ಚನ್ನಪಟ್ಟಣ [ಜ.30]:  ಜೆಡಿಎಸ್‌ ಕುಸಿಯುತ್ತಿರುವ ಗುಡ್ಡೆ ಇದ್ದಂತೆ. ಆ ಪಕ್ಷದ ಬಗ್ಗೆ ನಾನೇನೂ ಮಾತಾಡುವುದಿಲ್ಲ. ಅವರು ತಮ್ಮ ಗುಡ್ಡೆಯನ್ನು ಗಟ್ಟಿಯಾಗಿ ನಿಲ್ಲಿಸಿಕೊಳ್ಳಲಿ ಎಂದು ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಜೆಡಿಎಸ್‌ ವರಿಷ್ಠರಿಗೆ ಹೆಸರೇಳದೆ ಟಾಂಗ್‌ ನೀಡಿದರು.

ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ ತೊರೆದವರಲ್ಲಿ ನಾನು ಮೊದಲಿಗನೂ ಅಲ್ಲ, ಕೊನೆಯವನೂ ಅಲ್ಲ. ಯಾರು ಏನೇನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ನಾನು ಹೆಚ್ಚೇನು ಮಾತನಾಡುವುದಿಲ್ಲ ಎಂದರು.

ಯಾಕೆ ಬಿಟ್ಟೆವು ಎಂಬುದು ನಮಗಷ್ಟೇ ಗೊತ್ತು:

ಅತ್ತೆ, ಸೊಸೆ ನಡುವಿನ ಜಗಳದಲ್ಲಿ ಯಾರು ಯಾರಿಗೆ ಕಾಟ ಕೊಟ್ಟರು, ಯಾರು ಕೊಡಲಿಲ್ಲ ಎಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಅದೇ ರೀತಿ ನಾನು ಮತ್ತು ಪಕ್ಷದ ನಡುವೆ ಏನಾಯಿತು ಎಂಬುದು ನಮಗಷ್ಟೇ ಗೊತ್ತು. ಅದನ್ನು ನಾನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಇಷ್ಟಪಡುವುದಿಲ್ಲ ಎಂದು ತಿಳಿಸಿದರು.

ನಾನು ಯಾವ ಪಕ್ಷದಲ್ಲಿ ಇದ್ದರೂ ಆ ಪಕ್ಷಕ್ಕೆ ಪ್ರಾಮಾಣಿಕವಾಗಿ ಇದ್ದೇನೆ. ನನ್ನ ಮಾತಿನಲ್ಲಿ ಸುಳ್ಳಿಲ್ಲ. ನಡವಳಿಕೆಯಲ್ಲಿ ದೋಷವಿಲ್ಲ. ನಾನು ಸಾರ್ವಜನಿಕರಿಗೆ ಮೋಸಮಾಡಿಲ್ಲ. ಇದ್ದಷ್ಟುದಿನ ನಿಷ್ಟೆಯಿಂದ ಕೆಲಸ ಮಾಡಿದ್ದೇನೆ. ನನ್ನ ನಡವಳಿಕೆಯಲ್ಲಿ ಯಾವುದೇ ದೋಷವಿದೆ. ನಾನು ಸಾರ್ವಜನಿಕರಿಗೆ ವಂಚನೆ ಮಾಡಿದ್ದೇನೆ ಎಂದು ಯಾರಾದರೂ ಸಾಬೀತು ಪಡಿಸಿದರೆ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜನತೆಯೇ ತೀರ್ಮಾನಿಸುತ್ತಾರೆ:

ರಾಜಕಾರಣಿಗಳ ನಡವಳಿಕೆಯನ್ನು ಮಾಧ್ಯಮಗಳು ಎತ್ತಿ ತೋರಿಸುತ್ತಿವೆ. ಅದೇ ರೀತಿ ನನ್ನ ನಡವಳಿಕೆಯನ್ನು ಮಾಧ್ಯಮಗಳು ಪ್ರದರ್ಶಿಸುತ್ತಿದ್ದು, ನನ್ನದು ತಪ್ಪಿದ್ದರೆ ಜನತೆಯೇ ತೀರ್ಮಾನಿಸುತ್ತಾರೆ. ನನ್ನ ಶಿಕ್ಷಕ ಬಂಧುಗಳು ಅತ್ಯಂತ ಸೂಕ್ಷ್ಮ ಮನಸ್ಥಿತಿ ಮತ್ತು ಪ್ರಜ್ಞಾವಂತರು. ನನ್ನದು ಏನಾದರೂ ತಪ್ಪಿದ್ದರೆ ಅವರೇ ತೀರ್ಪು ನೀಡುತ್ತಾರೆ ಎಂದರು.

ಭಾರತದ ಮುಸ್ಲಿಮರಿಗಿಂತ ಕಾಂಗ್ರೆಸ್‌ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ'.

ಬಿಜೆಪಿಯಿಂದ ಗೆಲುವು ಸುಲಭವಾಗಿದೆ:

ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿಯುತ್ತಿದ್ದು, ಕಳೆದ ಮೂರು ಚುನಾವಣೆಗಳಲ್ಲಿ ನನಗೆ ಬಿಜೆಪಿಯೇ ಪೈಪೋಟಿ ನೀಡಿತ್ತು. ಇದೀಗ ನಾನು ಬಿಜೆಪಿಯಿಂದಲೇ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ನನ್ನ ಗೆಲುವು ಸುಲಭವಾಗಿದೆ. ಈಗಾಗಲೇ ಯಡಿಯೂರಪ್ಪ ಅವರು ನಾನೇ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದಾರೆ ಎಂದರು.

ಸಚಿವ ಸಂಪುಟ ವಿಸ್ತರಣೆಗೆ ಜಾತಿ ಲೆಕ್ಕಾಚಾರ: ಇಲ್ಲಿದೆ ಬಿಜೆಪಿ ಲೆಕ್ಕ...

ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದಾಗ ಸಾಕಷ್ಟುಪೈಪೋಟಿ ಏರ್ಪಡುತಿತ್ತು. ಬೆಂಗಳೂರು ಶಿಕ್ಷಕರ ವಿಧಾನಪರಿಷತ್‌ ಕ್ಷೇತ್ರಕ್ಕೆ 32 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಇದರಲ್ಲಿ ಬಹುಪಾಲು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ನನ್ನ ಕೆಲಸ ನೋಡಿ ಶಿಕ್ಷಕರು ಗೆಲ್ಲಿಸಿಕೊಂಡು ಬರುತ್ತಿದ್ದರು. ಇದೀಗ ಬಿಜೆಪಿ ಮತ್ತು ಶಿಕ್ಷಕರ ಬೆಂಬಲ ದೊರೆತಿದೆ ಎಂದು ತಿಳಿಸಿದರು.

ಬಿರುಸಿನ ಪ್ರಚಾರ:

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ತಾಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ತೆರಳಿ ಪ್ರಚಾರ ನಡೆಸಿದ ಅವರು, ಶಿಕ್ಷಕರನ್ನು ಭೇಟಿ ಮಾಡಿ ಮತನೀಡುವಂತೆ ಕೋರಿದರು. ಕೆಲ ಶಾಲಾ ಕಾಲೇಜುಗಳಲ್ಲಿ ಪುಟ್ಟಣ್ಣ ಅವರಿಗೆ ಹಾರುತುರಾಯಿ ಹಾಕಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಕೆ.ಪಿ.ಕಾಂತರಾಜು, ಕುವೆಂಪು ಮಹಾವಿದ್ಯಾಲಯದ ಕಾರ್ಯದರ್ಶಿ ಮಹೇಶ್‌ ಚಂದ್ರ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಜಶೇಖರ್‌, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಇನ್ನೂ ಮುಂತಾದವರು ಉಪಸ್ಥಿತರಿದ್ದರು.