ಕಾಂಗ್ರೆಸ್ - ಬಿಜೆಪಿ ನಡುವೆ ಮೈತ್ರಿ : ಜೆಡಿಎಸ್ ದೂರ ಇಡಲು ಮಹಾ ತಂತ್ರಗಾರಿಕೆ
ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿಗೆ ಮುಂದಾಗಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಹನೂರು (ನ.06): ಹನೂರು ಪಟ್ಟಣ ಪಂಚಾಯ್ತು ಅಧಿಕಾರದ ಗದ್ದುಗೆಗೆ ಏರಲು ಚುನಾವಣೆಯಲ್ಲಿ ಜನತೆ ಯಾವ ಪಕ್ಷಕ್ಕೂ ಬಹುಮತ ಕೊಟ್ಟಿಲ್ಲ.
13 ಸ್ಥಾನಗಳ ಪೂಕಿ ಜೆಡಿಎಸ್ 6, ಕಾಂಗ್ರೆಸ್ 4, ಬಿಜೆಪಿ 3 ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಈ ಪೈಕಿ ೨ನೇ ವಾರ್ಡ್ನಿಂದ ಸ್ರ್ಧಿಸಿ ಜಯಗಳಿಸಿದ್ದ ನಾಗರಾಜು ಎಂಬುವವರು ನಿಧನರಾದ ಹಿನ್ನೆಲೆಯಲ್ಲಿ 12 ಸ್ಥಾನಗಳು ಮಾತ್ರ ಉಳಿದಿದೆ.
ಅಧಿಕಾರ ಹಿಡಿಯಲು 7 ಮತಗಳ ಅವಶ್ಯಕತೆ ಇದೆ. ಆದರೆ ಯಾವ ಪಕ್ಷಗಳಲ್ಲಿಯೂ 7 ಸ್ಥಾನಗಳು ಇಲ್ಲದೇ ಇರುವುದು ಅತಂತ್ರ ಸ್ಥಿತಿಗೆ ತಂದೊಡ್ಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ : ಮಾಜಿ ಸಚಿವರಾದ ಡಿ ಎಚ್ ನಾಗಪ್ಪ ಮತ್ತು ದಿ ರಾಜುಗೌಡ ಅವರ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಹನೂರು ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಆರ್. ಮಂಜುನಾಥ್ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮೊಕ್ಕಂ ಹೂಡಿ ಬರೋಬ್ಬರಿ 6 ಸ್ಥಾನ ಗಳಿಸಿ 2 ರಾಷ್ಟ್ರೀಯ ಪಕ್ಷಗಳ ನಾಯಕರ ಮುಖಭಂಗಕ್ಕೆ ಕಾರಣರಾಗಿದ್ದರು.
ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ .
ಈ ಹಿನ್ನೆಲೆ ಅರಿತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಮಂಜುನಾಥ್ ನೇತೃತ್ವದ ಜೆಡಿಎಸ್ಗೆ ಅಧಿಕಾರ ಸಿಗದಂತೆ ಮಾಡುವ ನಿಟ್ಟಿನಲ್ಲಿ ತಮ್ಮ ರಾಜಕೀಯ ವೈರತ್ವ ಮರೆತು ಮೈತ್ರಿಗೆ ಮುಂದಾಗಿದ್ದಾರೆ ಎಂಬ ಮಾತು ಇದೆ.
ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರನ್ನು ರೆಸಾರ್ಟ್ಗೆ ಕರೆದೊಯ್ಯುವ ಮೂಲಕ ಮೈತ್ರಿ ಆಡಳಿತಕ್ಕೆ ಮಣೆ ಹಾಕುತ್ತಿದ್ದಾರೆ ಎನ್ನಲಾಗಿದೆ.