ವಿಪಕ್ಷ ನಾಯಕ ಅಶೋಕ್‌ಗೆ ಅವರ ಪಕ್ಷದಲ್ಲೆ ನೆಲೆಯಿಲ್ಲ: ಸಚಿವ ಈಶ್ವರ ಖಂಡ್ರೆ ಲೇವಡಿ

ವಿಪಕ್ಷ ನಾಯಕನಾಗಿರುವ ಆರ್‌.ಅಶೋಕ್‌ಗೆ ಅವರದ್ದೇ ಪಕ್ಷದಲ್ಲಿ ಅಪಸ್ವರ ಎದ್ದಿದೆ. ಎಲ್ಲಿದೆ ನೆಲೆ, ನೆಲೇನೆ ಇಲ್ಲ. ಅವರ ಪಕ್ಷದವರಿಗೆ ಅವರನ್ನ ಇಟ್ಕೊಳ್ಳೋಕೆ ಆಗ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಲೇವಡಿ ಮಾಡಿದರು. 

Minister Eshwar Khandre Slams On BJP Oppsition Leader R Ashok At Bidar gvd

ಬೀದರ್‌ (ಡಿ.01): ವಿಪಕ್ಷ ನಾಯಕನಾಗಿರುವ ಆರ್‌. ಅಶೋಕ್‌ಗೆ ಅವರದ್ದೇ ಪಕ್ಷದಲ್ಲಿ ಅಪಸ್ವರ ಎದ್ದಿದೆ. ಎಲ್ಲಿದೆ ನೆಲೆ, ನೆಲೇನೆ ಇಲ್ಲ. ಅವರ ಪಕ್ಷದವರಿಗೆ ಅವರನ್ನ ಇಟ್ಕೊಳ್ಳೋಕೆ ಆಗ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಲೇವಡಿ ಮಾಡಿದರು. ಅವರು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ, ಈ ಹಿಂದೆ ಅವರ ಅಧಿಕಾರ ಇದ್ದಾಗ, 100 ಕೋಟಿ ರು. ಕೊಟ್ಟು ಮಂತ್ರಿ ಆಗಬೇಕಿತ್ತು. ಸಿಎಂ ಆಗೋಕೆ 2500 ಕೋಟಿ ಕೋಡಬೇಕಾಗಿತ್ತು ಅನ್ನುವಂಥ ಮಾತನ್ನ ಅವರೇ ಹೇಳಿದ್ರು. 

ಬೇರೆಯವರ ತಟ್ಟೆಯಲ್ಲಿ ಏನು ಬಿದ್ದಿದೆ ಎಂದು ನೋಡೋ ಅವಶ್ಯಕತೆ ಇಲ್ಲಾ ಎಂದು ತಿರುಗೇಟು ನೀಡಿದರು. ಬಿಆರ್‌ ಪಾಟೀಲ್‌ ರಾಜೀನಾಮೆ ಪತ್ರ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಬಿಆರ್‌ ಪಾಟೀಲ್‌ ಅತ್ಯಂತ ಹಿರಿಯ ನಾಯಕರಿದ್ದಾರೆ. ಸಿದ್ದರಾಮಯ್ಯ ಆಪ್ತ ಸ್ನೇಹಿತರೂ ಹೌದು. ಕಾಂಗ್ರೆಸ್‌ನ ಕಟ್ಟಾಳು ಅವರಾಗಿದ್ದಾರೆ. ಅವರ ಅನಿಸಿಕೆಗಳು ಇರ್ತಾವೆ, ವರಿಷ್ಠರು ಅವುಗಳನ್ನು ಸರಿಪಡಿಸ್ತಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ರಾಜ್ಯ ಕಾಂಗ್ರೆಸ್ಸಿನಲ್ಲೂ ದಿನೇ ದಿನೇ ಭ್ರಷ್ಟಾಚಾರ ತಾಂಡವ: ಪ್ರಲ್ಹಾದ್‌ ಜೋಶಿ

ಕಾಲಮಿತಿಯಲ್ಲಿ ಅನುಭವ ಮಂಟಪ ಲೋಕಾರ್ಪಣೆ: ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು. 44ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ ಗೋ.ರು ಚನ್ನಬಸಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು ಎಂದರು.

ಅಂದು ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು, ಬಸವ ಭಕ್ತರು, ವಿದ್ವಾಂಸರ ಸಮ್ಮುಖದಲ್ಲಿ ಚರ್ಚಿಸಿ 600 ಕೋಟಿ ರು.ಗಳ ಕಾಮಗಾರಿ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಒಪ್ಪಿಗೆ ಕೊಡಿಸಿದ್ದು, ತದನಂತರ ದಿನಗಳಲ್ಲಿ ಬದಲಾದ ಸರ್ಕಾರದಲ್ಲಿಯೂ ನಾವೆಲ್ಲ ಜನಪ್ರತಿನಿಧಿಗಳು ಹಾಗೂ ಶ್ರೀಗಳು ಕೂಡಿ ಬಿಎಸ್‌ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಅನುದಾನ ಬಿಡುಗಡೆಯಾಗಿ, ಇದೀಗ ಮತ್ತೇ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವದು ಎಂದು ತಿಳಿಸಿದರು.

ಬಾಂಬ್ ಬೆದರಿಕೆ ಪ್ರಕರಣವನ್ನು ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ: ಸಚಿವ ಮಧು ಬಂಗಾರಪ್ಪ

ಇನ್ನು ವಿದ್ವಾಂಸರನ್ನು ಸಾಹಿತಿಗಳನ್ನು ಮಠಾಧೀಶರನ್ನು ಹಾಗೂ ಸಾಹಿತಿ, ಚಿಂತಕರನ್ನು ಆಹ್ವಾನ ಮಾಡಿ ಗೋಷ್ಠಿಗಳ ಮೂಲಕ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ನಿವಾರಣೆಗೆ ಚರ್ಚಿಸಿ, ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಮೇಲೆ ಒತ್ತಡ ತರುವಂಥದ್ದೇ ಶರಣ ಕಮ್ಮಟದ ಮುಖ್ಯ ಉದ್ದೇಶವಾಗಿದೆ ಎಂದರು. ಧರ್ಮದ ಆಧಾರದ ಮೇಲೆ ಹಿಂಸೆ, ದ್ವೇಷ, ಶೋಷಣೆಯನ್ನು ಬಸವ ತತ್ವದಲ್ಲಿ ಒಪ್ಪುವದಿಲ್ಲ. 12ನೇ ಶತಮಾನದಲ್ಲಿದ್ದ ಅನೇಕ ಶೋಷಣೆ, ಅನ್ಯಾಯ, ದೌರ್ಜನ್ಯ, ಅತ್ಯಾಚಾರದಂಥ ಅನಿಷ್ಟ ಪದ್ಧತಿಗಳು ಇಂದಿಗೂ ಬೇರೆ ಬೇರೆ ರೀತಿಯಲ್ಲಿ ಇವೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ, ಅನಿಷ್ಟಗಳು ಮುಂದುವರೆದು ಭಯದ ವಾತಾವರಣ‍ವಿದೆ ಇವುಗಳ ನಿವಾರಣೆ ಮಾಡುವ ಬಗ್ಗೆ ಇಲ್ಲಿ ಚರ್ಚೆಗಳು ನಡೆಯಬೇಕಿರುವದು ಇಂದಿನ ಅವಶ್ಯಕತೆ ಎಂದರು.

Latest Videos
Follow Us:
Download App:
  • android
  • ios