ಏ.7ರಿಂದ ರಸ್ತೆಗಿಳಿಯಲ್ಲ KSRTC ಬಸ್‌ಗಳು : ಪ್ರಯಾಣಿಕರೆ ಎಚ್ಚರ

KSRTC ಪ್ರಯಾಣಿಕರೇ ಗಮನಿಸಿ.. ಏಪ್ರಿಲ್‌ 7ರಿಂದ ಬಸ್ಸುಗಳು ರಸ್ತೆಗೆ ಇಳಿಯುವುದಿಲ್ಲ. ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಬಸ್ ಸಂಚಾರ ಸ್ಥಗಿತವಾಗಲಿದೆ. 

KSRTC workers to hold protest From April 7th snr

ಬೆಂಗಳೂರು (ಮಾ.17): ಮೂರು ತಿಂಗಳ ಗಡುವಿನೊಳಗೆ ಸಾರಿಗೆ ನೌಕರರ  ಒಂಬತ್ತು ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಏಪ್ರಿಲ್‌ 7 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಡ ಮಂಗಳವಾಎ ಸರ್ಕಾರಕ್ಕೆ ನೋಟಿಸ್ ನೀಡಿದೆ. 

ಮುಖ್ಯಮಂತ್ರಿ ಸಾರಿಗೆ ಸಚಿವ, ನಾಲ್ಕು ರಸ್ತೆ ಸಾರಿಗೆ ನಿಗಮದ  ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಮಿಕ ಇಲಾಖೆ ಆಯುಕ್ತರಿಗೆ ಮುಷ್ಕರದ ನೋಟಿಸ್ ನೀಡಲಾಗಿದೆ. 

ಕಾರ್ಮಿಕ ಕಾಯ್ದೆ ನಿಯಮದ ಪ್ರಕಾರ ನೋಟಿಸ್ ನೀಡಿದ 22 ದಿನದೊಳಗೆ  ರಾಜ್ಯ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ. 

ರಾಜ್ಯದ ಸಾರಿಗೆ ನೌಕರರಿಗೆ ಸಿಹಿಸುದ್ದಿ

ಆರನೇ ವೇತನ ಆಯೋಗದ  ಶಿಫಾರಸಿನ ಅನ್ವಯ ವೇತನ ಪರಿಷ್ಕರಣೆ ಸೇರಿದಂತೆ 10 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಡಿ. 11 ರಿಮದ 14ರವರೆಗೆ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಈ ವೇಳೆ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ 3 ತಿಂಗಳ ಗಡುವು ನೀಡಲಾಗಿತ್ತು. 

Latest Videos
Follow Us:
Download App:
  • android
  • ios