ಅ.2ರಂದು ರಸ್ತೆ ದುರಸ್ತಿಗೆ ಆಗ್ರಹಿಸಿ ಬೈಕ್‌ Rally, ಧರಣಿ

  • ಅ.2ರಂದು ರಸ್ತೆ ದುರಸ್ತಿಗೆ ಆಗ್ರಹಿಸಿ ಬೈಕ್‌ ರಾರ‍ಯಲಿ, ಧರಣಿ
  •  ಹಳುವಳ್ಳಿ ಬಾಣಾವರ, ಮತ್ತಿಕೆರೆ, ಗಂಜಲಗೋಡು, ಹಾದಿಹಳ್ಳಿ ಗ್ರಾಮಸ್ಥರ ನಿರ್ಧಾರ
Bike rally sit-in demanding road repair on oct 2

ಚಿಕ್ಕಮಗಳೂರು (ಅ.22) : ರಸ್ತೆ ದುರಸ್ತಿಗೆ ಒತ್ತಾಯಿಸಿ ಅ.2 ರಂದು ನಾಲ್ಕೈದು ಹಳ್ಳಿಯ ಜನರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದಲ್ಲಿ ಬೃಹತ್‌ ಬೈಕ್‌ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹೇಳಿದರು. ಹಳುವಳ್ಳಿ ಬಾಣಾವರ, ಮತ್ತಿಕೆರೆ, ಗಂಜಲಗೋಡು, ಹಾದಿಹಳ್ಳಿ ಸೇರಿದಂತೆ 8 ರಿಂದ 10 ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಗ್ರಾಮಸ್ಥರು, ವಾಹನ ಸವಾರರು ಪರದಾಡುವಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಸ್ತೆ ದುರಸ್ತಿಗೆ ಆಗ್ರಹಿಸಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮನೆ ಮುಂದೆ ರೈತಸಂಘ ಪ್ರತಿಭಟನೆ

ಈ ರಸ್ತೆಯಲ್ಲಿ ಬಾಡಿಗೆ ವಾಹನಗಳು ಬರುವುದಿಲ್ಲ, ಬಂದರೂ ಡಬಲ್‌ ಬಾಡಿಗೆ ಕೇಳುತ್ತಾರೆ. ವಾಹನ ಸವಾರರು ಒಂದು ಗುಂಡಿ ತಪ್ಪಿಸಿಕೊಳ್ಳಲು ಮುಂದಾದರೆ ಮತ್ತೊಂದು ಗುಂಡಿ ಸಿಗುತ್ತದೆ. ರಸ್ತೆಯಲ್ಲಿ ಸರ್ಕಸ್‌ ಮಾಡಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.

ರಸ್ತೆ ್ತ ದುರಸ್ತಿಪಡಿಸುವಂತೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾಡಳಿತಕ್ಕೆ, ಜಿಲ್ಲಾ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ. ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ರಸ್ತೆ ್ತ ದುರಸ್ತಿಗೆ ಪಡಿಸುವಂತೆ ಆಗ್ರಹಿಸಿ ಗಾಂಧಿ ಜಯಂತಿಯಂದು ಬೈಕ್‌ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರೊಂದಿಗೆ ಕೆ.ಆರ್‌.ಪೇಟೆ ಗಡಿಯ ಅರಳಿಮರದ ಬಳಿಯಿಂದ ಹೊರಡುವ ರಾರ‍ಯಲಿಯು ಚಿಕ್ಕಮಗಳೂರು ನಗರದ ಆಜಾದ್‌ ಪಾರ್ಕ್ ತಲುಪಿ, ಆಜಾದ್‌ ಪಾರ್ಕ್ ವೃತ್ತದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

ಬೇಲೂರು-ವ ುೂಡಿಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ 12 ವರ್ಷಗಳಿಂದ ದುರಸ್ತಿಯಾಗದೇ ಗುಂಡಿಗಳು ಬಿದ್ದಿವೆ. ಸತತ 3 ಬಾರಿ ಶಾಸಕರಾಗಿರುವ ಎಂ.ಪಿ.ಕುಮಾರಸ್ವಾಮಿ ಈ ಅವ್ಯವಸ್ಥೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಭಾಗಕ್ಕೂ ನಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Chikkamagaluru; ವೃದ್ಧೆಯನ್ನ ಜೋಳಿಗೆಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು!

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್‌ ಬಾಣಾವರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ತಾಲೂಕು ಸಮಿತಿ ಸಂಚಾಲಕ ಬಿ.ವಿ.ಶಿವೇಗೌಡ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಎಂ.ಬಿ.ಚಂದ್ರಶೇಖರ್‌, ಕಡೂರು ತಾಲೂಕು ಅಧ್ಯಕ್ಷ ಆನಂದ್‌, ಕಡೂರು ತಾಲೂಕು ಉಪಾಧ್ಯಕ್ಷ ಬಸವರಾಜ್‌ ಬ್ಯಾಗಡೇಹಳ್ಳಿ, ಲೋಕೇಶ್‌, ಸೋಮಶೇಖರ್‌, ಪರ್ವತೇಗೌಡ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios