Chamarajanagar: ಆರು ವರ್ಷದ ಬಳಿಕ ಬಿಳಿಗಿರಿರಂಗನ ಅದ್ದೂರಿ ರಥೋತ್ಸವ: ಸಾವಿರಾರು ಭಕ್ತರು ಭಾಗಿ

  *  ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಲ್ಲಿರುವ ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನ
  *  ರಥೋತ್ಸವ ಬಂದ ಭಕ್ತರ ಪರದಾಟ, ಟ್ರಾಫಿಕ್ ಜಾಮ್
  *  ರಥೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು 
 

Biligiri Ranganathaswamy Fair Held after 6 Years in Chamarajanagar grg

ಚಾಮರಾಜನಗರ(ಏ.17):  ಚಂಪಕಾರಣ್ಯ ಕ್ಷೇತ್ರ ಚಿಕ್ಕ ತಿರುಪತಿ ಎಂದೇ ಹೆಸರುವಾಸಿಯಾದ ಬಿಳಿಗಿರಿರಂಗನಾಥ ಸ್ವಾಮಿಯ ರಥೋತ್ಸವ (Biligiri Ranganathaswamy Fair) 6 ವರ್ಷದ ನಂತರ ಇಂದು ಅದ್ಧೂರಿಯಾಗಿ ನಡೆಯಿತು. ರಾಜ್ಯದ(Karnataka) ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾದ್ರು.ರಂಗಭಾವನ ಖುಷಿಯ ಆಚರಣೆಗೆ ಸಾಕ್ಷಿಯಾದರು.

Biligiri Ranganathaswamy Fair Held after 6 Years in Chamarajanagar grg

ಹೌದು, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ. ಚಾಮರಾಜನಗರ(Chamarajanagar) ಜಿಲ್ಲೆ ಯಳಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ತೀರ್ಥಕ್ಷೇತ್ರ. ಇಲ್ಲಿ ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ಬಿಳಿಗಿರಿ ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತದೆ. ಆದರೆ ಕಳೆದ 6 ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ದೇವಸ್ಥಾನದ ಜೀರ್ಣೋದ್ದಾರ ಹಾಗೂ ನೂತನ ರಥದ ನಿರ್ಮಾಣ ಹಿನ್ನೆಲೆಯಲ್ಲಿ 6 ವರ್ಷಗಿಂದ ರಥೋತ್ಸವ ನಿಂತಿತ್ತು. ದೇವಸ್ಥಾನದ ಸಂಪೂರ್ಣ ಕೆಲಸ ಮುಗಿದಿರುವುದರಿಂದ ಈ ಬಾರಿ ನೂತನ ರಥದಲ್ಲಿ ರಥೋತ್ಸವ ನಡೆಯಿತು. ಇಂದು ಮಧ್ಯಾಹ್ನ 12 ರಿಂದ 12.22 ರೊಳಗೆ ಸಲ್ಲಿದ ಶುಭ ಕರ್ಕಾಟಕ ಲಗ್ನದಲ್ಲಿ ರಥೋತ್ಸವ ನಡೆಯಿತು.

Kollegal: ದೇವಾಲಯಕ್ಕೆ ಅನುದಾನ ಕೊಡಲು ವಿಳಂಬ: ಶಾಸಕರ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು..!

ರಥೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು 

ಇನ್ನು ಈ ಬಾರಿ ಖಾಸಗಿ ವಾಹನಗಳಿಗೆ ಗುಂಬಳ್ಳಿ‌ ಚೆಕ್ ಪೋಸ್ಟ್ ಬಳಿಯಿಂದ ಪ್ರವೇಶ ನಿರ್ಬಂದಿಸಲಾಗಿತ್ತು. ಚೆಕ್‌ಪೋಸ್ಟ್‌ನಿಂದ ಕೆ‌ಎಸ್‌ಆರ್‌ಟಿಸಿ(KSRTC) ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಸಾಕಷ್ಟು ಅನಾನುಕೂಲ ಉಂಟಾಯಿತು. ಸುಮಾರು 6 ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಬೇಸತ್ತ ಪೊಲೀಸರು(Police) ಕೊನೆಗೆ ಖಾಸಗಿ ವಾಹನಗಳಿಗೂ ಪ್ರವೇಶ ಕಲ್ಪಿಸಿದ್ರು.‌

ಒಟ್ನಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸದೇ ಇರುವುದರಿಂದ ಭಕ್ತಾದಿಗಳು ಪರದಾಡುವಂತಾಯಿತು.ಇನ್ನೂ ಮುಂದಾದ್ರೂ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಲಿ ಎಂಬುದು ಎಲ್ಲರ ಒತ್ತಾಯ ಕೂಗು ಕೇಳಿಬಂತು. 6 ವರ್ಷದ ನಂತರ ಭಕ್ತರು ಕೂಡ ರಥೋತ್ಸವ ಕಣ್ತುಂಬಿಕೊಂಡರು. 
 

Latest Videos
Follow Us:
Download App:
  • android
  • ios