ಬಸ್ ಚಾಲನೆ ಮಾಡುವಾಗಲೇ ಕೆಎಸ್‌ ಆರ್‌ಟಿಸಿ ಬಸ್ ಚಾಲಕರೋರ್ವರು ಅನಾರೋಗ್ಯದಿಂದ ಬಳಲಿದ್ದು ಈ ವೇಳೆ ಭಾರೀ ದುರಂತವೊಂದು ಮುನ್ನೆಚ್ಚರಿಕೆಯಿಂದ ತಪ್ಪಿದೆ. 

ಬೆಳ್ತಂಗಡಿ (ಮಾ.24): ಮೂಡಿಗೆರೆಯಿಂದ ಉಜಿರೆ ಕಡೆ ಚಲಿಸುತ್ತಿದ್ದ ಉಡುಪಿ ಡಿಪೋದ ಕೆಎಸ್‌ಆರ್‌ಟಿಸಿ ಮಿನಿ ಬಸ್‌ ಚಾಲಕ ಬಿಜಾಪುರದ ರಾಜು ನಾಯ್ಕ (43)ಗೆ ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಅಸೌಖ್ಯ ಕಾಣಿಸಿಕೊಂಡು ಬಸ್‌ ಚರಂಡಿಗೆ ಇಳಿದ ಘಟನೆ ನಡೆದಿದೆ.

ಬಸ್‌ ಚರಂಡಿಗೆ ಇಳಿದ ಕಾರಣ ಭಾರಿ ಅನಾಹುತ ತಪ್ಪಿದೆ. ಬಸ್‌ನಲ್ಲಿ 35ಕ್ಕಿಂತ ಅಧಿಕ ಪ್ರಯಾಣಿಕರು ಇದ್ದರು.

ಏ.7ರಿಂದ ರಸ್ತೆಗಿಳಿಯಲ್ಲ KSRTC ಬಸ್‌ಗಳು : ಪ್ರಯಾಣಿಕರೆ ಎಚ್ಚರ .

ವಿಚಾರ ತಿಳಿದ ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ತಂಡದವರು ಸ್ಥಳಕ್ಕೆ ಧಾವಿಸಿ ಚಾಲಕನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಚಾಲಕ ಶಾಕ್‌ಗೆ ಒಳಗಾಗಿದ್ದು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಯಿಂದ ಬದಲಿ ಬಸ್‌ ವ್ಯವಸ್ಥೆ ಮಾಡಲಾಗಿದೆ.