ಬೆಳಗಾವಿಗೆ ಗುಜರಿ ಬಸ್‌ಗಳೇ ಗತಿ: ಅಭಯ ಪಾಟೀಲ

ಉತ್ತರ ಕರ್ನಾಟಕ ಅಂದರೆ ಗುಜರಿ ಗೋದಾಮು ಅಲ್ಲ. ಹಳೆಯ ಬಸ್‌ಗಳನ್ನು ಪೇಂಟ್‌ ಮಾಡಿ ಕಳಿಸಿ ಉತ್ತರ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ. ನಮಗೂ ಹೊಸ ಬಸ್‌ಗಳನ್ನು ನೀಡಬೇಕು. ಈ ರೀತಿ ಹಳೆಯ ಗುಜರಿ ಬಸ್‌ಗಳನ್ನು ಕಳಿಸಿ ಅಪಮಾನ ಮಾಡುವಂತದ್ದು ಸರಿಯಲ್ಲ. ಇದೇನು ಗುಜರಿ ಗೋದಾಮು ಅಲ್ಲ. ಬೆಳಗಾವಿಗೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಕಳಿಸಬೇಕು: ಅಭಯ ಪಾಟೀಲ. 

BJP MLA Abhay Patil Talks Over NWKRTC Buses grg

ಬೆಳಗಾವಿ(ಜ.25):  ರಾಜ್ಯ ಸರ್ಕಾರ ಬಸ್‌ಗಳ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಿದ್ದು, ಬಿಎಂಟಿಸಿಗೆ ಹೊಸ ಬಸ್‌ಗಳನ್ನು ನೀಡಿದ್ದರೆ, ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬೆಳಗಾವಿ, ಹುಬ್ಬಳ್ಳಿ ವಿಭಾಗಕ್ಕೆ ಗುಜರಿ ಬಸ್‌ಗಳನ್ನು ನೀಡಲಾಗಿದೆ. ಈ ಮೂಲಕ ಸರ್ಕಾರ ಬೆಂಗಳೂರಿಗೆ ಬೆಣ್ಣೆ, ಬೆಳಗಾವಿಗೆ ಸುಣ್ಣ ಎಂಬ ನಡೆ ಅನುಸರಿಸುತ್ತಿದೆ. ಬೆಂಗಳೂರಿನಲ್ಲಿ ಓಡಾಡಿದ ಬಸ್‌ಗಳನ್ನೇ ಬೆಳಗಾವಿಗೆ ರವಾನಿಸಲಾಗಿದೆ. ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಹುಬ್ಬಳ್ಳಿ, ಬೆಳಗಾವಿ ವಿಭಾಗಕ್ಕೆ ತಲಾ 50 ಹಳೆಯ ಬಿಎಂಟಿಸಿ ಬಸ್‌ಗಳನ್ನು ಸಾರಿಗೆ ಇಲಾಖೆ ನೀಡಿದೆ. ಬಿಎಂಟಿಸಿಗೆ ಕೋಟ್ಯಂತರ ರು. ಖರ್ಚು ಮಾಡಿ ಹೊಸ ಬಸ್‌ ಖರೀದಿಸಲಾಗಿದೆ. ಗುಜರಿ ಬಸ್‌ಗಳನ್ನು ಬೆಳಗಾವಿ, ಹುಬ್ಬಳ್ಳಿಗೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

5-6 ಲಕ್ಷ ಕಿ.ಮೀ ರನ್ನಿಂಗ್‌ ಆಗಿರುವ ಬಸ್‌ ಬೆಳಗಾವಿ, ಹುಬ್ಬಳಿಗೆ ರವಾನಿಸಲಾಗಿದ್ದು, ಅದರಲ್ಲಿ ಬೆಳಗಾವಿ ವಿಭಾಗವೊಂದರಲ್ಲೇ 10 ಲಕ್ಷ ಕಿ.ಮೀಗೂ ಹೆಚ್ಚು ಓಡಿದ 300 ಬಸ್‌ಗಳಿವೆ. ಬಹಳ ಹಳೆಯ ಬಸ್‌ಗಳಿದ್ದರೂ ಬದಲಾವಣೆಗೆ ಸಾರಿಗೆ ಇಲಾಖೆ ಮುಂದಾಗಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪುನೀತ್‌ ಪ್ರೇರಣೆ: ಚಿಕ್ಕೋಡಿಯಲ್ಲಿ 105 ಜನರಿಂದ ನೇತ್ರದಾನ ವಾಗ್ದಾನ

ಬೆಳಗಾವಿ ಡಿಪೋ ನಂಬರ 2ಕ್ಕೆ 50 ಹಳೆಯ ಬಿಎಂಟಿಸಿ ಬಸ್ಗಳನ್ನು ಸಾರಿಗೆ ಇಲಾಖೆ ನೀಡಿದ್ದು, ಸದ್ಯ ಬಸ್‌ಗಳು ನಗರದಿಂದ ತಾಲೂಕು ವ್ಯಾಪ್ತಿಯಲ್ಲಿಸಂಚಾರ ಮಾಡುತ್ತಿವೆ. ಬೆಳಗಾವಿ ನಗರದಿಂದ ರಾಮತೀರ್ಥ ನಗರ ಮಧ್ಯೆ ಸಂಚರಿಸುತ್ತಿದ್ದಬಸೇಏಮ ಫುಟ್ರೆಸ್ಟ್‌ ತುಂಡಾಗಿತ್ತು. ಫುಟ್ರೆಸ್ಟತುಂಡಾಗಿರುವ ಬಸ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದೃಷ್ಟವಶಾತ ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸಾರಿಗೆ ಇಲಾಖೆ ನೀಡಿರುವ ಬಸ್‌ಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಸಂಚಾರ ಮಾಡುತ್ತಾರೆ. ಬಸಗಳಲ್ಲಿಏನಾದರೂ ಅನಾಹುತ ಆದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕ್ರಮಕ್ಕೆ ಶಾಸಕ ಅಭಯ ಪಾಟೀಲ ಒತ್ತಾಯ

ಹಳೆಯ ಬಸ್‌ಗಳನ್ನು ಬೆಳಗಾವಿಗೆ ಕಳಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದ್ದಾರೆ. ಉತ್ತರ ಕರ್ನಾಟಕ ಅಂದರೆ ಗುಜರಿ ಗೋದಾಮು ಅಲ್ಲ. ಹಳೆಯ ಬಸ್‌ಗಳನ್ನು ಪೇಂಟ್‌ ಮಾಡಿ ಕಳಿಸಿ ಉತ್ತರ ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ. ನಮಗೂ ಹೊಸ ಬಸ್‌ಗಳನ್ನು ನೀಡಬೇಕು. ಈ ರೀತಿ ಹಳೆಯ ಗುಜರಿ ಬಸ್‌ಗಳನ್ನು ಕಳಿಸಿ ಅಪಮಾನ ಮಾಡುವಂತದ್ದು ಸರಿಯಲ್ಲ. ಇದೇನು ಗುಜರಿ ಗೋದಾಮು ಅಲ್ಲ. ಬೆಳಗಾವಿಗೂ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಕಳಿಸಬೇಕು. ಬೆಳಗಾವಿ ಎರಡನೇ ರಾಜಧಾನಿ ಎನ್ನುತ್ತೇವೆ. ಸುವರ್ಣಸೌಧ ಕಟ್ಟಿದ್ದೇವೆ ಎನ್ನುತ್ತೇವೆ. ಅದೇ ರೀತಿ ಉಪಕರಣಗಳ ಕಳಿಸುವ ಕೆಲಸವಾಗಬೇಕು. ಈ ರೀತಿಯ ಗುಜರಿ ಬಸ್‌ಗಳನ್ನು ಸ್ವೀಕರಿಸಬಾರದು. ಹೊಸ ಬಸ್‌ಗಳನ್ನು ನೀಡಬೇಕು ಒತ್ತಾಯಿಸಿದರು.

Latest Videos
Follow Us:
Download App:
  • android
  • ios