Asianet Suvarna News Asianet Suvarna News

ಬೆಳಗಾವಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ‌‌, ದಿಢೀರ್ ಸುದ್ದಿಗೋಷ್ಠಿ ನಡೆಸಿದ ಬಾಲಚಂದ್ರ ಜಾರಕಿಹೊಳಿ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ‌ ನೀಡಿದ್ದಾರೆ. ಟಿವಿಗಳಲ್ಲಿ ವಿಷಯ ಬೇರೆ ಬೇರೆ ಬರುತ್ತಿದೆ ಎಲ್ಲರಿಗೂ ಕ್ಲಿಯರ್ ಮಾಡ್ತಿವಿ. ಎಲ್ಲರ‌ ಸಹಮತದಿಂದ 2020ರಲ್ಲಿ ಅವಿರೋಧ ಆಯ್ಕೆ ಮಾಡಿದ್ವಿ. ಇನ್ನೊಂದು ವರ್ಷ ಅವಧಿ ಇತ್ತು ಸ್ವಲ್ಪ ಬಿನ್ನಾಭಿಪ್ರಾಯ ಇದ್ದವು. ಡೈರೆಕ್ಟರ್ಸ್ ಎಲ್ಲರೂ ಬಂದು ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಅವರಿಗೆ ನಾವೂ ಸಜ ಮನವಿ ಮಾಡಿದೆವು. ಹೀಗಾಗಿ ಹಿರಿಯರು ಹಾಗೂ ನಿರ್ದೇಶಕರಿಗೆ ಗೌರವ ಕೊಟ್ಟು ರಾಜೀನಾಮೆ ನೀಡಿದ್ದಾರೆ: ಶಾಸಕ ಬಾಲಚಂದ್ರ ಜಾರಕಿಹೊಳಿ 

BJP MLA Balachandra Jarkiholi Talks Over Ramesh Katti Resign to Belagavi DCC Bank President grg
Author
First Published Oct 4, 2024, 6:04 PM IST | Last Updated Oct 4, 2024, 6:05 PM IST

ಬೆಳಗಾವಿ(ಅ.04):  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ‌‌ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇಂದು(ಶುಕ್ರವಾರ) ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ.  

ಈ ವೇಳೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ ರಾಜೀನಾಮೆ‌ ನೀಡಿದ್ದಾರೆ. ಟಿವಿಗಳಲ್ಲಿ ವಿಷಯ ಬೇರೆ ಬೇರೆ ಬರುತ್ತಿದೆ ಎಲ್ಲರಿಗೂ ಕ್ಲಿಯರ್ ಮಾಡ್ತಿವಿ. ಎಲ್ಲರ‌ ಸಹಮತದಿಂದ 2020ರಲ್ಲಿ ಅವಿರೋಧ ಆಯ್ಕೆ ಮಾಡಿದ್ವಿ. ಇನ್ನೊಂದು ವರ್ಷ ಅವಧಿ ಇತ್ತು ಸ್ವಲ್ಪ ಬಿನ್ನಾಭಿಪ್ರಾಯ ಇದ್ದವು. ಡೈರೆಕ್ಟರ್ಸ್ ಎಲ್ಲರೂ ಬಂದು ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮನವಿ ಮಾಡಿದರು. ಅವರಿಗೆ ನಾವೂ ಸಜ ಮನವಿ ಮಾಡಿದೆವು. ಹೀಗಾಗಿ ಹಿರಿಯರು ಹಾಗೂ ನಿರ್ದೇಶಕರಿಗೆ ಗೌರವ ಕೊಟ್ಟು ರಾಜೀನಾಮೆ ನೀಡಿದ್ದಾರೆ. ಅಕ್ಟೋಬರ್ ಅಂತ್ಯದ ಒಳಗೆ ಹೊಸ ಅಧ್ಯಕ್ಷರ ‌ಆಯ್ಕೆ ಆಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 

ವಿಜಯೇಂದ್ರ ವಿರುದ್ಧ ಸಿಡಿದೆದ್ದ ಸಹೋದರ ರಮೇಶ್‌ಗೆ ಟಾಂಗ್‌ ಕೊಟ್ಟ ಬಾಲಚಂದ್ರ ‌ಜಾರಕಿಹೊಳಿ

ಜಿಲ್ಲೆಯ ಹಿರಿಯ ಪ್ರಭಾಕರ ಕೋರೆ,‌ ಲಕ್ಷ್ಮಣ ಸವದಿ, ರಮೇಶ ಕತ್ತಿ, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆ ಆಗುತ್ತದೆ. ರಮೇಶ ಕತ್ತಿ ಅವರ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್‌ಗೆ 30 ಕೋಟಿ ಲಾಭ ಆಗಿದೆ. ಹಿರಿಯರ ವಿನಂತಿಯ ಮೇರೆಗೆ ರಮೇಶ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಬ್ಯಾಂಕ್, ರೈತರು, ಗ್ರಾಹಕರ ಹಿತ ದೃಷ್ಟಿಯಿಂದ ಹೊಸ ಅಧ್ಯಕ್ಷರ ಆಯ್ಕೆ ಮಾಡ್ತಿವಿ ಎಂದು ತಿಳಿಸಿದ್ದಾರೆ. 

ರಮೇಶ ಕತ್ತಿ ಸುದ್ದಿಗೋಷ್ಠಿಗೇಕೆ ಬಂದಿಲ್ಲ ಎಂಬ ಪ್ರಶ್ನೆ ವಿಚಾರದ ಬಗ್ಗೆ ಸ್ಪಷ್ಟಪಸಿಡಿದ ಬಾಲಚಂದ್ರ ಜಾರಕಿಹೊಳಿ ಅವರು, ಹೊಸ ಅಧ್ಯಕ್ಷರ ಆಯ್ಕೆಯಲ್ಲಿ ಅವರು ಇರ್ತಾರೆ ಎಂದು ಹೇಳಿದ್ದಾರೆ.  ರಮೇಶ ಕತ್ತಿ ವಿರುದ್ಧ ಅಸಮಾಧಾನ ವ್ಯಕ್ತವಾಯಿತು ಎಂಬ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಮೆಂಬರ್ಶಿಪ್ ಮಾಡುವ ವಿಚಾರದಲ್ಲಿ ನಾವೆಲ್ಲರೂ ಸೇರಿದ್ವಿ. ಅದಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಎಲ್ಲರೂ ಸೇರಿ ಒಂದು ಸಂಸ್ಥೆ ನಡೆಸುವಾಗ ಭಿನ್ನಾಭಿಪ್ರಾಯ ಇರುತ್ತೆ. ಬ್ಯಾಂಕ್ ಸರಿ ನಡೆಸಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಬದಲಾವಣೆ ಮಾಡಿಲ್ಲ. 9 ವರ್ಷ ಅವರು ಬ್ಯಾಂಕ್ ಅಧ್ಯಕ್ಷರಾಗಿದ್ದರು. ಭಿನ್ನಾಭಿಪ್ರಾಯ ಇದ್ದೆ ಇರುತ್ತೆ ಅದೇ ಕಾರಣಕ್ಕೆ ಅವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದು ಸುಳ್ಳು ಎಂದಿದ್ದಾರೆ. 

ಹೊಸ ಅಧ್ಯಕ್ಷರು ಒಂದು ವರ್ಷದಲ್ಲಿ ಏನು ಸಾಧನೆ ಮಾಡ್ತಾರೆ ಎಂಬ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಾರಕಿಹೊಳಿ, ಏನು ಬೇಕಾದರೂ ಮಾಡಬಹುದು 6 ತಿಂಗಳಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. 50 ಕೋಟಿ ಲಾಭ ಮಾಡಲು ನಾವು ಪ್ರಯತ್ನ ಮಾಡ್ತಿವಿ ಎಂದು ತಿಳಿಸಿದ್ದಾರೆ. 

ನಿಪ್ಪಾಣಿ ಕ್ಷೇತ್ರದಲ್ಲಿ ಮೆಂಬರ್ಶಿಪ್ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಅದನ್ನ ನಿನ್ನೆಯೂ ಸಹ ಮಾತನಾಡುವಾಗ ನಾನು ಹೇಳಿದ್ದೆ ಭಿನ್ನಾಭಿಪ್ರಾಯ ಇತ್ತು ಎಂದು ಹೇಳಿದ್ದಾರೆ. 

ನಾನು ಅಧ್ಯಕ್ಷ ಸ್ಥಾನದಿಂದ ಇಳಿದರೆ 400 ಕೋಟಿ ಲಾಸ್ ಆಗುತ್ತೆ ಎಂಬ ರಮೇಶ ಕತ್ತಿ ಹೇಳಿಕೆ ‌ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಹಾಗೆ ಯಾವುದು ಆಗುದಿಲ್ಲ. ಬೀರೆಶ್ವರ ಸಂಸ್ಥೆಯಿಂದ 250 ಕೋಟಿ ರೂ. ಜೊಲ್ಲೆಯವರು ಡಿಪಾಸಿಟ್ ಮಾಡಿದ್ದಾರೆ. ಇನ್ನು ಹೆಚ್ಚಿನ ಠೇವಣಿಯನ್ನು ನಾವು ಸಂಗ್ರಹ ಮಾಡ್ತಿವಿ ಎಂದಿದ್ದಾರೆ. 

ಬೆಳಗಾವಿ: ಪುಷ್ಪಾ ಚಿತ್ರದ ಮಾದರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್, ಖದೀಮರ ಐಡಿಯಾಗೆ ದಂಗಾದ ಅಧಿಕಾರಿಗಳು..!

ರಮೇಶ ಕತ್ತಿ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆ ಕೇಳಿದಾಗ, 10 ಕೆಲಸ ಹೇಳಿದಾಗ 10 ಕೆಲಸ ಮಾಡೋಕೆ ಆಗಲ್ಲ. ಮಾಧ್ಯಮಗಲ್ಲಿ ಬೇರೆ ಬೇರೆ ರೀತಿಯ ಸುದ್ದಿ ಬರ್ತಿರೋದಕ್ಕೆ ಅವರು ಬೇಜಾರಾಗಿದ್ದಾರೆ. ಏಕಾಏಕಿ ಅಧ್ಯಕ್ಷರ ಬದಲಾವಣೆ ಆಗ್ತಿರೋದು ಜನರ ಮೇಲೆ ಪ್ರಭಾವ ಬಿರುತ್ತೆ ಎಂಬ ವಿಚಾರಕ್ಕೆ ಮಾತನಾಡಿ ಜಾರಕಿಹೊಳಿ, ಯಾವುದೇ ಪ್ರಭಾವ ಬೀರಲ್ಲ ಎಲ್ಲವೂ ಸುಸೂತ್ರವಾಗಿ ನಡೆಯುತ್ತೆ. ಹೆಚ್ಚು ಡಿಪಾಸಿಟ್ ಮಾಡ್ತಿವಿ, ಸಾಲವನ್ನೂ ಸಹ ಹೆಚ್ಚು ಕೊಡ್ತಿವಿ ಎಂದಿದ್ದಾರೆ. 

ಅನೇಕ ಸಕ್ಕರೆ ಕಾರ್ಖಾನೆಗಳು ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದು ಮರಳಿಸದ ವಿಚಾರದ ಬಗ್ಗೆ ಮಾತನಾಡಿ ಬಾಲಚಂದ್ರ ಜಾರಕಿಹೊಳಿ ಅವರು, ಎಲ್ಲವೂ ಸಹ ರಿಕವರಿ ಪ್ರಾರಂಭ ಆಗಿದೆ, ಆಡಿಟ್ ನಲ್ಲಿ ಎಲ್ಲವೂ ಬರುತ್ತದೆ. ಬಾಲಚಂದ್ರ ಜಾರಕಿಹೊಳಿ, ಜಾರಕಿಹೊಳಿ ಕುಟುಂಬದ ಯಾರೂ ಅಧ್ಯಕ್ಷರಾಗಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. 

Latest Videos
Follow Us:
Download App:
  • android
  • ios