* ಆತೂಶ್ ಎಂಬಾತನನ್ನ ವಿಚಾರಣೆ ಮಾಡುವಂತೆ ಕೋರಿ ದೂರು ನೀಡಿದ ಬಿಜೆಪಿ* ರೇಖಾ ಕದಿರೇಶ್‌ ಅವರ ಪತಿ ಕದಿರೇಶ್‌ ಕೊಲೆಯ ಸಂಚಿನಲ್ಲಿ ಅತೂಶ್ ಕುಮ್ಮಕ್ಕು * ರೇಖಾ ಕದಿರೇಶ್ ಕೊಲೆಗೆ ಅತೂಶ್ ಪ್ರಚೋದನೆ ನೀಡಿರುವ ಶಂಕೆ

ಬೆಂಗಳೂರು(ಜೂ.28):  ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಮರ್ಡರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ.

ಇಂದು(ಸೋಮವಾರ) ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್‌ ಅವರಿಗೆ ದೂರು ನೀಡಿದ ಬಿಜೆಪಿ ಮುಖಂಡರು ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ರೌಡಿ ಆತೂಶ್ ಎಂಬಾತನನ್ನ ವಿಚಾರಣೆ ಮಾಡುವಂತೆ ಕೋರಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಕಳೆದ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಅತೂಶ್ ಪತ್ನಿ ಬಿಜೆಪಿ ಅಭ್ಯರ್ಥಿ ರೇಖಾ ಕದಿರೇಶ್ ವಿರುದ್ಧ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಅತೂಶ್ ಪತ್ನಿ ಸೋಲನುಭವಿಸಿದ್ದರು. ಹೀಗಾಗಿ ರೇಖಾ ಕದಿರೇಶ್ ಕೊಲೆಗೆ ಅತೂಶ್ ಪ್ರಚೋದನೆ ನೀಡಿರುವ ಸಾಧ್ಯತೆ ಇದೆ ಎಂದು ದೂರು ನೀಡಿದ್ದಾರೆ. 

ಬೆಂಗಳೂರು: ಹಾಡಹಗಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ

2018ರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಛಲವಾದಿಪಾಳ್ಯ ವಾರ್ಡ್‌ನಲ್ಲಿ ನಡೆದಂತಹ ರೇಖಾ ಕದಿರೇಶ್‌ ಅವರ ಪತಿ ಕದಿರೇಶ್‌ ಬಿಜೆಪಿ ಕಾರ್ಯಕರ್ತನ ಕೊಲೆಯ ಸಂಚಿನಲ್ಲಿ ಕುಖ್ಯಾತ ರೌಡಿ ಅತೂಶ್ ಕುಮ್ಮಕ್ಕು ಇರಬಹುದು ಎಂದು ಶಂಕೆ ವ್ಯಕ್ತಪಡಿಸಿ ಆತನನ್ನು ವಿಚಾರಣೆಗೊಳಪಡಿಸಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ಕಳೆದ ಬಾರಿ ಕದಿರೇಶ್ ಹತ್ಯೆ ಕೇಸ್‌ನಲ್ಲೂ ಅತೂಶ್‌ನನ್ನ ವಿಚಾರಣೆ ಮಾಡಿಲ್ಲ. ಈ ಬಾರಿ ಅತೂಶ್‌ನನ್ನ ವಿಚಾರಣೆ ಮಾಡುವಂತೆ ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ. 

ಜೂ.14 ರಂದು ಬೆಂಗಳೂರಿನಲ್ಲಿ ಹಾಡಹಗಲೇ ರೇಖಾ ಕದಿರೇಶ್‌ ಹತ್ಯೆ ಮಾಡಲಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನ ಪೊಲೀರು ಬಂಧಿಸಿದ್ದಾರೆ.