ಎಂ. ಅಫ್ರೋಜ್ ಖಾನ್‌

ರಾಮನಗರ [ಫೆ.09] : ಜೆಡಿಎಸ್‌ - ಕಾಂಗ್ರೆಸ್‌ ನ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬಿಜೆಪಿ ಇದೀಗ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್‌ಎಸ್‌ಎಸ್‌)ದೊಂದಿಗೆ ಕೇಸರಿ ಬಾವುಟ ಹಾರಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆಯಿಲ್ಲ. ಸ್ಥಳೀಯ ಸಂಸ್ಥೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಜೆಡಿಎಸ್‌ - ಕಾಂಗ್ರೆಸ್‌ ಪಕ್ಷಗಳೇ ಪ್ರಬಲ ಪ್ರತಿಸ್ಪರ್ಧಿಗಳು. ಈ ಎರಡೂ ಪಕ್ಷಗಳಿಗೂ ಶಕ್ತಿ ಪ್ರದರ್ಶಿಸಲು ಬಿಜೆಪಿ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಕನಕಪುರ ತಾಲೂಕು ಹಾರೋಬೆಲೆ ಬಳಿಯ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರವನ್ನೇ ಬಿಜೆಪಿ ನಾಯಕರು ಆರ್‌ ಎಸ್‌ ಎಸ್‌ ನ ಸಹಕಾರದಲ್ಲಿ ರಾಜಕೀಯ ದಾಳವಾಗಿ ಬಳಸಿಕೊಂಡಿತು. ಇದರಿಂದಾಗಿ ಕಪಾಲಬೆಟ್ಟವಿವಾದದ ಕೇಂದ್ರ ಬಿಂದುವಾಯಿತು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿನಿಧಿಸುವ ಕನಕಪುರ ಕ್ಷೇತ್ರ ಕಾಂಗ್ರೆಸ್‌ ನ ಭದ್ರಕೋಟೆಯಾಗಿದೆ. ಆ ಕೋಟೆಯಲ್ಲಿಯೇ ಕೇಸರಿ ಬಾವುಟಗಳನ್ನು ಹಾರಿಸಿದ್ದ ಆರೆಸ್ಸೆಸ್‌, ಇದೀಗ ಪಥಸಂಚಲನದ ಹೆಸರಿನಲ್ಲಿ ರಾಮನಗರದಲ್ಲಿ ಕೇಸರಿ ಪತಾಕೆ ಹಾರಿಸಲು ಸಿದ್ಧತೆ ಮಾಡಿಕೊಂಡಿದೆ.

ಕನಕಪುರದಲ್ಲಿ ಕಾಂಗ್ರೆಸ್‌ ನ ಟ್ರಬಲ್‌ ಶೂಟರ್‌ ಡಿ.ಕೆ.ಶಿವಕುಮಾರ್‌ ವಿರುದ್ಧ ಗುಡುಗಿದ್ದ ಆರ್‌ ಎಸ್‌ ಎಸ್‌ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಣಿ ಸಮಿತಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರನ್ನೇ ರಾಮನಗರಕ್ಕು ಕರೆಸಿಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಬಿ​ಜೆಪಿ ಹ​ತ್ತಾರು ಮಾ​ರ್ಗ​ಗಳ ಮೂ​ಲಕ ಪ​ದೆ ​ಪದೇ ಕಲ್ಲಡ್ಕ ಪ್ರ​ಭಾ​ಕರ್‌ ಭಟ್‌ ಅ​ವ​ರನ್ನು ಜಿ​ಲ್ಲೆಗೆ ಕ​ರೆ​ಸಿ​ಕೊ​ಳ್ಳುವ ಮೂ​ಲಕ ಶಕ್ತಿ ಪ್ರ​ದ​ರ್ಶನ ಮಾ​ಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿರುವುದು ಗೌ​ಪ್ಯ​ವಾಗಿ ಉ​ಳಿ​ದಿಲ್ಲ.

ಎಚ್‌ ಡಿಕೆ - ಡಿಕೆಶಿ ಟಾ​ರ್ಗೆ​ಟ್‌:

ಜಿಲ್ಲೆಯ ಮಟ್ಟಿಗೆ ಚುನಾವಣೆಗಳಲ್ಲಿ ಬಿಜೆಪಿಗೆ ಖಾತೆ ತೆರೆದು ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನಕಪುರ ಲೋಕಸಭಾ ಕ್ಷೇತ್ರ, ಮಾಗಡಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದು ಬಾರಿ ಮಾತ್ರ ಬಿಜೆಪಿ ಗೆಲವು ಕಂಡಿದೆ.

ಜೆಡಿಎಸ್‌ ವರಿಷ್ಠ ಎಚ್‌ .ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಜಿಲ್ಲೆಯ ಮೇಲೆ ರಾಜಕೀಯವಾಗಿ ಬಿಗಿ ಹಿಡಿತ ಸಾಧಿಸಿದ್ದಾರೆ. ಅವರಿಬ್ಬರನ್ನು ಕುಗ್ಗಿಸುವ ಸಲುವಾಗಿ ಬಿಜೆಪಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಆರ್‌ ಎಸ್‌ ಎಸ್‌ ಪಥಸಂಚಲನ ಆಯೋಜಿಸಿದೆ ಎಂದು ಹೇಳಲಾಗುತ್ತಿದೆ.

ಜೋಡೆತ್ತುಗಳ ಕೋಟೆಯಲ್ಲಿ ಯೋಗೇಶ್ವರ್ ತಂತ್ರ !..

ಈಗಾಗಲೇ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಗಣವೇಷಧಾರಿಯಾಗಿ ಫೋಸ್‌ ನೀಡಿದ್ದಾರೆ. ತಮ್ಮದೇ ಸರ್ಕಾರ ಅಸ್ತಿತ್ವದಲ್ಲಿರುವ ಕಾರಣ ಅದರ ಲಾಭ ಪಡೆದು ಬಿಜೆಪಿ ಮುಖಂಡರು ಕನಕಪುರದ ನಂತರ ರಾಮನಗರದಲ್ಲಿಯೂ ಕೇಸರಿ ಬಾವುಟ ಹಾರಿಸಲು ಮುಂದಾಗಿದ್ದಾರೆ.

ಮೊದಲ ಬಾರಿಗೆ ದೊಡ್ಡ ಮಟ್ಟದ ಪಥಸಂಚಲ:

ಈ ಹಿಂದೆಯು ಅ​ನೇಕ ಬಾರಿ ರಾ​ಮ​ನ​ಗ​ರ​ದ​ಲ್ಲಿ ಆ​ರ್‌​ಎ​ಸ್‌​ಎಸ್‌ ಪ​ಥ​ಸಂಚ​ಲ​ನ ನ​ಡೆ​ದಿವೆ. ಆ​ದರೆ, ಇದೇ ಮೊ​ದಲ ಭಾ​ರಿಗೆ ನ​ಗ​ರದ 2 ಮಾ​ರ್ಗ​ಗ​ಳಲ್ಲಿ ಪ​ಥ​ಸಂಚ​ಲನ ಸಾ​ಗ​ಲಿದೆ. ಸು​ಮಾರು 5 ಸಾ​ವಿರ ಮಂದಿ ಭಾ​ಗ​ವ​ಹಿ​ಸುವ ನಿ​ರೀಕ್ಷೆ ಇದೆ.

ಇನ್ನು ಕ​ಲ್ಲಡ್ಕ ಪ್ರ​ಭಾ​ಕರ ಭಟ್‌ ಅ​ವ​ರಿಂದ ಜೂ​ನಿ​ಯರ್‌ ಕಾ​ಲೇ​ಜು ಮೈ​ದಾ​ನ​ದಲ್ಲಿ ಭಾ​ಷಣ ನ​ಡೆ​ಯ​ಲಿದೆ. ನ​ಗ​ರದ ಕಾ​ಮ​ನ​ಗುಡಿ ವೃ​ತ್ತ​ದ​ಲ್ಲಿನ ಆ​ರ್‌​ಎ​ಸ್‌​ಎಸ್‌ ಜಿಲ್ಲಾ ಕಾ​ರ‍್ಯ​ಲ​ಯ​ ಸಂಘ​ಮಿತ್ರದಲ್ಲಿ ಗ​ಣ​ವೇ​ಷ​ಗ​ಳು ಲಭ್ಯ ಇವೆ.