ಬೇಲೂರು (ಅ.29):  ದೇಶದ ಒಳಿತು ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ ಎಂಬುವುದನ್ನು ಪ್ರತಿಯೊಬ್ಬರಿಗೆ ಮನದಟ್ಟು ಮಾಡಿದರೆ ಮತ್ತೆ ನಾವು ಅ​ಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ತಿಳಿಸಿದರು.

ಪಟ್ಟಣದ ಜೆಪಿನಗರದಲ್ಲಿ  ಬ್ಲಾಕ್‌ ಕಾಂಗ್ರೆಸ್‌ ಹಾಗೂ ನಗರ ಘಟಕ ಸಮಿತಿ ರಚನೆ, ಜೆಡಿಎಸ್‌, ಬಿಜೆಪಿ ಪಕ್ಷ ತೊರೆದವರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮಲ್ಲಿ ಮಾತನಾಡಿದ ಅವರು .ಪಕ್ಷ ಸಂಘಟನೆಗೆ ಕಾರ್ಯಕರ್ತರು ಹೆಚ್ಚು ಒತ್ತು ನೀಡಬೇಕು. ತಾಲೂಕು ಕೇಂದ್ರದಲ್ಲಿ ಕನಿಷ್ಠ 5 ಸಾವಿರ ಸದಸ್ಯತ್ವ ನೊಂದಣಿ ಮಾಡಿಸಿ ಹೆಚ್ಚು ಯುವಕರನ್ನು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರನ್ನಾಗಿ ಉತ್ತಮ ನಾಯಕರನ್ನು ಬೆಳೆಸಬೇಕು ಅಲ್ಲದೆ ಈಗಿನಿಂದಲೇಬೂತ್‌ ಮಟ್ಟದಲ್ಲಿ ಯುವಕರನ್ನು ಬಗ್ಗೂಡಿಸಿ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಗೆಲುವು ಶತಸಿದ್ಧ. ತಾಲೂಕಿನಲ್ಲಿ ಯುವ ಪಡೆಯನ್ನು ಕಟ್ಟುವ ಉದ್ದೇಶದಿಂದ ಹಿರಿಯರ ಮಾರ್ಗದರ್ಶನ ನೇತೃತ್ವದಲ್ಲಿ ಬ್ಲಾಕ್‌ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ನಗರ ಘಟಕಗಳನ್ನು ಸ್ಥಾಪಿಸಿ ತಳ ಮಟ್ಟದಿಂದ ಬಲಪಡಿಸಲಾಗುತ್ತಿದೆ ಎಂದರು.

ನಮ್ಮ ಸರ್ಕಾರವನ್ನು ಯಾರೂ ಪರ್ಸಂಟೇಜ್‌ ಸರ್ಕಾರ ಎಂದಿಲ್ಲ: ಎಚ್‌.ಡಿ.ಕುಮಾರಸ್ವಾಮಿ ..

ಒಂದು ಬೂತ್‌ ಮಟ್ಟದಲ್ಲಿ 10 ಜನ ಯುವಕರನ್ನು ಆಯ್ಕೆಮಾಡಿ ಪಕ್ಷವನ್ನು ಕಟ್ಟಬೇಕಿದೆ. ಏಕೆಂದರೆ ಈಗ ನಮ್ಮಮುಂದೆ ಬಹುದೊಡ್ಡ ಸವಾಲಿದ್ದು, ಪುರಸಭೆ, ಗ್ರಾಪಂ ಚುನಾವಣೆಗಳು ಮುಂದೆ ಬರುವುದರಿಂದ ಈಗಿನಿಂದಲೇ ಕ್ರಿಯಾತ್ಮಕವಾಗಿ ಮಾಡಿಕೊಳ್ಳಬೇಕಿದೆ. ಅಲ್ಲದೆ ನಾವೆಲ್ಲರೂ ಮನಸ್ಸು ಮಾಡಿದರೆ ಪುರಸಭೆ ಹಾಗೂ ಗ್ರಾಮಪಂಚಾಯಿತಿ ಯನ್ನು ನಮ್ಮ ತೆಕ್ಕೆಗೆ ಪಡೆಯಬಹುದು.ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಹಿರಿಯರು ,ಕಿರಿಯರು ಎನ್ನದೆ ಎಲ್ಲರೂ ಸಹ ಪಕ್ಷದ ಶ್ರೇಯಸ್ಸಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಜಿ.ನಿಶಾಂತ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದ್ದು, ಈ ಪಕ್ಷದ ನೆರಳಿನಲ್ಲಿ ನಾವೆಲ್ಲರೂ ಬೆಳೆಯುತ್ತಿದ್ದು, ಕಾಂಗ್ರೆಸ್‌ ಪಕ್ಷ ಬಹುದೊಡ್ಡ ಯುವಕರ ಪಡೆಯನ್ನೆ ಹೊಂದಿದೆ ಎಂದರು.

ಜಿಲ್ಲಾ ಪಂಚಾಯತಿ ಸದಸ್ಯ ಸೈಯದ್‌ ತೌಫಿಕ್‌ ಮಾತನಾಡಿ, ಈಗಾಗಲೇ ಯುವಕರನ್ನು ಹೆಚ್ಚು ಪಕ್ಷಕ್ಕೆ ತರುವ ಉದ್ದೇಶದಿಂದ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಮುಂದಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಮಂಜಪ್ಪ, ನಗರ ಅಧ್ಯಕ್ಷ ಎ.ಆರ್‌.ಅಶೋಕ್‌, ಮಾಜಿ ಸಫಾಯಿ ಕರ್ಮಚಾರಿ ಅಧ್ಯಕ್ಷ ಎಂ.ಆರ್‌.ವೆಂಕಟೇಶ್‌, ಮಾಜಿ ಪುರಸಭೆ ಅಧ್ಯಕ್ಷ ಶಾಂತಕುಮಾರ್‌, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಕ್ರಂ, ಎಸ್ಸಿ, ಎಸ್ಟಿಘಟಕದ ಅಧ್ಯಕ್ಷ ಕುಮಾರ್‌ ಇದ್ದರು.