ಬಿಟ್‌ ಕಾಯಿನ್‌ ಖರೀದಿಯಲ್ಲಿ ನಗರದ ವ್ಯಕ್ತಿಯೊಬ್ಬರಿಗೆ .75 ಲಕ್ಷ ವಂಚಿಸಿದ ಬಿಹಾರ ಮೂಲದ ಆರೋಪಿ ಶಂತನು ಸಿನ್ಹಾಗೆ ಜಾಮೀನು ನೀಡಿದ್ದ ಅಧೀನ ನ್ಯಾಯಾಲಯ ಆದೇಶ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಬೆಂಗಳೂರು (ಮಾ.01): ಬಿಟ್‌ ಕಾಯಿನ್‌ (Bitcoin) ಖರೀದಿಯಲ್ಲಿ ನಗರದ (Bengaluru) ವ್ಯಕ್ತಿಯೊಬ್ಬರಿಗೆ .75 ಲಕ್ಷ ವಂಚಿಸಿದ ಬಿಹಾರ ಮೂಲದ ಆರೋಪಿ ಶಂತನು ಸಿನ್ಹಾಗೆ ಜಾಮೀನು ನೀಡಿದ್ದ ಅಧೀನ ನ್ಯಾಯಾಲಯ ಆದೇಶ ರದ್ದುಪಡಿಸಲು ಹೈಕೋರ್ಟ್‌ (High Court) ನಿರಾಕರಿಸಿದೆ. ಪ್ರಕರಣ ದೂರುದಾರರಾದ ನಾಗಸಂದ್ರ ನಿವಾಸಿ ಟಿ.ವೆಂಕಟೇಶಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಪ್ರಕರಣದ ಇತರೆ ನಾಲ್ವರು ಆರೋಪಿಗಳಿಗೆ ಜಾಮೀನು ದೊರೆತಿದೆ. ಆರೋಪಿ ವಿರುದ್ಧ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದಾದ ಆರೋಪಗಳಿಲ್ಲ. ಇದರಿಂದ ನ್ಯಾಯಾಂಗ ಬಂಧನದಲ್ಲಿರುವ ಅಗತ್ಯ ಕಂಡು ಬರುತ್ತಿಲ್ಲ. ಜತೆಗೆ, ಪೂರ್ವಾನುಮತಿ ಪಡೆಯದೆ ರಾಜ್ಯಬಿಟ್ಟು ತೆರಳುವಂತಿಲ್ಲ. 

60 ದಿನದವರೆಗೆ ಅಥವಾ ದೋಷಾರೋಪ ಪಟ್ಟಿಸಲ್ಲಿಕೆಯಾಗುವವರೆಗೂ 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಇದೇ ಮಾದರಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಜಾಮೀನು ಮಂಜೂರಾತಿಗೆ ಅಧೀನ ನ್ಯಾಯಾಲಯವು ಷರತ್ತು ವಿಧಿಸಿದೆ. ಇಂತಹ ಸಂದರ್ಭದಲ್ಲಿ ಜಾಮೀನು ಮಂಜೂರಾತಿ ಆದೇಶ ರದ್ದುಪಡಿಸುವ ಅಗತ್ಯವೇನಿಲ್ಲ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

Hijab Row ಹಿಜಾಬ್ ವಿವಾದ, ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಿನ್ಸಿಪಾಲ್‌ಗೆ ಜೀವ ಬೆದರಿಕೆ

ಬಿಟ್‌ ಕಾಯಿನ್‌ ಖರೀದಿಯಲ್ಲಿ .75 ಲಕ್ಷ ಪಡೆದು ಹಿಂದಿರುಗಿಸದೆ ಶಂತನು ಸಿನ್ಹಾ ವಂಚಿಸಿದ್ದಾರೆ. ಸಿಂಗಾಪುರ, ಮಲೇಷಿಯಾ ದೇಶದಲ್ಲಿ ಮಾಸಿಕ ದೊಡ್ಡ ಮೊತ್ತದ ಹಣದ ಆದಾಯ ಬರುವುದಾಗಿ ಆಮಿಷವೊಡ್ಡಿ ಸಾಕಷ್ಟುಜನರಿಗೆ ವಂಚಿಸಿದ್ದಾರೆ. ಸುಮಾರು 2500ಕ್ಕೂ ಹೆಚ್ಚು ಜನರು ಬಿಟ್‌ಕಾಯಿನ್‌ ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡಿದ್ದು, ಸುಮಾರು .1500 ಕೋಟಿ ವಂಚನೆಯಾಗಿದೆ. ಆ ಮೂಲಕ ದೇಶದಲ್ಲಿ ಅರ್ಥಿಕ ಅಪರಾಧ ಎಸಗಲಾಗಿದೆ. ಈ ಪ್ರಕರಣದಲ್ಲಿ ಶಂತನು ಸಿನ್ಹಾ ಸಂಬಂಧ ಹೊಂದಿದ್ದಾರೆ ಎಂದು ವೆಂಕಟೇಶ್‌ ಮೂರ್ತಿ ದೂರು ಸಲ್ಲಿಸಿದ್ದರು.

ಸಿಐಡಿಯ ಸೈಬರ್‌ ಕೈಂ ಠಾಣಾ ಪೊಲೀಸರು ಬಿಹಾರದ ಪಾಟ್ನಾ ಮೂಲದ ಆರೋಪಿ ಶಂತನು ಸಿನ್ಹಾ ಅವರನ್ನು ಬಂಧಿಸಿದ್ದರು. ನೆಲಮಂಗಲದ 1ನೇ ಹೆಚ್ಚವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿ 2021ರ ಮೇ 5ರಂದು ಆದೇಶಿಸಿತ್ತು. ಆ ಆದೇಶ ರದ್ದುಪಡಿಸಬೇಕು ಎಂದು ಕೋರಿ ದೂರುದಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌ ಛೀಮಾರಿ ಹಾಕಿದ್ರೂ ಬುದ್ಧಿ ಕಲಿಯದ BBMP: ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ನವೀಕರಣ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ನಂತರವೂ ನಗರದ ಹಲವು ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು ದುರಸ್ತಿಯಾಗದೇ ವಾಹನ ಸವಾರರು ನಿತ್ಯ ಪರದಾಡಬೇಕಾಗಿದೆ. ಸಿಎನ್‌ಆರ್‌ ರಾವ್‌ ರಸ್ತೆ, ಮಾಗಡಿ ರಸ್ತೆ, ನಾಗರಭಾವಿಯ ಕೆಲ ಉಪ ಮುಖ್ಯರಸ್ತೆಗಳು ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಇಂದಿಗೂ ದುರಸ್ತಿಯಾಗಿಲ್ಲ. 

ನಾಯಂಡಹಳ್ಳಿಯ ಮೆಟ್ರೋ ಲೇಔಟ್‌ ರಸ್ತೆ, ಗಾಂಧಿನಗರದ ಕೆಲವು ರಸ್ತೆಗಳು, ಶ್ರೀರಾಂಪುರ- ಓಕಳಿಪುರಂ 1ನೇ ಮುಖ್ಯರಸ್ತೆ, ಭಾಷ್ಯಂ ವೃತ್ತದಿಂದ ಮಾಗಡಿ ರಸ್ತೆ, ಕುವೆಂಪು ರಸ್ತೆ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಸಂಪರ್ಕ ಕಲ್ಪಿಸುವ ಶಿವನಗರ ಸಬ್‌ ಆರ್ಟಿರಿಯಲ್‌ ರಸ್ತೆ, ಭದ್ರಪ್ಪ ಲೇಔಟ್‌ನಿಂದ ಟಾಟಾ ನಗರ ಮಾರ್ಗವಾಗಿ ಸಾಗುವ ಕೊಡಿಗೆಹಳ್ಳಿ ರಸ್ತೆ, ಸಿಸಿಬಿ ಕೇಂದ್ರ ಕಚೇರಿಯಿಂದ ರಾಯನ್‌ ವೃತ್ತದಿಂದ ಚಾಮರಾಜಪೇಟೆಗೆ ಸಾಗುವ ರಸ್ತೆ ಮತ್ತು ಕೆ.ಆರ್‌.ಮಾರುಕಟ್ಟೆ ಮೆಟ್ರೋ ನಿಲ್ದಾಣದಿಂದ ಅಪೆಕ್ಸ್‌ ಬ್ಯಾಂಕ್‌ಗೆ ತೆರಳುವ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿನ ಗುಂಡಿಗಳನ್ನು ಸರಿಪಡಿಸುವ ಗೋಜಿಗೆ ಪಾಲಿಕೆ ಹೋಗಿಲ್ಲ.

Hijab Row: ಹಿಜಾಬ್‌ ಧಾರಣೆ ಅತ್ಯಗತ್ಯ ಧಾರ್ಮಿಕ ಆಚರಣೆಯೇ? ಎಲ್ಲ ಭಾರ ಹೈಕೋರ್ಟ್‌ ಮೇಲೆ

ಪೈಪ್‌ಲೈನ್‌ ಕಾಮಗಾರಿ ಕಿರಿಕಿರಿ: ಮಲ್ಲೇಶ್ವರಂನ ಸಿಎನ್‌ಆರ್‌ ರಾವ್‌ ರಸ್ತೆಯಲ್ಲಿ ಜಲಮಂಡಳಿ 700 ಎಂಎಂ ಮತ್ತು 300 ಎಂಎಂ ಪೈಪ್‌ ಹಾಕುವ ಕಾಮಗಾರಿ (Work) ನಡೆಸುತ್ತಿದೆ. ಕಾಮಗಾರಿ ವಿಳಂಬದಿಂದಾಗಿ ಜಲಮಂಡಳಿ (Water Board) ಪೈಪ್‌ಲೈನ್‌ ಅಳವಡಿಸಲು ತೆಗೆದ ಗುಂಡಿ ಮುಚ್ಚಿಲ್ಲ. ಒಂದು ತಿಂಗಳು ಕಳೆದರೂ ಸಹ ಈ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಮುಗಿಯುವಂತೆ ಕಾಣುತ್ತಿಲ್ಲ. ಇದು ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದೆ.