Asianet Suvarna News Asianet Suvarna News

ಅತ್ತ ಮುಖಂಡ ರಾಜೀನಾಮೆ : ಇತ್ತ ಬಿಜೆಪಿಗೊಲಿದ ಅಧಿಕಾರ

  • ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪಟ್ಟವನ್ನು ಅಲಂಕರಿಸಿದ ಬಿಜೆಪಿ
  • ಹುಳಿಯಾರು ಪಟ್ಟಣ ಪಂಚಾಯತಿಯಾದ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು ಬಿಜೆಪಿಗೆ ಒಲಿದ ಅಧಿಕಾರ
BJP bags Huliyar town municipality snr
Author
Bengaluru, First Published Oct 2, 2021, 11:51 AM IST | Last Updated Oct 2, 2021, 11:51 AM IST

ಹುಳಿಯಾರು(ಅ.02):  ಇಲ್ಲಿನ ಪಟ್ಟಣ ಪಂಚಾಯತಿಯ (Town Municipolity) ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಬಿಜೆಪಿಯ ಅಭ್ಯರ್ಥಿಗಳು ತಲಾ 9 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪಟ್ಟವನ್ನು ಅಲಂಕರಿಸಿದರು.

ಹುಳಿಯಾರು ಪಟ್ಟಣ ಪಂಚಾಯತಿಯಾದ ನಂತರ ಇದೇ ಮೊದಲ ಬಾರಿಗೆ ಚುನಾವಣೆ (Election) ನಡೆದಿದ್ದು ಹುಳಿಯಾರಿನ ಜನತೆಯ ಆಶಯದಂತೆ ಮೊಟ್ಟ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿಯಾಗಿ ಕುಮಾರ್ ಹಾಗೂ ಶೃತಿ ಆಯ್ಕೆಯಾಗಿದ್ದು, ಜನಸಾಮಾನ್ಯರ ಕಷ್ಟಗಳಿ ಸ್ಪಂದಿಸಿ ಹುಳಿಯಾರಿನ ಅಭಿವೃದ್ಧಿಯ ಪಥದತ್ತ ಕೊಂಡೊಯ್ದು ಇತಿಹಾಸದ ಪುಟಗಳಲ್ಲಿ ಬರೆಯುವಂತಾಗಬೇಕೆಂದು ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ (JD Madhuswamy) ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಕಿವಿಮಾತು ಹೇಳಿದರು. 

ಕಾಂಗ್ರೆಸ್‌ ಕೋಟೆಯಲ್ಲಿ ಬಿಜೆಪಿ, ಜೆಡಿಎಸ್‌ ದರ್ಬಾರ್‌

ಹುಳಿಯಾರಿನ ಅಭಿವೃದ್ಧಿಯ ವಿಚಾರದಲ್ಲಿ ಹಿಂದಿನ ದಿನಗಳಲ್ಲಿ ಜನರಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಹಾಗಾಗಿ ಇದೆ ಮೊದಲ ಬಾರಿಗೆ ಪ್ರಪ್ರಥಮವಾಗಿ ಬಿಜೆಪಿ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಪಟ್ಟಣವನ್ನು ಅಭಿವೃದ್ಧಿಯ ಪತದತ್ತ ಕೊಂಡೊಯ್ಯುವ ಮೂಲಕ ರಾಜಕಾರಣದಲ್ಲೂ ಒಳ್ಳೆಯವರಿರುತ್ತಾರೆ ಹಾಗೂ ಜನರ ಪರವಾಗಿ ಕೆಲಸ ಮಾಡುವವರಿರುತ್ತಾರೆ ಎಂಬುದನ್ನು ನೀವು ನಿರೂಪಿಸಬೇಕು ಹಾಗೂ ಭಾರತೀಯ ಜನತಾ ಪಕ್ಷವನ್ನು ಬೆಳೆಸುವಂತಾಗಬೇಕು, ನಿಮಗೆ ನಮ್ಮಿಂದ ಸಹಕಾರವೇನಾದರೂ ಬೇಕಾದಲ್ಲಿ ನನಗಾಗಲಿ ಎಂಪಿ ಬಸವರಾಜು ಅವರ ಗಮನಕ್ಕೆ ತನ್ನಿ ನಾವು ನಿಮಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು. 

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಕಿರಣ್ ಕುಮಾರ್, ಸಚಿವ ಮಾಧುಸ್ವಾಮಿ ಅವರ ಮಾರ್ಗದರ್ಶನದಂತೆ ನಾನು ಹುಳಿಯಾರಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದರು.

ಕಮಲದತ್ತ ಪ್ರಭಾವಿ ಕಾಂಗ್ರೆಸ್‌ ಮುಖಂಡ: ರಾಜಕೀಯದಲ್ಲಿ ಭಾರೀ ಸಂಚಲನ..! 

ಕಳೆದ ಎರಡು ದಿನಗಳ ಹಿಂದಷ್ಟೇ ತುಮಕೂರು (Tumakuru) ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ (Suresh Gowda) ತಮ್ಮ ಸ್ಥಾನವನ್ನು ತೊರೆದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆದರೆ ಅವರ ರಾಜೀನಾಮೆ ಸಚಿವ ಮಾಧುಸ್ವಾಮಿ ಅವರ ಕ್ಷೇತ್ರ ವ್ಯಾಪ್ತಿಯ ಹುಳಿಯಾರು ಪಟ್ಟಣ ಪಂಚಾಯತ್ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಬಿಜೆಪಿ ಮೊದಲ ಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದೆ. 

ಇನ್ನು ಬಿಜೆಪಿ ತೊರೆದಿರುವ ಸುರೇಶ್ ಗೌಡ ಅಸಮಾಧಾನಗೊಂಡಿರುವ ಬಗ್ಗೆಯೂ ಮಾತುಗಳಿದ್ದು, ಕಾಂಗ್ರೆಸ್ ಸೇರುವ ವದಂತಿಗಳು ಜೋರಾಗಿದೆ. ಇನ್ನೊಂದು ಕಡೆ ಆಪರೇಷನ್ ಹಸ್ತವು ಜೋರಾಗಿಯೇ ಸದ್ದು ಮಾಡುತ್ತಿದೆ. 

Latest Videos
Follow Us:
Download App:
  • android
  • ios