'ಸಿಎಂಗೆ 6 ಪುಟದ ಪತ್ರ ಕೊಟ್ಟು ಕೊನೆಯವರೆಗೂ ಓದಲು ಹೇಳಿದ್ದೇನೆ'
- ನಾನು ಮುಖ್ಯಮಂತ್ರಿ ಅವರಿಗೆ ಪತ್ರ ಕೊಟ್ಟು ಬಂದಿದ್ದೇನೆ. ಅದನ್ನು ಕೊನೆಯವರೆಗೆ ಓದಲು ಮನವಿ ಮಾಡಿದ್ದೇನೆ.
- ಕೆಟ್ಟದಿರಬಹುದು ಒಳ್ಳೆಯದಿರಬಹುದು ನೋವಾಗಬಹುದು. ಆದರೆ ರಾಜ್ಯದ ಹಿತದೃಷ್ಟಿಯಿಂದ ಅದನ್ನು ಬರೆದಿದ್ದೇನೆ
ಮೈಸೂರು (ಆ.16): ನಾನು ಮುಖ್ಯಮಂತ್ರಿ ಅವರಿಗೆ ಪತ್ರ ಕೊಟ್ಟು ಬಂದಿದ್ದೇನೆ. ಅದನ್ನು ಕೊನೆಯವರೆಗೆ ಓದಲು ಮನವಿ ಮಾಡಿದ್ದೇನೆ. ಕೆಟ್ಟದಿರಬಹುದು ಒಳ್ಳೆಯದಿರಬಹುದು ನೋವಾಗಬಹುದು. ಆದರೆ ರಾಜ್ಯದ ಹಿತದೃಷ್ಟಿಯಿಂದ ಅದನ್ನು ಬರೆದಿದ್ದೇನೆ ಎಂದು ಮೈಸೂರು ಕೆಆರ್ ಕ್ಷೇತ್ರದ ಬಿಜೆಪಿ ಶಾಸಕ ಹಾಗು ಮಾಜಿಸಚಿವ ಎಸ್ ಎ ರಾಮದಾಸ್ ತಿಳಿಸಿದರು.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಅಸಮಾಧಾನದಿಂದ ಸಿಎಂ ಭೇಟಿ ಮಾಡದೆ ಉಲಿದಿದ್ದಲ್ಲ. ಮುಖ್ಯಮಂತ್ರಿ ಅವರನ್ನು ಮೈಸೂರಿನಲ್ಲಿ ಯಾಕೆ ಭೇಟಿ ಮಾಡಿಲ್ಲ ಎಂಬುದರ ಬಗ್ಗೆ 6 ಪುಟಗಳ ವಿವರಾವದ ಪತ್ರ ಬರೆದಿದ್ದೆನೆ. ಸಮಾಧಾನ ಅಸಮಾದಾನ ವಿಚಾರ ಇಲ್ಲ. ಪಕ್ಷ ಹಿತ, ರಾಜ್ಯದ ಹಿತ ಮುಖ್ಯ ಎಂದು ಹೇಳಿದ್ದಾರೆ ಎಂದರು.
ಮುಂಬರುವ 2023ರ ಚುನಾವಣೆ ದೃಷ್ಟಿಯಿಂದ ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡಲು ಸೂಚಿಸಿದ್ದೇನೆ.
ಯಾವುದೇ ಸಲಹೆ ಬೇಕಾದರು ಕೊಡಲು ನಾನು ಸಿದ್ದ. ಪ್ರಮುಖವಾದ ಅಂಶಗಳನ್ನು ಪತ್ರದಲ್ಲಿ ಬರೆಯಬೇಕಿತ್ತು ಬರೆದಿದ್ದೇನೆ ಎಂದರು. ಅಲ್ಲದೆ ಮೈಸೂರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಎನ್ನುವುದು ನಾನು ಹೇಳಬೇಕಿಲ್ಲ ಅವರಿಗೆ ಗೊತ್ತಿದೆ ಎಂದರು.
ಮೈಸೂರಿಗೆ ಸಿಎಂ ಬಂದಾಗ ಯಾಕೆ ಭೇಟಿಯಾಗಿಲ್ಲ; ಮುಚ್ಚಿದ ಲಕೋಟೆಯಲ್ಲಿ ಉತ್ತರ ಕೊಟ್ಟ ರಾಮದಾಸ್!
: ನಾನು ಮುಖ್ಯಮಂತ್ರಿ ಅವರಿಗೆ ಪತ್ರ ಕೊಟ್ಟು ಬಂದಿದ್ದೇನೆ. ಅದನ್ನು ಕೊನೆಯವರೆಗೆ ಓದಲು ಮನವಿ ಮಾಡಿದ್ದೇನೆ. ಕೆಟ್ಟದಿರಬಹುದು ಒಳ್ಳೆಯದಿರಬಹುದು ನೋವಾಗಬಹುದು. ಆದರೆ ರಾಜ್ಯದ ಹಿತದೃಷ್ಟಿಯಿಂದ ಅದನ್ನು ಬರೆದಿದ್ದೇನೆ ಎಂದು ಮೈಸೂರು ಕೆಆರ್ ಕ್ಷೇತ್ರದ ಬಿಜೆಪಿ ಶಾಸಕ ಹಾಗು ಮಾಜಿಸಚಿವ ಎಸ್ ಎ ರಾಮದಾಸ್ ತಿಳಿಸಿದರು.