Asianet Suvarna News Asianet Suvarna News

ವೈಯಕ್ತಿಕ ಕಾರಣಗಳಿಂದ ಹರ್ಷ ಕೊಲೆಯಾಗಿಲ್ಲ ಎಂದು NIA ದೃಢೀಕರಿಸಿದೆ : ಸಿಟಿ ರವಿ

* ಶಿವಮೊಗ್ಗ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ
*ಎನ್‌ಐಎ ವರದಿಯಲ್ಲಿ ಸ್ಫೋಟಕ ಅಂಶಗಳು
* ವೈಯಕ್ತಿಕ ಕಾರಣಗಳಿಂದ ಹರ್ಷ ಕೊಲೆಯಾಗಿಲ್ಲ ಎಂದು NIA ದೃಢೀಕರಿಸಿದೆ ಎಂದ ಸಿಟಿ ರವಿ 

BJP Leader CT ravi Reacts On NIA Report about Shivamogga Harsha Murder Case rbj
Author
Bengaluru, First Published Apr 2, 2022, 9:46 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಏ.02):
ಶಿವಮೊಗ್ಗದಲ್ಲಿ ನಡೆದ ಹಿಂದೂ ಯುವಕ ಹರ್ಷ ಕೊಲೆ ಪ್ರಕರಣ ಇದೀಗ ಎನ್ ಐ ಎ  ತನಿಖೆ ನಡೆಸುತ್ತಿದೆ.  ಇದರ ನಡುವೆ ಶಿವಮೊಗ್ಗ ಹರ್ಷನ ಕೊಲೆ ಹಿಂದೆ ಕೋಮುದಳ್ಳುರಿಯ ಉದ್ದೇಶವಿದೆ ಎನ್ನುವ ಅಂಶ ಬಹಿರಂಗವಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

ಇನ್ನು ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಇಂದು(ಶನಿವಾರ) ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಲಾರ್ಯದರ್ಶಿ ಸಿ.ಟಿ ರವಿ,  ಹರ್ಷನ ಕೊಲೆ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು ಎನ್ನುವ ಉದ್ದೇಶದಿಂದ ಸರ್ಕಾರ  ಎನ್.ಐ.ಎಗೆ ಕೇಸ್ ವಹಿಸಿರುವುದು. ಈ ಬಗ್ಗೆ  ಸಮಗ್ರ ತನಿಖೆಯಾಗಿ ಸತ್ಯಾಂಶಹೊರಬಲಿದ ಎಂದರು.

ಶಿವಮೊಗ್ಗ ಹರ್ಷ ಕೊಲೆ ಹಿಂದಿನ ಕಾರಣ ಬಹಿರಂಗ, NIA ವರದಿಯಲ್ಲಿವೆ ಸ್ಫೋಟಕ ಅಂಶಗಳು

ಶಿವಮೊಗ್ಗದಲ್ಲಿ ವೈಯಕ್ತಿಕ ಕಾರಣಗಳಿಂದ ಹರ್ಷ ಕೊಲೆಯಾಗಿಲ್ಲ ಎಂದು ಎನ್.ಐ.ಎ. ಮೇಲ್ನೋಟಕ್ಕೆ ದೃಢೀಕರಿಸಿದೆ. ಹರ್ಷನಿಗಾಗಲಿ-ಆಪಾದಿತರಿಗಾಗಲಿ ವ್ಯಕ್ತಿಗತ ಜಗಳ ಇಲ್ಲವೆಂದು ಮೇಲ್ನೋಟಕ್ಕೆ ಕಂಡಿತ್ತು , ವೈಯಕ್ತಿಕ ಕಾರಣಗಳಿಂದ ಹರ್ಷ ಕೊಲೆಯಾಗಿಲ್ಲ ಎಂದು ಎನ್.ಐ.ಎ. ದೃಢೀಕರಿಸಿದೆ ಈ ಕಾರಣಕ್ಕಾಗಿ ಸರ್ಕಾರ ಸಮಗ್ರ ತನಿಖೆಗೆ ಆದೇಶ ಮಾಡಿತ್ತು.ರಾಜ್ಯದಲ್ಲಿ  ಕೋಮುಗಲಭೆ ಸೃಷ್ಠಿಸಬೇಕೆಂಬ ಸಂಚಿನಲ್ಲೇ ಹತ್ಯೆ ಮಾಡಿದ್ದು ಯಾರೋ ವೈಯಕ್ತಿಕವಾಗಿ ತೆಗೆದುಕೊಂಡ ತೀರ್ಮಾನ ಇದು ಅಂತ ನನಗೆ ಅನ್ನಿಸಲ್ಲ ಇದರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ ಅಭಿಪ್ರಾಯ ವ್ಯಕ್ತಪಡಿಸಿದರು.

 ಈ ಹತ್ಯೆಗೆ ಫೈನಾನ್ಸ್ ಮಾಡುವವರು, ಪ್ರಚೋದನೆ ಕೊಟ್ಟವರು ಯಾರು, ಹಣದ ವ್ಯವಸ್ಥೆ ಮಾಡುವವರು ಯಾರು ಎನ್ನುವುದೂ ಕೂಡ ಹೊರಬರಬೇಕಾಗಿದೆ. ನಿನ್ನೆ ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು ಎನ್ನುವ ಉದ್ದೇಶದಿಂದ ಸರ್ಕಾರ  ಎನ್.ಐ.ಎಗೆ ಕೇಸ್ ವಹಿಸಿರುವುದು ಈ ಹಿನ್ನಲೆಯಲ್ಲಿ ಸಮಗ್ರ ತನಿಖೆ ನಡೆದ್ದು ಸತ್ಯಾಂಶಹೊರಬರಬೇಕಾಗಿದೆ. ಇದರ ಜೊತೆಗೆ ನ್ಯಾಯಾಲಯದಲ್ಲಿ ಬೆಂಬಲ ಕೊಡುವವರು ಯಾರು, ಇದೆಲ್ಲದರ ಸಮಗ್ರ ತನಿಖೆಯಾಗಬೇಕೆಂದು ಸಿ.ಟಿ ರವಿ ಒತ್ತಾಯಿಸಿದರು. 

ಎನ್ ಐ ಎ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಹತ್ಯೆ ಹಿಂದೆ  ಯಾವ ನೆಟ್ವರ್ಕ್ ಇದೆ ಎನ್ನುವದನ್ನು ನೋಡೋಣ, ರಾಜ್ಯದಲ್ಲೇ ಇದ್ದಾರೋ, ಹೊರರಾಜ್ಯದಲ್ಲಿ ಇದ್ದಾರೋ ಗೊತ್ತಾಗಲಿ ಎಂದು ತಿಳಿಸಿದ್ದಾರೆ.

NIA ವರದಿಯಲ್ಲೇನಿದ?
ಕರ್ನಾಟಕದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಕೇಸ್ (Harsha Murder Case) ಇದೀಗ ರಾಷ್ಟ್ರೀಯ ತನಿಖಾ ದಳದ ಕೈ ಸೇರಿದ್ದು, ಎಫ್ ಐ ಆರ್ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದೆ.  NIA ದಾಖಲಿಸಿಕೊಂಡ ಎಫ್‌ಐಆರ್‌ನಲ್ಲಿ  ಸ್ಪೋಟಕ ಅಂಶಗಳು ದಾಖಲಾಗಿದೆ. .

 ಈ ನಡುವೆ ಯುವತಿಯೊಬ್ಬಳ ವಿಚಾರಕ್ಕೂ ಕೊಲೆಯಾಗಿದೆ ಅಂತಾ ಕೂಡ ಗಾಸಿಪ್ ಎದ್ದಿದ್ವು.. ಆದ್ರೆ ಎನ್ಐಎ ದಾಖಲಿಸಿರೋ ಎಫ್ಐಆರ್ ನಲ್ಲಿ ಇದ್ಯಾವ ಅಂಶವೂ ಉಲ್ಲೇಖ ಆಗಿಲ್ಲ.. ಬದಲಾಗಿ ಶಾಕಿಂಗ್ ವಿಚಾರವೊಂದು ರಾಷ್ಟ್ರೀಯ ತನಿಖಾದಳ ಫಸ್ಟ್ ಇನ್ವೆಷ್ಟಿಗೇಷನ್ ರಿಪೋರ್ಟ್‌ನಲ್ಲಿ ಉಲ್ಲೇಖಿಸಿದೆ.

 ಶಿವಮೊಗ್ಗದಲ್ಲಿ ಇತ್ತೀಚೆಗೆ ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ -NIA) ತನ್ನ ಪ್ರಾಥಮಿಕ ವರದಿಯಲ್ಲಿ ಹರ್ಷ ಕೊಲೆ ಹಿಂದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿತ್ತು.  ಕೋಮುಗಲಭೆ (Communal Violence) ಎಬ್ಬಿಸುವ ಉದ್ದೇಶವಿತ್ತು ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ.

ಹರ್ಷ ಕೊಲೆ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಮಾಜಯದಲ್ಲಿ ಭಯ ಹುಟ್ಟಿಸುವ ಉದ್ದೇಶವಿತ್ತು. ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಕೋಮುಗಲಭೆ ಸೃಷ್ಟಿಸುವುದು, ಮಾರಕಾಸ್ತ್ರವನ್ನು ಝಳಪಿಸಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶವಿತ್ತು ಎಂಬ ಆಘಾತಕಾರಿ ಅಂಶಗಳು ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿದೆ . NIA ದಾಖಲಿಸಿರುವ ಎಫ್ಐಆರ್ ಮತ್ತು ದೂರುದಾರರ ದೂರಿನ ಪ್ರತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಷ್ಟ್ರೀಯ ತನಿಖಾ ದಳದ ಎಫ್ಐಆರ್ ನಲ್ಲಿ ಈ ಮಹತ್ವದ ಅಂಶಗಳೆಲ್ಲಾ ಅಡಕವಾಗಿವೆ.

Follow Us:
Download App:
  • android
  • ios