ಕಾಂಗ್ರೆಸ್‌ನಲ್ಲಿ ಪ್ರತಿ ಕಾರ್ಯಕರ್ತನೂ ರಾಜಕೀಯ ನೇತಾರನಾಗಬೇಕಿದ್ದು, ಆತ ಪ್ರತಿಯೊಂದನ್ನು ಒಪ್ಪದೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವಂತಾಗಬೇಕು: ಭೀಮಣ್ಣ ನಾಯ್ಕ

ಯಲ್ಲಾಪುರ(ಮಾ.26): ಕಾಂಗ್ರೆಸ್‌ ಈ ದೇಶದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ಪಕ್ಷವಾಗಿದೆ. ಇಲ್ಲಿ ಪ್ರತಿ ಕಾರ್ಯಕರ್ತನೂ ರಾಜಕೀಯ ನೇತಾರನಾಗಬೇಕಿದ್ದು, ಆತ ಪ್ರತಿಯೊಂದನ್ನು ಒಪ್ಪದೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳು ವಂತಾಗಬೇಕೆಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.

ಅವರು ಮಂಗಳವಾರ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣಾ ಪೂರ್ವ ಪಕ್ಷ ಬಲವರ್ಧನೆಯ ಕುರಿತು ಹಮ್ಮಿಕೊಳ್ಳಲಾಗಿದ್ದ ಚಿಂತನ- ಮಂಥನದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಿರಸಿ: ಬೇಡ್ತಿ ನದಿ ನೀರು ಜೋಡಣೆ ಅವೈಜ್ಞಾನಿಕ, ಸ್ವರ್ಣವಲ್ಲೀ ಶ್ರೀ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಎನ್‌. ಗಾಂವ್ಕರ್‌, ತಾಲೂಕು ವಕ್ತಾರ ರವಿ ನಾಯ್ಕ, ಪಪಂ ಸದಸ್ಯರಾದ ನರ್ಮದಾ ನಾಯ್ಕ, ಕೈಸರ್‌ ಅಲಿ, ಪಕ್ಷದ ಹಿರಿಯರು, ವಿವಿಧ ಘಟಕಗಳ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.