ಬೆಂಗಳೂರು (ಸೆ.30) ಓಲಾ. ಉಬರ್ ಕಾಲು ಚಾಲಕರಿಂದ ಯುವತಿಯರಿಗೆ ಕಿರುಕುಳ ನಡೆಯುತ್ತಿದ್ದ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ ಅದೇ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ಬಾರಿ  ಬೈಕ್ ಚಾಲಕನೇ ಯುವತಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ.

ತಿಲಕ್​ನಗರದ ಬಿಲಾಲ್​ ಮಸೀದಿ ಬಳಿಯ ಸಿಗ್ನಲ್​ನಲ್ಲಿ 26 ವರ್ಷದ ಮಹಿಳಾ ಫೋಟೋಗ್ರಾಫರ್​​ಗೆ ಸಿಗ್ನಲ್​ ಜಂಪ್​ ಮಾಡು ಇಲ್ಲದಿದ್ದರೆ ರೇಪ್​ ಮಾಡುತ್ತೇನೆ ಎಂದು ಚಂದ್ರಶೇಖರ್ ಎಂಬಾತ ಬೆದರಿಕೆ ಹಾಕಿದ್ದಾನೆ.

ಸಿಗ್ನಲ್​ನಲ್ಲಿ ರೆಡ್​ಲೈಟ್​ ಬಿದ್ದಿದ್ದರಿಂದ ಯುವತಿ ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಬೈಕ್​ ಸವಾರ ಜೋರಾಗಿ ಹಾರನ್​ ಮಾಡಿ, ಆಕೆಗೆ ಸಿಗ್ನಲ್​ ಜಂಪ್​ ಮಾಡುವಂತೆ ಕೂಗಿದ್ದಾನೆ. ಆದರೆ ರೆಡ್​ಲೈಟ್​ ಬಿದ್ದದ್ದರಿಂದ ಯುವತಿ ಸಿಗ್ನಲ್​ ಜಂಪ್​ ಮಾಡಿರಲಿಲ್ಲ. ಹೀಗಾಗಿ ಆಕೆಯ ಜೊತೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ರೊಚ್ಚಿಗೆದ್ದ ಯುವತಿಯೂ ಪ್ರತ್ಯುತ್ತರ ನೀಡಿದ್ದಾರೆ.

ಆರೋಪಿ

ಅಷ್ಟೇ ಅಲ್ಲದೆ ಗ್ರೀನ್​ ಸಿಗ್ನಲ್​ ಬಿದ್ದ ನಂತರ ಆ ಯುವತಿಯ ಕಾರು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಕಾರನ್ನು ಅಡ್ಡಗಟ್ಟಿ ಅತ್ಯಾಚಾರ ಮಾಡುವ ಬೆದರಿಕೆ ಹಾಕಿದ ಎಂದು ಯುವತಿ ಆರೋಪಿಸಿದ್ದಾಳೆ. ಪಕ್ಕಕ್ಕೆ ನಡಿ, ಹೇಗೆ ರೇಪ್​ ಮಾಡುತ್ತೇನೆ ಅಂತಾ ತೋರಿಸುತ್ತೇನೆ ಎಂದು ಬೆದರಿಸಿದ್ದಾನೆ. ಇದಾದ ಬಳಿಕ ಆ ಮಹಿಳೆ ತಮ್ಮ ಕ್ಯಾಮೆರಾದಿಂದ ಬೈಕ್​ನ ಫೋಟೋ ತೆಗೆದಿದ್ದಾಳೆ. ಬಳಿಕ ತಿಲಕ್​ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಚಂದ್ರಶೇಖರ್(43)​ನನ್ನು ತಿಲಕ್​ನಗರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.