ಚಿಂತಾಮಣಿ(ಮೇ.02): ಎಪಿಎಂಸಿ ಮಾಜಿ ಅಧ್ಯಕ್ಷ ಬೋರ್‌ವೆಲ್‌ ನಾರಾಯಣಸ್ವಾಮಿ ಮಾಜಿ ಶಾಸಕ ಎಂ.ಸಿ.ಸುಧಾಕರ್‌ ಬಣ ತೊರೆದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಶುಕ್ರವಾರ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ತಾಲೂಕಿನ ಮುನಗನಹಳ್ಳಿ ಸಮೀಪದ ಬೆಂಗಳೂರು ವಯಾ ಮದನಪಲ್ಲಿ ಹೆದ್ದಾರಿ ಬೈಪಾಸ್‌ ರಸ್ತೆಯಲ್ಲಿರುವ ಜೆಡಿಎಸ್‌ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನಿವಾಸಕ್ಕೆ ಮಾರ್ಗ ಮದ್ಯೆ ತೆರಳುವ ವೇಳೆ ಬೇಟಿ ನೀಡಿದ್ದಾಗ ಅಗಮಿಸಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿಗೆ ಹೂಮಾಲೆ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ತೆರಳಿದರು.

ಲಾಕ್‌ಡೌನ್‌: ನೊಂದವರ ನೋವಿಗೆ ಮಿಡಿದ ಶಾಸಕ ಮನಗೂಳಿ

ಬೋರ್‌ವೆಲ್‌ ನಾರಾಯಣಸ್ವಾಮಿ ಪುತ್ರಿ ತಾ.ಪಂ. ಸದಸ್ಯೆ ಶಿಲ್ಪ ಅವರನ್ನು ತಾಪಂನ ಎರಡನೇ ಅವಧಿಗೆ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿಲ್ಲವೆಂದು ಅವರು ಬೆಸತ್ತು ಮಾಜಿ ಶಾಸಕ ಸುಧಾಕರ್‌ ಬಣ ತೊರೆದು ಜೆಡಿಎಸ್‌ ಬೆಂಬಲಿಸಿದ್ದಾರೆಂದು ಮಾಜಿ ಶಾಸಕರ ಬೆಂಬಲಿಗರೊಬ್ಬರು ತಿಳಿಸಿದ್ದಾರೆ. ಜೆಡಿಎಸ್‌ ಜಿಲ್ಲಾದ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ . ಶಾಸಕ ಜೆ.ಕೆ.ಕೃಷ್ಣಾರೆಡ್ಡಿ , ಮಾಜಿ ನಗರಸಭೆ ಸದಸ್ಯರಾದ ಕೌನ್ಸಲರ್‌ ವೆಂಕಟೇಶ್‌ ಇದ್ದರು.