ವಿಜಯನಗರ ಜಿಲ್ಲೆ ಘೋಷಣೆ ಬಗ್ಗೆ ಸುಳಿವು ಬಿಟ್ಟುಕೊಟ್ಟ ಆನಂದ್ ಸಿಂಗ್!

ಹಿಂದೆ ನನ್ನ ಕ್ಷೇತ್ರದ ಸಮಸ್ಯೆ ಪ್ರಸ್ತಾಪಿಸಿ ನಾನು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಿದ್ದೆ| ಆಗಿನ ಸಿಎಂ ಸಿದ್ದರಾಮಯ್ಯ ಹಾಗೂ  ಕಾಂಗ್ರೆಸ್ ನಾಯಕರು ಯಾರು ತಲೆಕೆಡಿಸಿಕೊಳ್ಳಲಿಲ್ಲ| ಒಬ್ಬರು ರಾಜೀನಾಮೆ ಕೊಟ್ಟರೆ ಸರ್ಕಾರ ಬೀಳೋದಿಲ್ಲ ಎಂದು ಸುಮ್ಮನಾಗಿದ್ದರು| ಆದರೆ ಆಮೇಲೆ ಸರ್ಕಾರವೇ ಬಿದ್ದು ಹೋಯಿತು ಎಂದ ಆನಂದ್ ಸಿಂಗ್|

BJP Candidate Anand Singh Talks Over Vijayanagara District

ಬಳ್ಳಾರಿ[ನ.29]: ನನಗೆ ಸಚಿವ ಸ್ಥಾನ ಮುಖ್ಯವಲ್ಲ ಮೊದಲು ಹೊಸಪೇಟೆ ಜಿಲ್ಲೆಯಾಗಬೇಕು. ನಾನು ಸಚಿವರಾದರೆ ನಮ್ಮ ಕುಟುಂಬದವರಿಗೆ ಸಂತೋಷವಾಗಬಹುದು ಆದರೆ ವಿಜಯನಗರ ಜಿಲ್ಲೆಯಾದರೆ ಕ್ಷೇತ್ರದ ಜನತೆಗೆ ಸಂತೋಷವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ ಅವರು ಹೇಳಿದ್ದಾರೆ. 

ಶುಕ್ರವಾರ ಜಿಲ್ಲೆಯ ಹೊಸಪೇಟೆಯಲಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಡಿಸೆಂಬರ್ 9 ರಂದು ಚುನಾವಣೆ ಫಲಿತಾಂಶ ಹೊರಬೀಳಲಿದೆ,  ಡಿ.10 ರಂದು ವಿಜಯನಗರ ಜಿಲ್ಲೆ ಮಾಡುವ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಪರೋಕ್ಷವಾಗಿ ಮತ್ತೊಮ್ಮೆ ಹಂಪಿ ಉತ್ಸವದಲ್ಲಿ ಜಿಲ್ಲೆ ಘೋಷಣೆ ಮಾಡುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದೆ ನನ್ನ ಕ್ಷೇತ್ರದ ಸಮಸ್ಯೆ ಪ್ರಸ್ತಾಪಿಸಿ ನಾನು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಹೇಳಿದ್ದೆ, ಆದರೆ ಆಗಿನ ಸಿಎಂ ಸಿದ್ದರಾಮಯ್ಯ ಹಾಗೂ  ಕಾಂಗ್ರೆಸ್ ನಾಯಕರು ಯಾರು ತಲೆಕೆಡಿಸಿಕೊಳ್ಳಲಿಲ್ಲ, ಒಬ್ಬರು ರಾಜೀನಾಮೆ ಕೊಟ್ಟರೆ ಸರ್ಕಾರ ಬೀಳೋದಿಲ್ಲ ಎಂದು ಸುಮ್ಮನಾಗಿದ್ದರು. ಆದರೆ ಆಮೇಲೆ ಸರ್ಕಾರವೇ ಬಿದ್ದು ಹೋಯಿತು ಎಂದು ಹೇಳಿದ್ದಾರೆ.  ಮಾಜಿ ಸಿಎಂ ಸಿದ್ದರಾಮಯ್ಯ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಿ ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಅವರು,  ಸಿದ್ದರಾಮಯ್ಯನವರಿಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡವನು ನಾನಲ್ಲ, ಯಾರು ಮೋಸ ಮಾಡಿದ್ದಾರೆ ಎಂಬುದು ಅವರಿಗೆ ಗೊತ್ತಿದೆ. ಅವರ ಹೇಳಿಕೆಗೆ ನಾನು ಉತ್ತರ ಕೊಡಲ್ಲ, ನನ್ನ ಮತದಾರರೇ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

Latest Videos
Follow Us:
Download App:
  • android
  • ios