ಸ್ವತಃ ಬಿಜೆಪಿ ಮುಖಂಡ ಎಚ್ ವಿಶ್ವನಾಥ್ ಸರ್ಕಾರದ ನಿರ್ಧಾರಕ್ಕೆ ಗರಂ ಆಗಿದ್ದು, ಎಚ್ಚರಿಕೆ ನಿಡಿದ್ದಾರೆ. 

 ಮೈಸೂರು (ಅ.08):  ಮೈಸೂರು ದಸರಾ ಆಚರಿಸಿ ಕೊರೋನಾ ಹೆಚ್ಚಾದರೆ ಜನರೇ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಎಚ್ಚರಿಸಿದ್ದಾರೆ.

Add Asianetnews Kannada as a Preferred SourcegooglePreferred

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಅನುಮತಿ ಪಡೆದು ಊರತುಂಬ ಲೈಟ್‌ (ದೀಪಾಲಂಕಾರ) ಹಾಕಿದ್ದೀರಾ?. ಆರೋಗ್ಯ ಇಲಾಖೆಯ ಅನುಮತಿ ಪಡೆದಿದ್ದೀರಾ? ಏಕೆ ಈ ರೀತಿ ಹಠಕ್ಕೆ ಬಿದ್ದಿದ್ದೀರಾ? ಕೊರೋನಾ ಮಹಾಸ್ಫೋಟವಾದರೆ ಯಾರು ಹೊಣೆ? ಎಂದು ವಾಗ್ದಾಳಿ ನಡೆಸಿದರು.

ಯಾವುದೇ ಕಾರಣಕ್ಕೂ ದಸರೆಗೆ ಹೆಚ್ಚಿನ ಜನಸಂದಣಿ ಬೇಡ. ಏನಾದರೂ ಆದಲ್ಲಿ ದಸರೆಗೂ ಕಳಂಕ ಬರಲಿದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.

'ಬಂಬೂ' ಸವಾರಿ ಮಾಡಲು ಹೊರಟ್ಟಿದ್ದೀರಾ: ವಿಶ್ವನಾಥ್‌ ಆಕ್ರೋಶ ...

ಶಾಲೆಯ ಆರಂಭಕ್ಕೂ ಆತುರ ಬೇಡ : ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೂ ಆತುರ ಬೇಡ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಸಲಹೆ ಮಾಡಿದರು.

ಈ ವಿಚಾರದಲ್ಲಿ ಅಧಿಕಾರಿಗಳು, ಜನಪ್ರನಿಧಿಗಳ ಸಲಹೆ ಮುಖ್ಯ ಅಲ್ಲ. ಪೋಷಕರು ಸಲಹೆ ಮುಖ್ಯ. ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ, ನಂತರ ನಿರ್ಧರಿಸಿ ಎಂದರು.

ಆರೋಗ್ಯ, ಶಿಕ್ಷಣ ಹಾಗೂ ಪೊಲೀಸ್‌ ಇಲಾಖೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಲಿ ಎಂದು ಅವರು ಹೇಳಿದರು.