Asianet Suvarna News Asianet Suvarna News

ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ : ಹಾಲಪ್ಪ

ಬಿಜೆಪಿಗೆ ಚುನಾವಣೆಯಲ್ಲಿ  ಸೋಲುವ ಭೀತಿ ಎದುರಾಗಿದೆ ಎಂದು ಮುಖಂಡರೋರ್ವರು ಹೇಳಿದ್ದಾರೆ. 

BJP fear About  Defeat At Shira Says Congress Leader snr
Author
Bengaluru, First Published Oct 6, 2020, 10:37 AM IST
  • Facebook
  • Twitter
  • Whatsapp

ಗುಬ್ಬಿ (ಅ.06): ಕಾಂಗ್ರೆಸ್‌ ನೈತಿಕ ಶಕ್ತಿ ಕುಂದಿಸಲು ಸಿಬಿಐ ದಾಳಿ ಮಾಡುವ ಷಡ್ಯಂತ್ರ ತೋರಿದ ಬಿಜೆಪಿ ಸರ್ಕಾರಕ್ಕೆ ಉಪಚುನಾವಣೆಯಲ್ಲಿ ಸೋಲುವ ಭೀತಿ ಕಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಮರುಳೀಧರ್‌ ಹಾಲಪ್ಪ ಛೇಡಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂದೆ ಕಾಂಗ್ರೆಸ್‌ ಘಟಕ ಹಮ್ಮಿಕೊಂಡಿದ್ದ ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣ ಖಂಡಿಸುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿಬಿಐ ದಾಳಿ ಮಾಡುವ ಮೂಲಕ ಮತ್ತೊಮ್ಮೆ ಅಧಿಕಾರಿ ದುರ್ಬಳಕೆ ಮಾಡಿರುವುದು ರುಜುವಾತಾಗಿದೆ. ಧ್ವನಿ ಎತ್ತುವವರ ದನಿ ಶಮನಗೊಳಿಸುವ ಬಿಜೆಪಿ ತಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎದೆಗುಂದುವುದಿಲ್ಲ. ಮತ್ತಷ್ಟುಸಂಘಟನಾ ಶಕ್ತಿ ಮೂಲಕ ಉಪಚುನಾವಣೆ ಗೆಲುವು ಸಾಧಿಸಲಿದ್ದಾರೆ. ಅವರಿಗೆ ಕಾರ್ಯಕರ್ತರ ಬೆಂಬಲ ಸಾಥ್‌ ನೀಡಲಿದೆ ಎಂದರು.

ಶಿರಾ ಜೆಡಿಎಸ್ ಟಿಕೆಟ್ ಇವರಿಗೆ ಖಚಿತ : ಎಚ್‌ಡಿಕೆ ಸುಳಿವು ...

ಉತ್ತರ ಪ್ರದೇಶದಲ್ಲಿ ನಡೆದಿರುವ ಸರ್ವಾಧಿಕಾರ ಪ್ರಯೋಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಅತ್ಯಾಚಾರ ಪ್ರಕರಣದಲ್ಲಿ ದಲಿತ ಬಡ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಸಿರಿವಂತರ ಪರ ಬ್ಯಾಟಿಂಗ್‌ ಆಡುತ್ತಿರುವ ಯೋಗಿ ಆದಿತ್ಯನಾಥ್‌ ಅವರ ಸರ್ಕಾರ ಬಡವರ ಬಗ್ಗೆ ಕಾಳಜಿ ತೋರುತ್ತಿಲ್ಲ. ಅನ್ಯಾಯದ ವಿರುದ್ಧ ಸಿಡಿದು ಪೊಲೀಸ್‌ ದೂರು ನೀಡಲು ಮುಂದಾದ ಸಂತ್ರಸ್ತ ಯುವತಿಯ ಪೋಷಕರನ್ನು ತಡೆದು ಮನೆಯಲ್ಲಿ ಬಂಧಿಸಿ ಅಧಿಕಾರಿದ ದರ್ಪ ತೋರಿದ್ದಾರೆ. ಈ ಬಗ್ಗೆ ದಾಖಲೆ ದೊರೆತ ತಕ್ಷಣ ಹೋರಾಟಕ್ಕೆ ಮುಂದಾದ ಕಾಂಗ್ರೆಸ್‌ ವರಿಷ್ಠರನ್ನು ಬಂಧಿಸುವ ಪ್ರಕ್ರಿಯೆ ತೊಡಗಿದ್ದು ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಜನ ಕಲಿಸಲಿದ್ದಾರೆ ಎಂದರು.

ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಎಂದಿಗೂ ಸಧೃಡವಾಗಿದೆ. ಈ ಹಿಂದೆ ಟಿ.ಬಿ.ಜಯಚಂದ್ರ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಶ್ರೀರಕ್ಷೆಯಾಗಲಿದೆ. ಬಿಜೆಪಿ ಮತ್ತು ಜೆಡಿಎಸ್‌ ಸಲ್ಲದ ಆಟವಾಡುತ್ತಿರುವ ಸಂದರ್ಭದಲ್ಲಿ ಬೇಸತ್ತ ಪ್ರಮುಖ ಮುಖಂಡರಾದ ಕಲ್ಕೆರೆ ರವಿಕುಮಾರ್‌ ಸೇರಿದಂತೆ ಜನಪ್ರತಿನಿಧಿಗಳು, ಬುದ್ಧಿಜೀವಿಗಳು ಒಟ್ಟು 90 ಮಂದಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಈ ಕಾರ್ಯವನ್ನು ಕೆ.ಎನ್‌.ರಾಜಣ್ಣ ಮತ್ತು ಜಿ.ಪರಮೇಶ್ವರ್‌ ನೇತೃತ್ವದಲ್ಲಿ ನಡೆದಿದೆ. ಚುನಾವಣಾ ಫಲಿತಾಂಶವನ್ನು ಈ ಪ್ರಮುಖರ ಮಾರ್ಗದರ್ಶನದಲ್ಲಿ ಪಡೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ನಾಗಸಂದ್ರ ವಿಜಯ್‌ಕುಮಾರ್‌ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸುವ ನಾವುಗಳು ನಮ್ಮಲ್ಲೇ ನಡೆದ ನಿಗೂಢ ಸಾವಿನ ತನಿಖೆಗೆ ಆಗ್ರಹಿಸಬೇಕಿದೆ. ತುಮಕೂರು ನಗರದಲ್ಲಿ ಜಿಪಂ ಸದಸ್ಯರ ಮನೆಯಲ್ಲಿ ಈಚೆಗೆ ನಡೆದ ಮೇಲ್ನೋಟದ ಆತ್ಮಹತ್ಯೆ ಪ್ರಕರಣ ಸೂಕ್ತ ತನಿಖೆ ನಡೆಯಬೇಕು. ಅಪ್ರಾಪ್ತ ಬಾಲಕಿಯ ಸಾವು ಅನುಮಾನದಲ್ಲಿದ್ದರೂ ಅವರ ಕುಟುಂಬಸ್ಥರನ್ನು ಹಣದ ಆಮೀಷೆ ತೋರಿ ಈ ಪ್ರಕರಣ ಮುಚ್ಚುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿ ಸಭೆ ನಂತರ ಉಪತಹಸೀಲ್ದಾರ್‌ ಖಾನ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ರೇವಣಸಿದ್ದಯ್ಯ, ಗುಬ್ಬಿ ಬ್ಲಾಕ್‌ ಅಧ್ಯಕ್ಷ ಎಸ್‌.ಎಲ್‌.ನರಸಿಂಹಯ್ಯ, ಜಿ.ವಿ.ಮಂಜುನಾಥ್‌, ಸಲೀಂಪಾಷ, ಜಿ.ಎಸ್‌.ಮಂಜುನಾಥ್‌, ಮಹಮದ್‌ ರಫಿ, ಕೊಪ್ಪ ಮಂಜುನಾಥ್‌ ಮುಂತಾದವರು ಭಾಗವಹಿಸಿದ್ದರು.

Follow Us:
Download App:
  • android
  • ios