Asianet Suvarna News Asianet Suvarna News

ದೇವೇಗೌಡರಿಗೆ ಬೆಂಬಲ ಕೊಡುತ್ತೇನೆ : ಬಿಜೆಪಿ ಶಾಸಕ

ದೇವೇಗೌಡರಿಗೆ ಶಾಸಕನಾಗಿ ನಾನು ಬೆಂಬಲ ನೀಡುತ್ತೇನೆ. ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ ಎಂದು ಬಿಜೆಪಿ ಶಾಸಕರೋರ್ವರು ಹೇಳಿದ್ದಾರೆ. ಅಲ್ಲದೇ ಅಭಿವೃದ್ಧಿ ವಿಚಾರದ ಬಗ್ಗೆ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

BJP MLA Preetham Gowda Slams JDS Leader HD revanna snr
Author
Bengaluru, First Published Jan 27, 2021, 12:15 PM IST

ಹಾಸನ (ಜ.27):   ಮಾಜಿ ಸಚಿವ ಎಚ್‌.ಡಿ. ರೇವಣ್ಣ, ಹಾಸನ ಜಿಲ್ಲೆಯ ಹೆಸರಿನಲ್ಲಿ ಅಭಿವೃದ್ಧಿ ನಾಟಕದ ಮೂಲಕ ರಾಜಕೀಯ ಮಾಡುವುದು ಬೇಡ ಎಂದು ಶಾಸಕ ಪ್ರೀತಮ್‌ ಜೆ. ಗೌಡ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಯೂತ್‌ ಹಾಸ್ಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರೇವಣ್ಣನವರು ಹಾಸನ ಜಿಲ್ಲೆ ನಿರ್ಲಕ್ಷ್ಯ ತಾರತಮ್ಯದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳುತ್ತಾರೆ. ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಹೆಚ್ಚಾಗಿ ಅನುದಾನ ನೀಡಿರುವುದಾಗಿ ಅವರೇ ಹೇಳುತ್ತಾರೆ. ಜೆಡಿಎಸ್‌ ಶಾಸಕರ ಕ್ಷೇತ್ರಕ್ಕೆ ಅನುದಾನ ಕೊಡುತಿಲ್ಲ ಎಂದು ಹೇಳಿಕೆ ನೀಡಿರುವುದನ್ನು ನೋಡಿದರೇ ಇದರ ಅರ್ಥ ಬಿಜೆಪಿ ಸರ್ಕಾರ ಜಿಲ್ಲೆಯನ್ನು ಕಡೆಗಣಿಸಿಲ್ಲ. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ ಎಂದರ್ಥ ಎಂದರು.

ರೇವಣ್ಣ ಅವರು ಅಭಿವೃದ್ಧಿ ವಿಚಾರದಲ್ಲಿ ಹಣ ಕೇಳಲಿ. ಆದರೆ, ಹಾಸನ ಜಿಲ್ಲೆಯ ಹೆಸರಿನಲ್ಲಿ ರಾಜಕೀಯ ಮಾಡುವುದು ಬೇಡ. ಯಾವ ಯಾವ ಸರ್ಕಾರದಲ್ಲಿ ಯಾವ ಜಿಲ್ಲೆಗೆ ಎಷ್ಟುಹಣ ಕೊಟ್ಟಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತು. ಅವರ ಕಾಲದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಬಂದಿರಬಹುದು ನನ್ನ ಕ್ಷೇತ್ರಕ್ಕೆ ಅವರ ಸರ್ಕಾರದಲ್ಲಿ ಯಾವ ಅನುದಾನ ನೀಡಿರಲಿಲ್ಲ. ಆದರೆ, ಈಗ ಬಿಜೆಪಿ ಸರ್ಕಾರ ಬಂದಾಗ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಂದಿದೆ. ಇದು ನನ್ನ ಪ್ರಭಾವ ಬಳಸಿ ಹೆಚ್ಚಿನ ಅನುದಾನ ತಂದಿರುವುದು. ಹಾಸನ ನಗರ ಸಹ ಜಿಲ್ಲೆಗೆ ಸೇರಿದೆ. ಅದಕ್ಕೆ ರೇವಣ್ಣನವರು ಸಹಕಾರ ಕೊಡಲಿ ಎಂದು ಕುಟುಕಿದರು.

ಬಿಜೆಪಿ -ಜೆಡಿಎಸ್ ದೋಸ್ತಿ : ಪಟ್ಟ ಬಿಟ್ಟುಕೊಡಲು ಕಮಲ ಪಾಳಯ ಒಪ್ಪಿಗೆ? ...

ಸಾರ್ವಜನಿಕರಿಗೆ ಜೆಡಿಎಸ್‌ ಸರ್ಕಾರ ಇದ್ದಾಗ ಮಾತ್ರ ಅಭಿವೃದ್ಧಿ, ಉಳಿದಂತೆ ಬೇರೆ ಸರ್ಕಾರ ಇದ್ದಾಗ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಜನರಿಗೆ ತೋರಿಸುವ ನಾಟಕವಾಡುತ್ತಿದ್ದಾರೆ. ಜಿಲ್ಲೆಯ ಜನರಿಗೆ ಪ್ಲೈಓವರ್‌ ಬೇಕು. ಮಾಜಿ ಸಚಿವರಿಗೆ ಪ್ಲೈಓವರ್‌ ಅವಶ್ಯಕತೆ ಇಲ್ಲ ಎಂದ ಅವರು, ವೈಯಕ್ತಿಕ ಹಿತಾಸಕ್ತಿ ಇದರಲ್ಲಿ ಇಲ್ಲ. 2021ರ ಡಿಸೆಂಬರ್‌ ಒಳಗೆ ಪ್ಲೈ ಓವರ್‌ ಮುಕ್ತಾಯವಾಗುವುದು ಸೂರ್ಯ-ಚಂದ್ರ ಇರುವುದಷ್ಟುಸತ್ಯ ಎಂದರು.

ರೇವಣ್ಣನವರು ಎನ್‌.ಆರ್‌. ವೃತ್ತದಿಂದ ಪೃಥ್ವಿ ಥಿಯೇಟರ್‌ವರಗೆ ರಸ್ತೆ ಒಡೆದಾಗ ಯಾವ ಕಾನೂನು ಪಾಲನೆ ಮಾಡಿ ಪರಿಹಾರ ನೀಡಿದ್ದಾರೆæ ಎಂಬುದಕ್ಕೆ ಲೆಕ್ಕ ಪತ್ರ ಕೊಡಲಿ, ಇಲ್ಲ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಮುಸ್ಲಿಂ ಜನಾಂಗದವರು ಬಿಜೆಪಿಗೆ ಮಾತ್ರವಲ್ಲ ಜನತಾದಳಕ್ಕೆ ಕೂಡ ಮತ ಹಾಕಿಲ್ಲ. ಬಿಜೆಪಿ ಸಂಬಂಧ ಮುಸ್ಲಿಂರು ಜೆಡಿಎಸ್‌ ನಂಬಲ್ಲ. 80 ಅಡಿ ರಸ್ತೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ತೊಂದರೆಯಾಗಿದ್ದು, ಸಮುದಾಯದ ಜನರಿಗೆ ಗೊತ್ತಿರುವ ವಿಚಾರ. ಫ್ಲೈ ಓವರ್‌ ಮುಸ್ಲಿಂ ಕ್ರಿಶ್ಚಿಯನ್‌. ಸೇರಿದಂತೆ ಜಿಲ್ಲೆಯ ಎಲ್ಲಾ ಜನರಿಗೆ ಅವಶ್ಯಕವಾಗಿದೆ. ಏರ್‌ಪೋರ್ಟ್‌ ಅವಶ್ಯಕತೆ ಇರುವ ಜಾಗ ಮಾತ್ರ ಸಾಕು. ಅನವಶ್ಯಕವಾಗಿ ರೈತರ ಜಮೀನು ಬೇಡ. ದೇವೇಗೌಡರ ಆಸೆ ಈಡೇರಿಸುತ್ತೇವೆ. ವಿಮಾನ ನಿಲ್ದಾಣ ಮಾಡಲು 350 ಎಕರೆ ಸಾಕು. 40 ವರ್ಷ ಮಾಡದ ಕೆಲಸವನ್ನು ಯಡಿಯೂರಪ್ಪರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ದೇವೇಗೌಡರ ಬೆಂಬಲಕ್ಕೆ ಶಾಸಕನಾಗಿ ಬೆಂಬಲ ಕೊಡುತ್ತೇನೆ ಅವರ ಜೊತೆ ಮುಖ್ಯಮಂತ್ರಿ ಭೇಟಿ ಮಾಡುತ್ತೇನೆ ಎಂದರು.

'ಮುಂದಿನ ಚುನಾವಣೆಯಲ್ಲಿ ಎಚ್‌.ಡಿ ರೇವಣ್ಣ ಇಲ್ಲೇ ಸ್ಪರ್ಧಿಸಲಿ' .

ರೇವಣ್ಣನವರು ದಿನ ಬೆಳಗಾದರೆ ಹೆಚ್ಚು ಜ್ಞಾಪಕ ಮಾಡಿಸುತ್ತಾರೆ. ಇದರಿಂದಲೇ ನಾನು ಹೆಚ್ಚು ಕೆಲಸ ಮಾಡಲು ಸಹಕಾರಿಯಾಗಿದೆ ಎಂದ ಅವರು, ರೇವಣ್ಣನವರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಚಿಂತನೆ ಬೇಡ. ಬೆಳಗಾದರೆ ಸುದ್ದಿಗೋಷ್ಟಿನಡೆಸುವ ಬದಲು 2023 ರ ಚುನಾವಣೆಯಲ್ಲಿ ನನ್ನ ಎದುರಿಗೆ ಸ್ವರ್ಧೆ ಮಾಡಲು ಚಿಂತಿಸಲಿ ಎಂದು ಸಲಹೆ ನೀಡಿದರು.

ಹಲವು ಬಾರಿ ಸಚಿವರಾಗಿದ್ದು, 50 ವರ್ಷದಿಂದ ಮಂತ್ರಿಯಾಗಿದ್ದರು. ಬರಿ ಹೊಳೆನರಸೀಪುರ ಕ್ಷೇತ್ರದ ಅಭಿವೃದ್ಧಿ ಆಗಿದೆ. ಸಕಲೇಶಪುರ ಆನೆ ಹಿಡಿಸುವ ಕೆಲಸ ಇನ್ನು ಆಗಿಲ್ಲ. ಆದರೆ, ನಾನು ಶಾಸಕನಾಗಿ 2 ವರ್ಷದ ಅವಧಿ​ಯಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿರುವುದಾಗಿ ಹೇಳಿದರು.

Follow Us:
Download App:
  • android
  • ios