ಹೈಕಮಾಂಡ್ ನಾಯಕರೇ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ಡಿಸಿಜನ್ ನಾನು ಒಪ್ಪುತ್ತೇನೆ. ಭಿನ್ನಾಭಿಪ್ರಾಯ ಎಲ್ಲ ಪಕ್ಷಗಳಲ್ಲೂ ಇರುತ್ತದೆ, ಶಾಸಕಾಂಗ ‌ಸಭೆಯಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ವಿಜಯೇಂದ್ರ ವಿರುದ್ಧ ಸಿಡಿದಿರುವ ಸಹೋದರ ರಮೇಶ್‌ಗೆ ‌ಟಾಂಗ್ ಕೊಟ್ಟ ಬಾಲಚಂದ್ರ ಜಾರಕಿಹೊಳಿ  

ಬೆಳಗಾವಿ(ಅ.03): ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ‌ರಾಜೀನಾಮೆ ಕೊಡಲ್ಲ ಅಂದ್ರೆ ಏನು ಮಾಡೋಕೆ‌ ಆಗುತ್ತೆ ಹೇಳಿ. ಈ‌ ಹಿಂದೆ ಆರೋಪಗಳು ಕೇಳಿ ಬಂದರೆ, ಸಣ್ಣ ರೈಲ್ವೆ ಅಪಘಾತ ಆದ್ರೆ ರಾಜೀನಾಮೆ ನೀಡ್ತಿದ್ದರು. ನೈತಿಕ ಹೊಣೆ ಹೊತ್ತು ಈ‌ ಮೊದಲು ರಾಜೀನಾಮೆ ನೀಡ್ತಿದ್ದರು. ಆದರೀಗ ಎಂಥ ದೊಡ್ಡ ಆರೋಪ‌ ಕೇಳಿ ಬಂದರೂ ರಾಜೀನಾಮೆಗೆ ಯಾರೂ ಮುಂದಾಗ್ತಿಲ್ಲ ಎಂದು ಬಿಜೆಪಿ ‌ಶಾಸಕ ಬಾಲಚಂದ್ರ ‌ಜಾರಕಿಹೊಳಿ ಹೇಳಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ‌ಶಾಸಕ ಬಾಲಚಂದ್ರ ‌ಜಾರಕಿಹೊಳಿ ಅವರು, ರಾಜೀನಾಮೆ ಕೊಡಬೇಕೋ? ಬೇಡವೋ ಎಂಬುದು ಅವರ ಮನಸ್ಸಿಗೆ ಬಿಟ್ಟ ವಿಚಾರವಾಗಿದೆ. ಮುಖ್ಯಮಂತ್ರಿಗಳ ಕೈಕೆಳಗೆ ಲೋಕಾಯುಕ್ತ ಕೆಲಸ ಮಾಡಬೇಕಾಗುತ್ತದೆ. ಹೀಗಿದ್ದರೂ ಸಿಎಂ ರಾಜೀನಾಮೆ ಕೊಡಲ್ಲ ಅಂದ್ರೆ ಏನು ಮಾಡಬೇಕು ಹೇಳಿ ಎಂದು ಪ್ರಶ್ನಿಸಿದ್ದಾರೆ. 

ಬಿಜೆಪಿ ಶುದ್ಧೀಕರಣಕ್ಕೆ ಈಶ್ವರಪ್ಪ ಮನೆಯಲ್ಲಿ ಸಭೆ: ಶಾಸಕ ರಮೇಶ್‌ ಜಾರಕಿಹೊಳಿ

ಹೈಕಮಾಂಡ್ ನಾಯಕರೇ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ಡಿಸಿಜನ್ ನಾನು ಒಪ್ಪುತ್ತೇನೆ. ಭಿನ್ನಾಭಿಪ್ರಾಯ ಎಲ್ಲ ಪಕ್ಷಗಳಲ್ಲೂ ಇರುತ್ತದೆ, ಶಾಸಕಾಂಗ ‌ಸಭೆಯಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ವಿಜಯೇಂದ್ರ ವಿರುದ್ಧ ಸಿಡಿದಿರುವ ಸಹೋದರ ರಮೇಶ್ ಜಾರಕಿಹೊಳಿಗೆ ಬಾಲಚಂದ್ರ ‌ಟಾಂಗ್ ಕೊಟ್ಟಿದ್ದಾರೆ.