ಶ್ರೀನಗರ(ಜು.21): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಿವುದು, ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ. ಇದೀಗ ಶ್ರೀನಗರದ ಉರ್ದು ಪತ್ರಿಕೆ ಜನರಲ್ಲಿ ಜಾಗೃತಿ ಮೂಡಿಸಲು ದಿನ ಪತ್ರಿಕೆಯ ಮೊದಲ ಪುಟದಲ್ಲಿ ಮಾಸ್ಕ್ ಇಟ್ಟು ನೀಡುತ್ತಿದೆ.

ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಅಪಾಯಕಾರಿ: ಕೇಂದ್ರದ ವಾರ್ನಿಂಗ್!..

ಜಮ್ಮ ಮುತ್ತು ಕಾಶ್ಮೀರದ ಶ್ರೀನಗರದಲ್ಲಿ ರೋಶ್ನಿ ಉರ್ದು ಪತ್ರಿಕೆ ಜನಪ್ರಿಯವಾಗಿದೆ. ಕೊರೋನಾ ವಕ್ಕರಿಸಿದ ಬಳಿಕ ದಿನಪತ್ರಿಕೆ ಖರೀದಿಸುವ ಗ್ರಾಹಕರಿಗೆ ಅಚ್ಚರಿ ಕಾದಿತ್ತು.  ಕಾರಣ ದಿನಪತ್ರಿಕೆ ಮೊದಲ ಪುಟದಲ್ಲಿ ಉಚಿತ ಮಾಸ್ಕ್ ಇಡಲಾಗಿದೆ. ಇಷ್ಟೇ ಅಲ್ಲ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಕೊರೋನಾ ತಗುಲದಂತೆ ಎಚ್ಚರ ವಹಿಸಿಕೊಳ್ಳಿ ಎಂದು ಬರೆಯಾಗಿದೆ. ಈ ಮೂಲಕ ಕೊರೋನಾ ವಿರುದ್ಧ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕಾ ಕ್ರಮಗಳ ಬಗ್ಗೆ ದಿನಪತ್ರಿಕೆ ಒತ್ತಿ ಹೇಳುತ್ತಿದೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿತ್ತು. ಇಷ್ಟೇ ಅಲ್ಲ ಹಲವರು ಮಾಸ್ಕ್ ಖರೀದಿಸುವ ಗೋಜಿಗೆ ಹೋಗುವಿದಿಲ್ಲ. ಹೀಗಾಗಿ ನಮ್ಮ ಓದುಗರಿಗೆ ಉಚಿತ ಮಾಸ್ಕ್ ನೀಡಲು ನಿರ್ಧರಿಸಿದೆವು. ಈ ಕಾರ್ಯದಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ರೋಶ್ನಿ ದಿನಪತ್ರಿಕೆ ಸಂಪಾದಕ ಝಹೂರ್ ಶೊಹ್ರಾ ಹೇಳಿದ್ದಾರೆ.

ರೋಶ್ನಿ ದಿನ ಪತ್ರಿಕೆಯ ಬೆಲೆ ಕೇವಲ 2 ರೂಪಾಯಿ ಮಾತ್ರ. 2 ರೂಪಾಯಿಗೆ ದಿನ ಪತ್ರಿಕೆ ಜೊತೆಗೆ ಉಚಿತ ಮಾಸ್ಕ್ ಕೂಡ ಓದುಗರಿಗೆ ಸಿಗಲಿದೆ. ಈ ವಿಶೇಷ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರೋಶ್ನಿ ದಿನಪತ್ರಿಕೆ ಸಂಚಲನ ಮೂಡಿಸಿದೆ.