ಮಾಲೂರು [ಜ.20]: ನಾನು ಸೋತಿದ್ದರೂ ಪಕ್ಷದಲ್ಲಿ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ. ಸಚಿವ ಸ್ಥಾನ ನೀಡುವಂತಹದ್ದು ಬಿಜೆಪಿ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟಿದ್ದು. ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್‌ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಮತದಾರರು ಶುದ್ಧರಾಗಿದ್ದರು, ರಾಜಕಾರಣಿ ಹಾಗೂ ಸರ್ಕಾರಿ ಅಧಿಕಾರಿಗಳು ಭ್ರಷ್ಟರಾಗಿದ್ದರು. ಆದರೆ, ಈಗ ರಾಜಕಾರಣಿ, ಅಧಿಕಾರಿಗಳ ಜತೆಯಲ್ಲಿ ಮತದಾರರೂ ಭ್ರಷ್ಟರಾಗಿದ್ದಾರೆ. ಈ ಮಾತನ್ನು ಬಹಳ ನೋವಿನಿಂದ ಹೇಳುತ್ತಿದ್ದೇನೆ. 

ಕಾಂಗ್ರೆಸ್ ಹೈಕಮಾಂಡ್ ಲೋ ಕಮಾಂಡ್ ಆಗಿದೆ'...

ಪ್ರಸುತ್ತ ರಾಜಕೀಯ ವ್ಯವಸ್ಥೆ ಕಲಗಚ್ಚು ರೀತಿಯಾಗಿದ್ದು, ಪ್ರಾಮಾಣಿಕತೆಗೆ, ಪಾರದರ್ಶಕತೆಗೆ ಮತದಾರರು ಪುರಸ್ಕರಿದಿರುವುದು ಬೇಸರ ತಂದಿದೆ. ಮತದಾರರು ತಮ್ಮ ಮತಗಳನ್ನು ಹೆಚ್ಚು ಹಣ ನೀಡುವವರಿಗೆ ನೀಡದೆ ಅಭ್ಯರ್ಥಿ ವ್ಯಕ್ತಿತ್ವ, ಪ್ರಾಮಾಣಿಕತೆ ಆಧಾರದ ಮೇಲೆ ಆಯ್ಕೆ ಮಾಡಬೇಕು ಎಂದರು. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರ ಕೈಗೊಳ್ಳದಿರುವುದಕ್ಕೆ ಕಾಂಗ್ರೆಸ್‌ ಹೈ ಕಮಾಂಡ್‌ ಈಗ ಲೋ ಕಮಾಂಡ್‌ ಆಗಿರುವುದೇ ಕಾರಣ ಎಂದು ಲೇವಡಿ ಮಾಡಿದರು.

"