ಮಂಗಳೂರು(ಜೂ.24): ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕವಾಗಿ ಬೆರೆಯುವ ಜನಪ್ರತಿನಿಧಿಗಳು ಹೆಚ್ಚಿನ ಜಾಗೃತೆ ವಹಿಸುವ ಅಗತ್ಯವಿದೆ. ಸಚಿವ ಸುಧಾಕರ್ ಕ್ವಾರೆಂಟೈನ್ ಆದ ಬೆನ್ನಲ್ಲೇ ಇದೀಗ ಶಾಸಕ ಯು. ಟಿ. ಖಾದರ್ ಕ್ವಾರೆಂಟೈನ್ ಆಗಬೇಕೆಂಬ ಒತ್ತಾಯ ಕೇಳಿಬಂದಿದೆ.

ಪಿಪಿಇ ಕಿಟ್ ಧರಿಸದೇ ಮಾಜಿ ಸಚಿವ ಖಾದರ್ ಅವರು ಅಂತ್ಯಕ್ರಿಯೆಯಲ್ಲಿ‌ ಪಾಲ್ಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಖಾದರ್ ಕ್ವಾರೆಂಟೈನ್‌ಗೆ ಒಳಪಡಿಸಿ ಆರೋಗ್ಯ ತಪಾಸಣೆಗೆ ಆಗ್ರಹಿಸಲಾಗಿದೆ.

ಕ್ವಾರೆಂಟೈನ್‌ನಲ್ಲಿರುವ ಪೊಲೀಸರಿಗೆ ಯೋಗ ಟೀಚರ್ ಆದ IPS ಅಲೋಕ್ ಕುಮಾರ್

ಮಂಗಳೂರು ಬಿಜೆಪಿ ಮುಖಂಡರು ಖಾದರ್ ಕ್ವಾರೆಂಟೈನ್‌ಗೆ ಆಗ್ರಹಿಸಿದ್ದು, ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಒತ್ತಾಯಿಸಿದ್ದಾರೆ. ಖಾದರ್ ಪಿಪಿಇ ಕಿಟ್ ಧರಿಸದೇ ದಫನ ಕ್ರಿಯೆಯಲ್ಲಿ‌ ಪಾಲ್ಗೊಂಡಿದ್ದಾರೆ. ಈ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಾರ್ವಜನಿಕ ಸಂಪರ್ಕದಲ್ಲಿರೋ ವ್ಯಕ್ತಿ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ರೆ ಮುಂದೆ ನಿಮ್ಮ ವಿರುದ್ದ ಪ್ರತಿಭಟಿಸುತ್ತೇವೆ. ರಾಜ್ಯದ ಸಚಿವರೇ ಜನರಿಗೆ ಸಮಸ್ಯೆ ಆಗುತ್ತೆ ಎಂದು ಕ್ವಾರೆಂಟೈನ್ ಆಗಿದ್ದಾರೆ. ಆದರೆ ಖಾದರ್ ಜವಾಬ್ದಾರಿಯುತ ಶಾಸಕನಾಗಿ ಜನರಿಗೆ ತಪ್ಪು ಸಂದೇಶ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.

ನಮ್ಮ ಮೆಟ್ರೋ ಸಂಚಾರ ಪುನರಾರಂಭ ಬಗ್ಗೆ ನಾಳೆ ಮಹತ್ವದ ನಿರ್ಧಾರ..!

ಅವರು ಮುಂಜಾಗ್ರತೆ ವಹಿಸಿ ಪಿಪಿಇ ಕಿಟ್ ಬಳಸಿ ಪಾಲ್ಗೊಳ್ಳಬೇಕಿತ್ತು. ಹೀಗಾಗಿ ತಕ್ಷಣ ಅವರು ಕ್ವಾರೆಂಟೈನ್ ಆಗಿ ಆರೋಗ್ಯ ಪರೀಕ್ಷಿಸಭೇಕಾಗಿದೆ ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.