ಬಿಜೆಪಿ ಸೇರಲು ಆಫರ್ ಮಾಡಿ ಮಾಡಿದ್ರಾ ಕಾಂಗ್ರೆಸ್ ಶಾಸಕ ?

ಕಾಂಗ್ರೆಸಿಗರೋರ್ವರು ಬಿಜೆಪಿ ಸೇರಲು ಆಫರ್ ಮಾಡಿದ್ದರು. ಹೀಗೆಂದು ಬಿಜೆಪಿ ಮಾಜಿ ಶಾಸಕರೋರ್ವರು ಆರೋಪ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಆಣೆ ಪ್ರಮಾಣದ ಸವಾಲನ್ನೂ ಹಾಕಿದ್ದಾರೆ.

BJP Leader Jeevaraj Challenge To Congress Sringeri Congress MLA Rajegowda

ಚಿಕ್ಕಮಗಳೂರು [ಡಿ.28] :  ಡಿಮ್ಯಾಂಡ್ ಜಾಸ್ತಿ ಮಾಡಿಕೊಳ್ಳಲು ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ರಾಜೇಗೌಡ ಧರ್ಮಸ್ಥಳಕ್ಕೆ ಹೋಗಿದ್ದರು. ಇಲ್ಲ ಎಂದಾದಲ್ಲಿ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಿಜೆಪಿ ಮುಖಂಡ ಡಿ ಎನ್ ಜೀವರಾಜ್ ಚಾಲೇಂಜ್ ಹಾಕಿದ್ದಾರೆ. 

ಚಿಕ್ಕಮಗಳೂರಿನ ಕೊಪ್ಪದಲ್ಲಿ ಮಾತನಾಡಿದ ಜೀವರಾಜ್  ಹಾಲಿ ಕಾಂಗ್ರೆಸ್ ಶಾಸಕ ರಾಜೇಗೌಡಗೆ ಸವಾಲು ಹಾಕಿದ್ದು, ಬಿಜೆಪಿಗೆ ಬರಲು ಡಿಮ್ಯಾಂಡ್ ಮಾಡಿದ್ದು ಸುಳ್ಳು ಎಂದಾದಲ್ಲಿ ಪ್ರಮಾಣ ಮಾಡಲಿ  ಎಂದರು.

ಇನ್ನು ಶಾಸಕ ರಾಜೇಗೌಡ ಅತಿವೃಷ್ಟಿಗೆ ಬಂದ ದುಡ್ಡನ್ನು ತನ್ನ ಹಿಂಬಾಲಕರ ಮನೆಗೆ ನೀಡಿದ್ದು ಸುಳ್ಳು ಎನ್ನುವುದನ್ನು ಅವರು ಪ್ರಮಾಣ ಮಾಡಿ ಸ್ಪಷ್ಟನೆ ನೀಡಲಿ ಎಂದರು. 

'ಕೃಷ್ಣ ರೀತಿ ದೇವೇಗೌಡ ಪಕ್ಷಾಂತರ ಮಾಡಿಲ್ಲ'...

ಇತ್ತೀಚೆಗಷ್ಟೇ ಕ್ಷೇತ್ರಕ್ಕೆ ಬಂದ ಅನುದಾನವನ್ನು ಜೀವರಾಜ್ ತಡೆ  ಹಿಡಿದಿದ್ದಾರೆ. ಸುಳ್ಳು ಎಂದಾದಲ್ಲಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಹೇಳಲಿ ಎಂದು ಜೀವರಾಜ್ ಗೆ ರಾಜೇಗೌಡ ಸವಾಲು ಹಾಕಿದ್ದರು.  ಈ ಸಂಬಂಧ ಇದೀಗ ಜೀವರಾಜ್ ಕೂಡ ಪ್ರತಿ ಸವಾಲು ಹಾಕಿದ್ದಾರೆ. 

Latest Videos
Follow Us:
Download App:
  • android
  • ios