ಹಾಸನ, [ನ.05]: ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನುಡಿ ಎನ್ನಲಾಗುತ್ತಿರುವ ಕರ್ನಾಟಕದ 5 ಉಪಚುನಾವಣೆ ಫಲಿಶಾಂಶ ಇನ್ನೇನು ಕೆಲವು ಗಂಟೆಗಳಲ್ಲಿ ಪ್ರಕಟಗೊಳ್ಳಲಿದೆ. 

ಆದರೆ ಅದಕ್ಕೂ ಮುನ್ನವೇ ಬಿಜೆಪಿ ಶಾಸಕ ಸಿಟಿ ರವಿ ಸೋಲೋಪ್ಪಿಕೊಂಡಿದ್ದಾರೆ. ಹಾಸನದಲ್ಲಿ ಇಂದು [ಸೋಮವಾರ] ಸುದ್ದಿಗಾರರೊಂದಿಗೆ ಸಿಟಿ ರವಿ, ಸೋಲಿನ ಹತಾಶೆಯ ಮಾತುಗಳನ್ನಾಡಿದರು.

ಮಂಡ್ಯ ಅಭ್ಯರ್ಥಿ ಪ್ರಬಲ ಪೈಪೋಟಿ‌ ನೀಡಲಾರರು. ಇದ್ರಿಂದ ಮಂಡ್ಯದಲ್ಲಿ ನಾವು ಗೆಲ್ಲೋದು‌ ಕಷ್ಟ ಎಂದರು. ಇನ್ನು ರಾಮನಗರ ವಿಧಾನಸಭಾ ಬೈ ಎಲೆಕ್ಷನ್ ನಿಂದ ಅರ್ಧದಲ್ಲಿಯೇ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಸಿಎಂಗೆ ಗುಪ್ತಚರ ವರದಿ: 5 ಬೈ ಎಲೆಕ್ಷನ್ ನಲ್ಲಿ ಗೆಲ್ಲೋದ್ಯಾರು? ವರದಿಯಲ್ಲೇನಿದೆ?

ರಾಮನಗರ ‌ಬೆಳವಣಿಗೆ ಬಿಜೆಪಿ ಪಾಲಿಗೆ ಒಂದು‌ ಕಪ್ಪು‌ಚುಕ್ಕೆ.ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುವೆ. ಸಮರ್ಥ ಅಭ್ಯರ್ಥಿ ಹಾಕಲು ನಾವು ಎಡವಿದ್ದೇವೆ. ಪಕ್ಷಕ್ಕೆ‌ ನಿಷ್ಠರಾಗಿರುವವರನ್ನು ಕಣಕ್ಕಿಳಿಸಬೇಕಿತ್ತು. 

ಇದರಿಂದ ನಾವು ಪಾಠ ಕಲಿಯಬೇಕಿದೆ,ಈ ಬಗ್ಗೆ ಕಾರ್ಯಕರ್ತರಿಗೆ ನೋವಾಗಿದ್ದು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಷ್ಟ್ರೀಯ ಪಕ್ಷಕ್ಕೆ ಇದು ಅವಮಾನ ಎಂದರು

 ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಹಾಗೂ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಇದೇ ನವೆಂಬರ್ 3ರಂದು ಉಪಚುನಾವಣೆ ನಡೆದಿತ್ತು. ಇದರ ಫಲಿತಾಂಶ ನಾಳೆ [ಮಂಗಳವಾರ] ಹೊರಬೀಳಲಿದೆ.