Asianet Suvarna News Asianet Suvarna News

BIG 3: GIMS ಆಸ್ಪತ್ರೆ ಅಂಗಳದಲ್ಲಿ ಡ್ರೈನೇಜ್ ನೀರು: ಕೇಳುವವರಾರು ರೋಗಿಗಳ ಗೋಳು?

Big 3 GIMS Hospital Story: ಗದಗದಲ್ಲಿ ಕೆಲದಿನಗಳ ಹಿಂದೆ ನಿರಂತರವಾಗಿ ಸುರಿದ ಧಾರಾಕಾರ ಮಳೆ ಹಲವು ಕಡೆ ಅವಾಂತರಗಳಿಗೆ ಕಾರಣವಾಗಿದೆ

Big 3 patients suffer as drainage water enters GIMS Hospital in Gadaga mnj
Author
First Published Sep 13, 2022, 3:08 PM IST

ಗದಗ (ಸೆ. 13):  ಈ ವರ್ಷವಂತೂ ರಾಜ್ಯಾದ್ಯಂತ ಧಾರಕಾರ ಮಳೆ (Karnataka Rains) ಸುರಿದಿದ್ದು ಮಳೆಯ ನೀರು ಎಲ್ಬೇಕು ಅಲ್ಲಿ ನುಗಿದೆ. ಅದ್ರಲ್ಲೂ ಈ ನೀರು ದೊಡ್ಡ ಆಸ್ಪತ್ರೆಗೂ ನುಗ್ಗಿದೆ. ಆದ್ರೆ, ಆ ನೀರು ಹಲವು ದಿನಗಳಿಂದ ನಿಂತಲ್ಲೇ ನಿಂತಿದೆ. ಜೊತೆಗೆ ಡ್ರೈನೇಜ್ ನೀರು (Drainage Water) ಸೇರ್ಕೊಂಡು ಆಸ್ಪತ್ರೆ (Hospital) ಅಂಗಳದಲ್ಲಿ ನಿಂತಿರೋದ್ರಿಂದ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಳೆ ನೀರಿನ ಜೊತೆಗೆ ಕೊಳಚೆ ನೀರು ಆಸ್ಪತ್ರೆ ಆವರಣಕ್ಕೆ ನುಗ್ಗಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ತೊಂದ್ರೆ ಆಗ್ತಿದೆ. 

ಈ ದೃಶ್ಯ ಕಂಡು ಬಂದಿದ್ದು ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆಯ (GIMS Hospital) ಹೊರಗೆ ಹಾಗೂ ಕಟ್ಟಡದ  ಆವರಣದ ನೆಲ ಮಹಡಿಯಲ್ಲಿ. ಗದಗದಲ್ಲಿ ಕೆಲದಿನಗಳ ಹಿಂದೆ ನಿರಂತರವಾಗಿ ಸುರಿದ ಧಾರಾಕಾರ ಮಳೆ ಹಲವು ಕಡೆ ಅವಾಂತರಗಳಿಗೆ ಕಾರಣವಾಗಿದೆ. ಈ ನಡುವೆ ಗದಗದಲ್ಲಿ ಡೆಂಘೀ ಜ್ವರ (Dengue Fever) ಹೆಚ್ಚಳಕ್ಕೆ ಕಾರಣವಾಗಿದೆ. ಧಾರಾಕಾರ ಮಳೆ ಸಾಂಕ್ರಾಮಿಕ ರೋಗಗಳು ಹೆಚ್ಚಳವಾಗುವಂತೆ ಮಾಡಿದೆ. 

77 ಕ್ಕೂ ಹೆಚ್ಚು ಡೆಂಘೀ ಕೇಸ್ ಗಳು ಪತ್ತೆ:  ಗದಗನಲ್ಲಿ ಸುಮಾರು 77 ಕ್ಕೂ ಹೆಚ್ಚು ಡೆಂಘೀ ಕೇಸ್ ಗಳು ಪತ್ತೆಯಾಗಿವೆ. ಅದರಲ್ಲೂ ಮಕ್ಕಳಲ್ಲಿ ಡೆಂಘೀ ಜ್ವರದಿಂದ ಬಳಲುತ್ತಿದ್ದು ಪೋಷಕರಿಗೆ ಆತಂಕ ಮನೆ ಮಾಡಿದೆ. ಜಿಲ್ಲೆಯಾದ್ಯಂತ ಸುಮಾರು 1107 ಸಂಶಯಾಸ್ಪದ ಡೆಂಘೀ ಕೇಸ್ ಪತ್ತೆ ಮಾಡಲಾಗಿದೆ ಇದರಲ್ಲಿ 950 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ

ಒಂದ್ಕಡೆ ಮಳೆ ನೀರು ಮತ್ತೊಂದ್ಕಡೆ ಆಸ್ಪತ್ರೆಯ ಡ್ರೈನೇಜ್ ನೀರು ಜಿಮ್ಸ್ ಆಸ್ಪತ್ರೆಯ ಕಟ್ಟಡಕ್ಕೆ ಕಂಟಕವಾಗ್ತಿದೆ. ಜಿಲ್ಲಾಸ್ಪತ್ರೆಯ (District Hospital) ಆವರಣದ ನೆಲ ಮಹಡಿ ಡೆಂಘೀ ಹಾಟ್ ಸ್ಪಾಟ್ ಆಗ್ತಿ ಕನ್ವರ್ಟ್ ಆಗ್ತಿದೆ. ನೆಲಮಹಡಿಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಪಕ್ಕದ ಮಕ್ಕಳ (Children) ವಾರ್ಡ್ ಗೆ ಸೊಳ್ಳೆಗಳು ದಾಂಗುಡಿ ಇಡ್ತಿವೆ. 

BIG 3: ಕೆಂಭಾವಿ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ನ್ಯಾಯಾಧೀಶರ ಭೇಟಿ, ಸಿಬ್ಬಂದಿಗೆ ಕ್ಲಾಸ್!

ಡಂಪಿಂಗ್ ಯಾರ್ಡ್​ನಂತಾಗಿರುವ ಜಿಮ್ಸ್ ಆಸ್ಪತ್ರೆ: ನೆಲಮಹಡಿಯಲ್ಲಿ ಮೆಡಿಕಲ್ ಗುಜುರಿಯನ್ನ ಸಂಗ್ರಹಿಸಿ ಇಡಲಾಗಿದ್ದು, ವೇಸ್ಟ್​​​ ಸಾಮಾನುಗಳ ಮಧ್ಯೆ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಡಂಪಿಂಗ್ ಯಾರ್ಡ್​ನಂತಾಗಿರುವ ((Dumping Yard) ಜಿಮ್ಸ್ ಆಸ್ಪತ್ರೆಯ ನೆಲ ಮಹಡಿಯಲ್ಲಿ, ಹಲವು ವರ್ಷದಿಂದ ಮೆಡಿಕಲ್ ಗುಜರಿ ಸಂಗ್ರಹ ಮಾಡಲಾಗಿದೆ. ಮೆಡಿಕಲ್ ಗುಜರಿ (Medical Waste) ಮಧ್ಯೆ ನೀರು ನಿಂತು ಸಿಬ್ಬಂದಿ ಹಾಗೂ ರೋಗಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. 

ಅನಾರೋಗ್ಯಕರ ವಾತಾವರಣದಲ್ಲೇ ಜಿಮ್ಸ್ ಸಿಬ್ಬಂದಿ (Staff) ಓಡಾಟ ಮಾಡ್ತಿದ್ದಾರೆ. ದುರ್ವಾಸನೆ, ಸೊಳ್ಳೆಗಳ ಕಾಟಕ್ಕೆ ಸಿಬ್ಬಂದಿ ಮತ್ತು ಸಾರ್ವಜನಿಕರು ಬೇಸತ್ತಿದ್ದಾರೆ.  ಹೀಗಾಗಿ ಈ ಡಂಪಿಂಗ್ ಯಾರ್ಡ್ ಕ್ಲೀನ್ ಮಾಡಬೇಕು, ಆಸ್ಪತ್ರೆ ಅಂಗಳದಲ್ಲಿ ಸ್ವಚ್ಛತೆ ಕಾಪಾಡ್ಕೊಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. 

BIG 3: ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ: ವಿದ್ಯಾರ್ಥಿಗಳಿಗೆ ನರಕಯಾತನೆ

Follow Us:
Download App:
  • android
  • ios