Asianet Suvarna News Asianet Suvarna News

ನಾಪೋಕ್ಲು ಮೀನು ಮಾರುಕಟ್ಟೆಯಲ್ಲಿ ಗಮನ ಸೆಳೆದ ಭಾರಿ ಗಾತ್ರದ ಮೀನು

ಮಡಿಕೇರಿಯ ನಾಪೋಕ್ಲು ಮೀನು ಮಾರುಕಟ್ಟೆಯಲ್ಲಿ ಮೀನು ಕೊಳ್ಳುವವರಿಗಿಂತ ನೋಡುಗರ ಸಂಖ್ಯೆ ಹೆಚ್ಚಾಗಿತ್ತು. ಕಾರಣ ಏನಂತೀರಾ..? ಬೃಹದಾಕಾರದ ಮೀನೊಂದು ನಾಪೋಕ್ಲು ಫಿಶ್ ಮಾರ್ಕೆಟ್‌ಗೆ ತಲುಪಿತ್ತು. ಬೃಹದಾಕಾರದ ಮೀನನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

big fish in madikeri fish market attracts people
Author
Bangalore, First Published Nov 22, 2019, 12:48 PM IST

ಮಡಿಕೇರಿ(ನ.22): ಮಡಿಕೇರಿಯ ನಾಪೋಕ್ಲು ಮೀನು ಮಾರುಕಟ್ಟೆಯಲ್ಲಿ ಮೀನು ಕೊಳ್ಳುವವರಿಗಿಂತ ನೋಡುಗರ ಸಂಖ್ಯೆ ಹೆಚ್ಚಾಗಿತ್ತು. ಕಾರಣ ಏನಂತೀರಾ..? ಬೃಹದಾಕಾರದ ಮೀನೊಂದು ನಾಪೋಕ್ಲು ಫಿಶ್ ಮಾರ್ಕೆಟ್‌ಗೆ ತಲುಪಿತ್ತು. ಬೃಹದಾಕಾರದ ಮೀನನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

ಸ್ಥಳೀಯ ಮೀನು ಮಾರುಕಟ್ಟೆಗೆ ತರಲಾಗಿದ್ದ ಭಾರಿ ಗಾತ್ರದ ಓಲೆ ಮೀನು ಮೀನುಪ್ರಿಯರ ಗಮನ ಸೆಳೆಯಿತು. ಗುರುವಾರ ಮಂಗಳೂರಿನಿಂದ ಮಾರಾಟಕ್ಕೆಂದು ನಾಪೋಕ್ಲು ಮೀನು ಮಾರುಕಟ್ಟೆಗೆ ತರಲಾಗಿದ್ದ ಮೀನುಗಳ ಪೈಕಿ ಸುಮಾರು 47 ಕೆ.ಜಿ. ತೂಕದ ಹಾಗೂ ಏಳು ಅಡಿ ಉದ್ದವಿದ್ದ ಭಾರಿ ಗಾತ್ರದ ಓಲೆ ಮೀನು ನಾಗರಿಕರನ್ನು ಆಕರ್ಷಿಸಿತು.

ಗಣ​ಪತಿ ಆತ್ಮ​ಹ​ತ್ಯೆ: ವರದಿ ನೋಡಿ ಮುಂದಿನ ನಿರ್ಧಾ​ರ

ಈ ಮೀನನ್ನು ಕೆಲವರು ಕುತೂಹಲದಿಂದ ವೀಕ್ಷಿಸಿದರೆ ಮತ್ತೆ ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದರು. ಈ ಓಲೆ ಮೀನನ್ನು ಕೆ.ಜಿ.ಗೆ 400 ರಿಂದ 450 ರು.ಗೆ ಮಾರಾಟ ಮಾಡಲಾಗುವುದೆಂದು ಮೀನು ಮಾರುಕಟ್ಟೆಯ ಮಹಮ್ಮದ್‌ ಹನೀಫ್‌ ತಿಳಿಸಿದ್ದಾರೆ.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

big fish in madikeri fish market attracts people

Follow Us:
Download App:
  • android
  • ios