ಚುನಾವಣೆ ಸ್ಪರ್ಧೆಗೆ ಮುನ್ನ ಸಿಟಿ ರವಿ ಟೆಂಪಲ್ ರನ್, ಚಿಕ್ಕಮಗಳೂರಿನ ಪ್ರಮುಖ ದೇವಾಲಯಗಳಲ್ಲಿ ಪೂಜೆ
ಇನ್ನೂ ನಮ್ಮ ಪಕ್ಷದ ಪಾರ್ಲಿಮೆಂಟರಿ ಬೋರ್ಡ್ ಸಭೆ ಆಗಿಲ್ಲ. ಆದ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಈ ಬಾರಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದೇವೆ ಎಂದ ಸಿಟಿ ರವಿ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.8): ಚುನಾವಣೆಗೆ ಸ್ಪರ್ಧೆ ಮಾಡುವ ಮುನ್ನ ಬಿಜೆಪಿ ಪಕ್ಷದ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಸಿ,ಟಿ ರವಿ ಚಿಕ್ಕಮಗಳೂರಿನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ಸಂಜೆ ತಮ್ಮ ಬೆಂಬಲಿಗರೊಂದಿಗೆ ದತ್ತಪೀಠ, ದೇವಿರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪಾದುಕೆಗಳಿಗೆ ಪೂಜೆ:
ಹಿಂದೂ ಮುಸ್ಲಿಂರ ವಿವಾದಿತ ಕೇಂದ್ರ ದತ್ತಪೀಠಕ್ಕೆ ಭೇಟಿ ನೀಡಿದ ಸಿ.ಟಿ ರವಿ ದತ್ತಗುಹೆಯಲ್ಲಿರುವ ದತ್ತಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.ಇದೇವೇಳೆ ಬಿಂಡಿಗದ ಶ್ರೀ ದೇವೀರಮ್ಮನವರ ದೇವಸ್ಥಾನಕ್ಕೂ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಿಬಾರಿಯೂ ಚುನಾವಣೆಯಲ್ಲಿ ದತ್ತಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಚುನಾವಣಾ ಕಾರ್ಯ ಕೈಗೆತ್ತಿಕೊಳ್ಳುವುದು ವಾಡಿಕೆ. ಅದರಂತೆ ಈ ವರ್ಷವೂ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದೇವೆ. ದೆಹಲಿಯಿಂದ ಬಂದ ನಂತರ ಪಕ್ಷದ ಆದೇಶ ಏನಿರುತ್ತದೆ ಅದನ್ನು ಪಾಲಿಸುತ್ತೇವೆ ಎಂದು ಹೇಳಿದರು.ಈ ಬಾರಿ ಉತ್ತಮ ಮಳೆ ಬೆಳೆ ಬಂದು ಜನರ ಸಕಲ ಸಂಕಷ್ಟಗಳು ಪರಿಹಾರವಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತದಿಂದ ವಿಶ್ವಗುರುವಾಗುವತ್ತ ಹೊರಟಿರುವ ಭಾರತಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.
ಜಿಲ್ಲಾಡಳಿತ ಗಮನಿಸಲಿ:
ಯೋಗಾ ಯೋಗ ನಿನ್ನೆ ಕೆಲವು ಕಡೆ ಮಳೆ ಆಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರತರದಲ್ಲಿ ಇಲ್ಲ. ಆ ರೀತಿ ಸಮಸ್ಯೆ ಇದ್ದಲ್ಲಿ ಜಿಲ್ಲಾಡಳಿತ ಗಮನ ಹರಿಸಬೇಕು. ಚುನಾವಣೆ ನೀತಿ ಸಂಹಿತೆ ಇರುವುದರಿಂದಾಗಿ ಚುನಾಯಿತ ಪ್ರತಿನಿಧಿಗಳ ಪಾತ್ರ ನಗಣ್ಯ ಇರುತ್ತದೆ. ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಓ ಇತರರು ಗಮನ ಹರಿಸಿ ಆಯಾ ಪಂಚಾಯ್ತಿ ಪಿಡಿಓಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಇದ್ದೆಡೆ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಎಲೆಕ್ಷನ್ ಮೂಡ್‌ನಲ್ಲಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲ್‌ಗೆ ಕೇಸ್ ಜಡಿದು ಸ್ವಾಗತಿಸಿದ
ಕುಮಾರಸ್ವಾಮಿಗೆ ಭಯ:
ನಟ ಕಿಚ್ಚಾ ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ನಿಂತಿರುವುದನ್ನು ಟೀಕಿಸಿರುವ ಮಾಜಿ ಸಿಎಂ ಕುಮಾರ ಸ್ವಾಮಿ ಅವರಿಗೆ ತಿರುಗೇಟು ನೀಡಿದ ರವಿ, ಅವರಿಗಿರುವ ಭಯವನ್ನೇ ಅವರು ವ್ಯಕ್ತಪಡಿಸಿದ್ದಾರೆ. ಅವರಿಗೆ ಮೋದಿ ಹೊಡೆತವನ್ನೇ ತಡೆದುಕೊಳ್ಳು ಆಗುವುದಿಲ್ಲ. ಹೀಗಿರುವಾಗ ಇವರೂ ಬೇರೆ ಅವರೊಂದಿಗೆ ಸೇರಿಕೊಂಡರಲ್ಲಾ ಎಂಭಯದಿಂದ ಹೀಗೆಲ್ಲಾ ಮಾತಾಡುತ್ತಿದ್ದಾರೆ ಎಂದರು.
ಮೊಳಕಾಲ್ಮೂರು ಟಿಕೆಟ್ ಸಿಕ್ಕದ್ದಕ್ಕೆ ಯೋಗೀಶ್ ಬಾಬು ರೆಬೆಲ್, ಇದು ಶೋಭೆ ತರಲ್ಲ ಎಂದ ಕೈ ಅಭ್ಯರ್ಥಿ ಗೋಪಾಲಕೃಷ್ಣ!
ಸಭೆ ನಂತರ ಪಟ್ಟಿ:
ಇನ್ನೂ ನಮ್ಮ ಪಕ್ಷದ ಪಾರ್ಲಿಮೆಂಟರಿ ಬೋರ್ಡ್ ಸಭೆ ಆಗಿಲ್ಲ. ಆದ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತದೆ. ಈ ಬಾರಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದೇವೆ. ಆ ಗುರಿಯನ್ನು ತಲುಪುತ್ತೇವೆ ಎಂದು ತಿಳಿಸಿದರು