Honnavar: ಚಿಕಿತ್ಸೆ ಬೇಕಾದ್ರೆ ಖಾಸಗಿ ಆಸ್ಪತ್ರೆಗೆ ಹೋಗು ಎಂದ ಶಾಸಕ ದಿನಕರ ಶೆಟ್ಟಿ
* ಆರೋಗ್ಯ ಮೇಳದಲ್ಲಿ ಸರ್ಕಾರಿ ವೈದ್ಯರ ವಿರುದ್ಧ ದೂರು ನೀಡಲು ಬಂದಿದ್ದ ವ್ಯಕ್ತಿಗೆ ಗದರಿಸಿದ ಶಾಸಕ
* ಶಾಸಕರು ನಡೆ ಸಲ್ಲದು
* ವೈದ್ಯರು, ಶಾಸಕರು, ಖಾಸಗಿ ಆಸ್ಪತ್ರೆಯೊಂದಿಗೆ ಹೊಂದಾಣಿಕೆ ಇದೆಯೇ?
ಹೊನ್ನಾವರ(ಮೇ.01): ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ದೂರು ನೀಡಲು ಬಂದಿದ್ದ ವ್ಯಕ್ತಿಗೆ ಶಾಸಕ ದಿನಕರ ಶೆಟ್ಟಿ‘(Dinakara Shetty) ನಿನ್ನ ಇತಿಹಾಸ ನನಗೆ ಗೊತ್ತು’ ಎಂದು ಗದರಿಸಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ನಿಂತು ‘ಚಿಕಿತ್ಸೆ ಬೇಕಾದರೆ ಖಾಸಗಿ ಆಸ್ಪತ್ರೆಗೆ ಹೋಗು’ ಎಂದು ಹೇಳಿದ ಘಟನೆ ನಡೆಯಿತು.
ಇತ್ತೀಚೆಗೆ ತಾಲೂಕು ಆಸ್ಪತ್ರೆಯ ವೈದ್ಯ ಡಾ.ಮಂಜುನಾಥ ವಿರುದ್ಧ ತಾಲೂಕಿನ ಹಳದೀಪುರ ಅಗ್ರಹಾರದ ಮಂಜುನಾಥ ಮುಕ್ರಿ ಎನ್ನುವವರು ತನ್ನ ತಾಯಿಗೆ ಸರಿಯಾಗಿ ಚಿಕಿತ್ಸೆ(Treatment) ನೀಡಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿಗೆ ದೂರು ನೀಡಿದ್ದರು.
Karwar: ಇ-ತ್ಯಾಜ್ಯ ನಿರ್ವಹಣೆಗೆ ಹೊಸ ಹೆಜ್ಜೆ: ಇತರ ನಗರಗಳಿಗೆ ಮಾದರಿಯಾದ ಕಾರವಾರ ನಗರಸಭೆ!
ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಮೇಳದಲ್ಲಿ ಶಾಸಕರ ಗಮನಕ್ಕೆ ಈ ವಿಷಯ ತರಲು ಮಾತನಾಡಿಸಿದಾಗ ಶಾಸಕ ಶೆಟ್ಟಿ ಕೋಪಗೊಂಡು ದೂರುದಾರರಿಗೆ ಗದರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ(Government Hospital) ಆಯುಷ್ಮಾನ ಇದೆಯಲ್ಲ? ಖರ್ಚು ವೆಚ್ಚಕ್ಕೆ ಹಣ ಸಿಗುತ್ತಲ್ಲ? ಎಂದು ಶಾಸಕ ದಿನಕರ ಶೆಟ್ಟಿ ದೂರುದಾರನಿಗೆ ಹೇಳಿದರು. ಅದಕ್ಕೆ ಉತ್ತರಿಸಿದ ಮಂಜುನಾಥ ಮುಕ್ರಿ, ಆಯುಷ್ಮಾನ್ ಇದ್ದರೂ ಪ್ರತಿಯೊಂದು ಲ್ಯಾಬ್ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಅಲ್ಲಿ ಹಣ ನೀಡಬೇಕಲ್ಲವೇ? ಎಂದು ಪ್ರಶ್ನಿಸಿದರು. ಹಾಗಾದರೆ ಖಾಸಗಿ ಆಸ್ಪತ್ರೆಗೆ(Private Hospital) ಹೋಗಿ ಎಂದು ಶಾಸಕರು ಗದರಿಸಿದರು.
ಶಾಸಕರು ನಡೆ ಸಲ್ಲದು:
ಶಾಸಕರು ನನ್ನ ಮನವಿಗೆ ಸ್ಪಂದಿಸುವ ಬದಲು ನನ್ನನ್ನೇ ಗದರಿಸಿದ್ದಾರೆ. ನಿನ್ನ ಇತಿಹಾಸ ಗೊತ್ತು ಎಂದು ಸಾರ್ವಜನಿಕವಾಗಿ ಹೇಳುತ್ತಾರೆ. ನಾನು ವಕೀಲನಾಗಿದ್ದರೆ ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತಿದ್ದೆ. ಇವರ ಹತ್ತಿರ ಏಕೆ ಬರುತ್ತಿದೆ? ಇವರು ಶಾಸಕರಾಗಿದ್ದ ಕಾರಣ ನ್ಯಾಯಕ್ಕಾಗಿ ಇವರ ಹತ್ತಿರ ಬಂದರೆ, ಇವರು ಹೀಗೆ ಮಾತನಾಡುತ್ತಾರೆ. ನನಗೆ ಹೀಗೆ ಹೇಳಿದವರು ಇನ್ನು ನನಗಿಂತ ಕೆಳಗಿನವರಿಗೆ ಏನು ಹೇಳಬಹುದು? ಇದು ಶಾಸಕರು ನಡೆದುಕೊಳ್ಳುವ ರೀತಿಯೇ? ನನಗೆ ನ್ಯಾಯ ಸಿಗುವವರೆಗೆ ಸುಮ್ಮನಿರುವುದಿಲ್ಲ ಎಂದು ಮಂಜುನಾಥ ಮುಕ್ರಿ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರು, ಶಾಸಕರು, ಖಾಸಗಿ ಆಸ್ಪತ್ರೆಯೊಂದಿಗೆ ಹೊಂದಾಣಿಕೆ ಇದೆಯೇ? ನನ್ನ ತಾಯಿಯ ಆರೋಗ್ಯ(Health) ಇನ್ನೂ ಕೂಡ ಸರಿಯಾಗಿಲ್ಲ. ನಾನು ಎಲ್ಲಿಂದ ಹಣ ತರಬೇಕು? ಎಂದು ಅಳಲು ತೋಡಿಕೊಂಡಿದ್ದಾರೆ.