾಟ; ಕರ್ನಾಟಕದ ಬಸ್‌ಗೆ ಬೆಂಕಿ!

ಸರ್ಕಾರ ಹಿಂದುಳಿದವರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡುತ್ತಿದೆ ಆದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತ ಸ್ಥಿತಿ ಗಡಿ ಜಿಲ್ಲೆ ಬೀದರ್ ನ ಹಲವು ಹಾಸ್ಟೆಲ್ ಗಳಲ್ಲಿ ನಡೆಯುತ್ತಿದೆ ಈ ಅವ್ಯವಸ್ಥೆ ವಿರುದ್ಧ ಶಾಸಕರು ಧ್ವನಿ ಎತ್ತಿದ್ದು ಈಗಲಾದರೂ ಅಧಿಕಾರಿಗಳು ಸರಿದಾರಿಗೆ ಬರುತ್ತಾರಾ ಕಾದು ನೋಡಬೇಕಾಗಿದೆ. 

Follow Us:
Download App:
  • android
  • ios