Asianet Suvarna News Asianet Suvarna News

ಬಿಜೆಪಿ ಭರ್ಜರಿ ಜಯಭೇರಿ, ಕಾಂಗ್ರೆಸ್‌ಗೆ ಮುಖಭಂಗ

ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಜೆಡಿಎಸ್ ಕೆಲ ಸ್ಥಾನದಲ್ಲಿ ಗೆಲುವು ಪಡೆದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇದು ನೂತನ ಸರಗೂರು ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ

BJP Bags Saraguru Town Municipality  snr
Author
Bengaluru, First Published Apr 1, 2021, 1:05 PM IST

ಸರಗೂರು(ಏ.01):  ನೂತನ ತಾಲೂಕು ಸರಗೂರು ಪಪಂಯ 12 ವಾರ್ಡ್‌ಗಳ ನಡೆದ ಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳಲ್ಲಿ ಗೆಲ್ಲುವುದರ ಮೂಲಕ ಭರ್ಜರಿ ಜಯ ಸಾಧಿಸಿದೆ.

ಜೆಡಿಎಸ್‌ ಮೂರು ಸ್ಥಾನಗಳನ್ನು ಗೆದ್ದು ದ್ವಿತೀಯ ಸ್ಥಾನದಲ್ಲಿ ಪಡೆಯುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಕಾಂಗ್ರೆಸ್‌ 2 ಸ್ಥಾನದ ಗೆಲುವಿನೊಂದಿಗೆ ಭಾರಿ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್‌ನಿಂದ ಹೊರಬಂದು 1ನೇ ವಾರ್ಡ್‌ನಿಂದ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೇಮಾವತಿ ರಮೇಶ್‌ ಗೆಲುವಿನ ನಗೆ ಬೀರಿದ್ದಾರೆ.

ಪಟ್ಟಣದ ಲಯನ್ಸ್‌ ಅಕಾಡೆಮಿ ಶಾಲೆಯಲ್ಲಿ ಬುಧವಾರ 12 ವಾರ್ಡ್‌ಗಳ ಮತ ಏಣಿಕೆ ಪ್ರಕ್ರಿಯೆ ಬೆಳಗ್ಗೆ 8ಕ್ಕೆ ಶುರುವಾಗಿ ಒಂದು ತಾಸಿನಲ್ಲಿ ಮುಕ್ತಾಯವಾಯಿತು.

ಹೊಸಬರಿಗೆ ಮಣೆ:  ಪಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹೊಸ ಮುಖಗಳಿಗೆ ಮತದಾರರು ಮಣೆ ಹಾಕಿದ್ದಾರೆ. ಕಳೆದ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಹನುಮನಾಯಕ 9ನೇ ವಾರ್ಡ್‌ನಿಂದ ಕಣಕ್ಕಿಳಿದಿದ್ದರು. ಅದೇ ರೀತಿ ಮಾಜಿ ಅಧ್ಯಕ್ಷೆ ಜ್ಯೋತಿಯೋಗೀಶ್‌ ಅವರ ಪತಿ ಯೋಗೀಶ್‌ 12ನೇ ವಾರ್ಡ್‌, ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೇ ಪತಿ ಬಿಲ್ಲಯ್ಯ 4ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದು, ಇವರಿಗೆ ಮತದಾರರು ಮಣೆ ಹಾಕಿಲ್ಲ. ಹೀಗಾಗಿ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.

ಈಶ್ವರಪ್ಪ ದೂರು : ಸರ್ಕಾರ ವಜಾಕ್ಕೆ ಆಗ್ರಹ .

ಒಂದನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ಹೇಮಾವತಿ ರಮೇಶ್‌ 297 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ರೇಖಾ ವಿರುದ್ಧ 77 ಮತಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಬಿಜೆಪಿಯ ಶಶಿರೇಖಾ 149, ಜೆಡಿಎಸ್‌ ಮಲ್ಲಿಕಾ 41 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಅದೇ ರೀತಿ 2ನೇ ವಾರ್ಡಿನಿಂದ ಜೆಡಿಎಸ್‌ ಚೈತ್ರ 422 ಮತಗಳೊಂದಿಗೆ ಕಾಂಗ್ರೆಸ್‌ನ ಬಹಿದಾಬಾನು ವಿರುದ್ಧ 105 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಬಿಜೆಪಿಯ ಕಸ್ತೂರಿ 6, ಪಕ್ಷೇತರ ಅಭ್ಯರ್ಥಿಗಳಾದ ಅಕ್ಕನಾಗಮ್ಮ 41, ಖಮರ್‌ ಉನ್ನೀಸ 32 ಮತ್ತು ರಾಜಮ್ಮ 11 ಮತಗಳನ್ನು ಪಡೆದು ಸೋತರು. 3ನೇ ವಾರ್ಡಿನಿಂದ ಜೆಡಿಎಸ್‌ ಅಭ್ಯರ್ಥಿ ಸಣ್ಣ ತಾಯಮ್ಮ 454 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಲಕ್ಷ್ಮೇ ಜಯಕುಮಾರ್‌ ವಿರುದ್ಧ 244 ಮತಗಳ ಅಂತರದಲ್ಲಿ ಜಯಗಳಿಸಿದರೆ, ಬಿಜೆಪಿಯ ಲಕ್ಷ್ಮೇನಾಗರಾಜು 105 ಮತಗಳನ್ನು ಪಡೆಯುವ ಮೂಲಕ ಸೋಲು ಅನುಭವಿಸಿದ್ದಾರೆ. 4ನೇ ವಾರ್ಡಿನಿಂದ ಜೆಡಿಎಸ್‌ ಅಭ್ಯರ್ಥಿ ಎಸ್‌.ಎಲ್‌. ರಾಜಣ್ಣ ಪಕ್ಷೇತರ ಅಭ್ಯರ್ಥಿ ಇದಿಯಪ್ಪ ವಿರುದ್ಧ 249 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ನ ಎಸ್‌.ಬಿ.ಬಿಲ್ಲಯ್ಯ ವಿರುದ್ಧ 142 ಮತಗಳಿಸಿದರೆ. ಬಿಜೆಪಿಯ ಪಿ. ಬೆಟ್ಟಯ್ಯ 11, ಕೃಷ್ಣ 20, ಎಸ್‌.ಬಿ. ಭೀಮಯ್ಯ 56 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

5ನೇ ವಾರ್ಡಿನಿಂದ ಬಿಜೆಪಿಯ ಎಸ್‌.ಎನ್‌. ನೂರಾಳಸ್ವಾಮಿ 260 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಎಸ್‌.ಎಸ್‌. ನಾಗರಾಜು ವಿರುದ್ಧ 22 ಮತಗಳ ಅಂತರದ ಜಯ ಸಾಧಿಸಿದ್ದಾರೆ.

ಇನ್ನೂ 6ನೇ ವಾರ್ಡಿನಿಂದ ಬಿಜೆಪಿಯ ಎಸ್‌. ರಾಧಿಕಾ 254 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಆರ್‌. ಮಹೇಶ್‌ ವಿರುದ್ಧ 120 ಮತಗಳ ಅಂತರದಿಂದ ಜಯ ಸಾಧಿಸಿದರೆ, ಜೆಡಿಎಸ್‌ನ ಅಶ್ವತ್‌ 14 ಮತ ಪಡೆದು ಸೋಲು ಅನುಭವಿಸಿದ್ದಾರೆ. 7ನೇ ವಾರ್ಡಿನಿಂದ ಬಿಜೆಪಿಯ ವಿ. ಶಿವಕುಮಾರ್‌ 296 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಶಿವಲಿಂಗಶಟ್ಟಿವಿರುದ್ಧ 136 ಮತಗಳ ಅಂತರದ ಭರ್ಜರಿ ಜಯ ಸಾಧಿಸಿದರೆ, ಜೆಡಿಎಸ್‌ ಲಿಂಗಾಚಾರಿ 76 ಮತ ಪಡೆದು ಸೋಲು ಅನುಭವಿಸಿದ್ದಾರೆ. 8ನೇ ವಾರ್ಡಿನಿಂದ ಬಿಜೆಪಿಯ ಉಮಾ 198 ಮತ ಪಡೆಯುವ ಮೂಲಕ ಕಾಂಗ್ರೆಸ್‌ನ ಭಾರತಿ ವಿರುದ್ಧ 86 ಮತಗಳ ಅಂತರದಲ್ಲಿ ಜಯ ಸಾಧಿಸಿದರೆ. ಪಕ್ಷೇತರ ಅಭ್ಯರ್ಥಿ ಡಿ. ವಸಂತ 59 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

9ನೇ ವಾರ್ಡಿನಿಂದ ಕಾಂಗ್ರೆಸ್‌ನ ಶ್ರೀನಿವಾಸ್‌ 428 ಮತಗಳೊಂದಿಗೆ ಬಿಜೆಪಿಯ ಹನುಮನಾಯಕ ವಿರುದ್ಧ 207 ಮತಗಳ ಅಂತರದ ಬಾರಿ ಗೆಲುವು ಸಾಧಿಸಿದರೆ. ಜೆಡಿಎಸ್‌ನ ಎಂ. ನಾಗರಾಜು 174, ಪಕ್ಷೇತರ ಸಿ. ಗೋವಿಂದರಾಜು 15 ಮತ್ತು ಎಸ್‌.ಕೆ. ಶಿವಣ್ಣ 3 ಮತಗಳನು ಪಡೆದು ಸೋಲು ಅನುಭವಿಸಿದ್ದಾರೆ. 10ನೇ ವಾರ್ಡಿನಿಂ ಬಿಜೆಪಿಯ ಆರ್‌. ದಿವ್ಯ 639 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಎನ್‌. ಭಾರತಿ ವಿರುದ್ಧ 627 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. 11ನೇ ವಾರ್ಡಿನಲ್ಲಿ ಕಾಂಗ್ರೆಸ್‌ ಚಲುವಕೃಷ್ಣ 365 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ರಾಜು ವಿರುದ್ಧ 31 ಮತಗಳ ಜಯ ಸಾಧಿಸಿದರೆ ಜೆಡಿಎಸ್‌ ಕುಳ್ಳಯ್ಯ 10 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಇನ್ನೂ 12ನೇ ವಾರ್ಡಿನಲ್ಲಿ ಬಿಜೆಪಿಯ ಎಚ್‌.ಆರ್‌. ವಿನಾಯಕ ಪ್ರಸಾದ್‌ 238 ಮತಗಳ ಮೂಲಕ ಕಾಂಗ್ರೆಸ್‌ನ ಯೋಗೀಶ್‌ ಕುಮಾರ್‌ ವಿರುದ್ಧ 51 ಮತಗಳ ಅಂತರದ ಜಯ ಸಾಧಿಸಿದರೆ, ಜೆಡಿಎಸ್‌ ಮಂಜುನಾಥ್‌ 9 ಮತ್ತು ಬಿ.ಎಂ. ಮಹದೇವಸ್ವಾಮಿ 23 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ಫಲಿತಾಂಶ ಹೊರಬೀಳುತ್ತಿದ್ದಂತೆ 6 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದ ಬಿಜೆಪಿ ಅಭ್ಯರ್ಥಿಗಳೊಂದಿಗೆ ಜಿಲ್ಲಾ ಕಾರ್ಯದರ್ಶಿ ಭಾಗ್ಯಶ್ರೀ ಭಟ್‌, ಸಾಮಾಜಿಕ ಜಾಲತಾಣಗಳ ಜಿಲ್ಲಾ ಸಂಚಾಲಕ ಸತೀಶ್‌ ಬಹದ್ದೂರ್‌, ಜಿಲ್ಲಾ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್‌, ತಾಲೂಕು ಅಧ್ಯಕ್ಷ ಗುರುಸ್ವಾಮಿ, ಮುಖಂಡರಾದ ಪರಿಕ್ಷೀತ ರಾಜೇ ಅರಸ್‌, ಗಿರೀಶ್‌, ಯೋಗೇಶ್‌ ಕುಮಾರ್‌, ಸುನಂದರಾಜು, ವೆಂಕಟಸ್ವಾಮಿ, ಚನ್ನಪ್ಪ, ವಿವೇಕ್‌ ಮುಂತಾದವರು ರೋಡ್‌ ಶೋ ನಡೆಸಿದರು.

ಇನ್ನೂ 3 ಸ್ಥಾನಗಳಲ್ಲಿ ಗೆಲ್ಲುವ ಮೂಲಕ 2ನೇ ಸ್ಥಾನದಲ್ಲಿರುವ ಜೆಡಿಎಸ್‌ ಸಹ ಮಾಜಿ ಶಾಸಕರ ಪುತ್ರ ಜಯಪ್ರಕಾಶ್‌, ತಾಲೂಕು ಅಧ್ಯಕ್ಷ ರಾಜೇಂದ್ರ, ಸರಗೂರು ಅಧ್ಯಕ್ಷ ಬಸವಣ್ಣ, ಮಳಲಿ ಶಾಂತ, ಸಾಗರೆ ಮಹೇಂದ್ರ, ಚಾ. ನಂಜುಂಡ ಮೂರ್ತಿ, ಗೋಪಾಲಸ್ವಾಮಿ ಮುಂತಾದವರ ನೇತೃತ್ವದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಕಾಂಗ್ರೆಸ್‌ 2 ಸ್ಥಾನ ಗಳಿಸುವ ಮೂಲಕ 3ನೇ ಸ್ಥಾನಕ್ಕೆ ಕುಸಿತ ಕಂಡ ಹಿನ್ನೆಲೆ ಕಾಂಗ್ರೆಸ್‌ನ ಮುಖಂಡರು ಮತ ಎಣಿಕೆ ಕೇಂದ್ರದತ್ತ ಸುಳಿಯಲೇ ಇಲ್ಲ.

ಠೇವಣಿ ಕಳೆದುಕೊಂಡವರು: ಕಸ್ತೂರಿ ಬಿಜೆಪಿ 6 ಮತಗಳು, ಪಿ. ಬೆಟ್ಟಯ್ಯ ಬಿಜೆಪಿ 11 ಮತಗಳು, ಅಶ್ವಥ್‌ ಜೆಡಿಎಸ್‌ 14 ಮತಗಳು,   ಕಾಂಗ್ರೆಸ್‌ 12 ಮತಗಳು, ಕುಳ್ಳಯ್ಯ- ಜೆಡಿಎಸ್‌ 10 ಮತಗಳು, ಮಂಜುನಾಥ್‌ ಜೆಡಿಎಸ್‌ 9 ಮತಗಳನ್ನು ಗಳಿಸಿದ್ದಾರೆ.

ಬಿಜೆಪಿ ಹರ್ಷ : ಜಿಲ್ಲಾ ಉಸ್ತುವಾರಿ ಸಚಿವ ಎಸ್‌,ಟಿ. ಸೋಮಶೇಖರ್‌, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮಾಜಿ ಎಂಎಲ್‌ಸಿ ಸಿದ್ದರಾಜು ಅವರ ಶ್ರಮದಿಂದ ಈ ಗೆಲವು ಸಾಧ್ಯವಾಗಿದೆ ಎಂದು ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌,ತಾಲೂಕು ಅಧ್ಯಕ್ಷ ಗುರುಸ್ವಾಮಿ ಹರ್ಷಿಸಿದ್ದಾರೆ.

Follow Us:
Download App:
  • android
  • ios