ರಸ್ತೆ ದುರಸ್ತಿಗೆ ಆಗ್ರಹಿಸಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮನೆ ಮುಂದೆ ರೈತಸಂಘ ಪ್ರತಿಭಟನೆ

  • ಶಾಸಕರ ಮನೆ ಮುಂದೆ ಅಹೋರಾತ್ರಿ ಧರಣಿ
  • ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಮನೆ ಎದುರು ಧರಣಿ
  • ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ

 

Farmers union protests to repair the road at infront of mla mp kumaraswamy house

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.21) : ರಸ್ತೆಯನ್ನು ದುರಸ್ತಿ ಗೊಳಿಸುವಂತೆ ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ  ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಮನೆ ಎದುರು ರೈತ ಸಂಘಟನೆ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಮೂಡಿಗೆರೆ(Mudigere) ತಾಲೂಕಿನ ಕೆಲ್ಲೂರು(Kelluru) ಬಳಿಯಿರುವ ಶಾಸಕರ ನಿವಾಸ ಮುಂಭಾಗದಲ್ಲಿ ರೈತ ಸಂಘಟನೆಯ 50 ಕ್ಕೂ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  

Chikkamagaluru; ವೃದ್ಧೆಯನ್ನ ಜೋಳಿಗೆಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು!

ತಾಲೂಕಿನ ಹಳುವಳ್ಳಿ, ಅರಳಿಮರ, ಗಂಜಲಗೋಡು, ಮತ್ತಿಕೆರೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವೊಲಿಕೆ ಮಾಡಿದ್ರೂ, ಪ್ರತಿಭಟನಾಕಾರರು ಬಗ್ಗುತ್ತಿಲ್ಲ. ಸುಮಾರು 50 ಕ್ಕೂ ಹೆಚ್ಚು ಕಾರ್ಯಕರ್ತರು ಕುಮಾರಸ್ವಾಮಿ(M.P.Kumaraswamy) ಮನೆ ಎದುರು ಧರಣಿ ನಡೆಸುತ್ತಿದ್ದು, ರಾತ್ರಿ ಯಿಂದ ಬೆಳಗ್ಗೆವರೆಗೂ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ಕೈಬಿಡುವುದಿಲ್ಲ, ಕೂಡಲೇ ಶಾಸಕರು ನಮ್ಮ ಸಮಸ್ಯೆ ಬಗ್ಗೆಹರಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

13 ವರ್ಷದಿಂದ ರಸ್ತೆ ದುರಸ್ತಿ ಕಾಣದೇ ಸಂಕಷ್ಟ:

ರಾಜ್ಯ ರೈತ ಸಂಘ ಜಿಲ್ಲಾ ಘಟಕ ಹಾಗೂ ನಮ್ಮ ರಸ್ತೆ ನಮ್ಮ ಹಕ್ಕು ಗ್ರೂಪ್ ವತಿಯಿಂದ ಮತ್ತಿಕೆರೆ, ಗಂಜಲಗೂಡು, ಬಾಣಾವರ, ಹಳುವಳ್ಳಿ, ಹಾದಿಹಳ್ಳಿ ರಸ್ತೆ ದುರಸ್ತಿಗೆ ಒತ್ತಾಯಿಸಿ ಶಾಸಕ ಎಂ.ಪಿ. ಕುಮಾರಸ್ವಾಮಿ  ಮನೆ ಎದುರು  ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ13 ವರ್ಷದಿಂದ ಮತ್ತಿಕೆರೆ, ಗಂಜಲಗೂಡು, ಬಾಣಾವರ, ಹಳುವಳ್ಳಿ, ಹಾದಿಹಳ್ಳಿ... ರಸ್ತೆ ದುರಸ್ತಿ ಕಾಣದೇ ಗುಂಡಿ ಗೊಚ್ಚೆಯಲ್ಲಿ ತಿರುಗಾಡುವಂತಾಗಿದೆ. ಗ್ರಾಮದ ಜನರು, ರೋಗಿಗಳು ಹಾಗೂ ವಿದ್ಯಾರ್ಥಿಗಳು ಕಳೆದ 13 ವರ್ಷದಿಂದ ರಸ್ತೆ ದುರಸ್ತಿ ಕಾಣದೇ ಸಂಕಷ್ಟ ಎದುರಿಸುವಂತಾಗಿದೆ. ಇದನ್ನು ಅನೇಕ ಬಾರಿ ಶಾಸಕರ ಗಮನಕ್ಕೆ ತಂದರೂ ತಲೆ ಕೆಡಿಸಿಕೊಂಡಿಲ್ಲ ಎಂದು ದೂರಿದರು.

ಈ ರಸ್ತೆ ದುರಸ್ತಿಗಾಗಿ 5 ಗ್ರಾಮದ ಜನರು - ನಮ್ಮ ರಸ್ತೆ ನಮ್ಮ ಹಕ್ಕು ಎಂಬ ಗ್ರೂಪ್ ಮಾಡಿಕೊಂಡು ಈ ಹಿಂದೆ ಚಳವಳಿ ಪ್ರಾರಂಭಿಸಿದ್ದರು. ನಂತರ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್‌ನಲ್ಲಿ ಧರಣಿ ನಡೆಸಿದೆವು. ಕೂಡಲೇ ಭೂಮಿಪೂಜೆ ನೆರವೇರಿಸಿ ಅಕ್ಟೋಬರ್ 17ರೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅಲ್ಲಿ ಶಾಸಕರು ಭರವಸೆ ನೀಡಿದ್ದರು. ಆದರೆ 3 ದಿನ ಕಳೆದರೂ ಕಾಮಗಾರಿ ಪ್ರಾರಂಭಿಸಲಿಲ್ಲ. ಈ ಬಗ್ಗೆ ಶಾಸಕರು ಪಾರದರ್ಶಕ ಉತ್ತರ ನೀಡುವವರೆಗೂ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಸ್ತೆ ಇಲ್ಲ, ಆಸ್ಪತ್ರೆ ಇಲ್ಲ : ತಾಯಿ ಮುಂದೆಯೇ ಪ್ರಾಣಬಿಟ್ಟ ನವಜಾತ ಅವಳಿ ಮಕ್ಕಳು

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ವಿರುದ್ದ ಆಕ್ರೋಶ

ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು. ಈ ಸಮಯದಲ್ಲಿ ಅಧಿಕಾರಿಗಳು ವಿರುದ್ದ ಆಕ್ರೋಶವನ್ನು ಪ್ರತಿಭಟನಾನಿರತರು ಹೊರಹಾಕಿದರು. ರಸ್ತೆ ದುರಸ್ತಿಪಡಿಸಲು ಅನುದಾನ ಮೀಸಲಿರಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಅಕ್ಟೋಬರ್ 21ರಂದು ನಡೆಯಲಿದೆ. ರಸ್ತೆ ಶೀಘ್ರವೇ ದುರಸ್ತಿಪಡಿಸಲಾಗುವುದು ಎಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೆ ಜಗ್ಗದೇ ಶಾಸಕರೇ ಸ್ಥಳಕ್ಕೆ ಬರಬೇಕೆಂದು ಧರಣಿ ಮುಂದುವರಿಸಿದರು.

Latest Videos
Follow Us:
Download App:
  • android
  • ios