48 ಲಕ್ಷದ ವಾಚ್‌ ಒಡೆದ ಕಸ್ಟಮ್ಸ್‌ ಅಧಿಕಾರಿಗಳು: ದೂರು

ಪ್ರಯಾಣಿಕನೊಬ್ಬ ಕೈಗಡಿಯಾರದಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದಾನೆನ್ನುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಸ್ಟಮ್‌ ಅಧಿಕಾರಿಗಳು 48 ಲಕ್ಷ ರು. ಮುಖಬೆಲೆಯ ದುಬಾರಿ ಕೈಗಡಿಯಾರವನ್ನು ಬಿಚ್ಚಿ ಒಡೆದು ಹಾಕಿದ್ದು ಈ ಸಂಬಂಧ ದೂರು ದಾಖಲಾಗಿದೆ.

Bhatkal passenger files case as custom officials at Kerala Airport break his watch snr

ಭಟ್ಕಳ (ಮಾ.08): ದುಬೈಯಿಂದ ಕ್ಯಾಲಿಕಟ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಯಾಣಿಕನೊಬ್ಬ ಕೈಗಡಿಯಾರದಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದಾನೆನ್ನುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಸ್ಟಮ್‌ ಅಧಿಕಾರಿಗಳು 48 ಲಕ್ಷ ರು. ಮುಖಬೆಲೆಯ ದುಬಾರಿ ಕೈಗಡಿಯಾರವನ್ನು ಬಿಚ್ಚಿ ಒಡೆದ ಬಗ್ಗೆ ವರದಿಯಾಗಿದೆ.

 ಭಟ್ಕಳದ ಕಾರಗದ್ದೆ ನಿವಾಸಿ ಮೊಹಮ್ಮದ್‌ ಇಸ್ಮಾಯಿಲ್‌ ಅವರು ತನ್ನ ವಾಚ್‌ ತನಗೆ ವಾಪಸ್‌ ಮೊದಲಿನ ಸ್ಥಿತಿಯಲ್ಲೇ ಕೊಡಿಸಬೇಕು ಎಂದು ಕ್ಯಾಲಿಕಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿದ್ದಾರೆ. 

ಚಿನ್ನ ಸ್ಮಗ್ಲಿಂಗ್‌ನಲ್ಲಿ ಕೇರಳದ ಸಿಎಂ ಭಾಗಿ, ಆರೋಪಿ ಸ್ವಪ್ನಾ ಸ್ಫೋಟಕ ಹೇಳಿಕೆ! .

ವಿಸಿಟಿಂಗ್‌ ವೀಸಾದಲ್ಲಿ ದುಬೈ ಹೋಗಿದ್ದ ಇಸ್ಮಾಯಿಲ್‌ ಹಿಂದುರುಗುವಾಗ ಅವರ ಸಹೋದರ ಅಡಿಮೂವರ್ಸ್‌ ಪಿಗುಯೆಟ್‌ ಕಂಪನಿಯ ಕೈಗಡಿಯಾರ ನೀಡಿದ್ದರು. 

ಇದನ್ನು ಇಸ್ಮಾಯಿಲ್‌ ಸಹೋದರ 2017ರಲ್ಲಿ ದುಬೈನಲ್ಲಿರುವ ಮಾಲೊಂದರಿಂದ 48 ಲಕ್ಷಕ್ಕೆ ಖರೀದಿಸಿದ್ದರೆನ್ನಲಾಗಿದೆ. ಕೈಗಡಿಯಾರದ ಬೆಲೆ ತಿಳಿದ ಆನಂತರ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios