ಬೆಂಗಳೂರು, (ಜುಲೈ.17): ಬೆಂಗಳೂರಿನ ಯಲಹಂಕದ ಸ್ಥಳೀಯ ಕಾಂಗ್ರೆಸ್  ಮುಖಂಡ ಚನ್ನಕೇಶವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ಮುನಿರಾಜು, ಹೇಮಂತ ದೇವರಾಜ್ ಎನ್ನುವ ಆರೋಪಿಗಳನ್ನು ಇಂದು (ಶುಕ್ರವಾರ) ಯಲಹಂಕ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಾರ್ಪೊರೇಟರ್ ಎಲೆಕ್ಷನ್‌ ಸಿದ್ಧತೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಜುಲೈ 9ರಂದು ಬೆಂಗಳೂರಿನ ಯಲಹಂಕದ ಪಾಲನಹಳ್ಳಿಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕ 35 ವರ್ಷದ  ಚನ್ನಕೇಶವ ಮೇಲೆ ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದರು.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.