Asianet Suvarna News Asianet Suvarna News

ಭದ್ರಾವತಿಯಲ್ಲಿ ಮೊಬೈಲ್ ಕಳ್ಳನ ಬಂಧನ: 2 ಲಕ್ಷದ ಮೊಬೈಲ್‌ ವಶ

ರಾಜ್ಯದ ಹಲವೆಡೆ ಮೊಬೈಲ್‌ಗಳನ್ನು ಕದ್ದು ತಂದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಭದ್ರವತಿ ಪೊಲೀಸರು ಬಂಧಿಸಿದ್ದಾರೆ. ಕಳ್ಳನಿಂದ 2 ಲಕ್ಷ ರುಪಾಯಿ ಮೌಲ್ಯದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

Bhadravathi Police Arrest Mobile Thief Recover Smartphones Worth 2 Lakh
Author
Bhadravathi, First Published May 5, 2020, 11:03 AM IST
  • Facebook
  • Twitter
  • Whatsapp

ಭದ್ರಾವತಿ(ಮೇ.05): ಕಳವು ಮಾಡಿದ ಮೊಬೈಲ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ಬಂ​ಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ತಿಪ್ಲಾಪುರ ಕ್ಯಾಂಪ್‌ ನಿವಾಸಿ ಅಬ್ದುಲ್‌ ಖಾದರ್‌ ಅಲಿಯಾಸ್‌ ಶಫೀಕ್‌(30) ಎಂಬಾತನನ್ನು ಬಂಧಿ​ಸಲಾಗಿದೆ. ಈತ ರಾಜ್ಯದ ಹಲವೆಡೆ ಮೊಬೈಲ್‌ಗಳನ್ನು ಕದ್ದು ತಂದು ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ. ಈ ಸಂಬಂಧ ಈತನ ಪತ್ತೆಗಾಗಿ ಪೊಲೀಸ್‌ ಉಪಾ​ಧೀಕ್ಷಕ ಸುಧಾಕರ ನಾಯಕ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಬಂಧಿ​ತನಿಂದ ವಿವಿಧ ಕಂಪನಿಗಳ ಒಟ್ಟು 2,08,000 ರು. ಮೌಲ್ಯದ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗದಲ್ಲಿ ಮದ್ಯ ಖರೀದಿಗೆ ನೀರಸ ಪ್ರತಿಕ್ರಿಯೆ..!

ಗ್ರಾಮಾಂತರ ವೃತ್ತ ನಿರೀಕ್ಷಕ ಈ.ಓ ಮಂಜುನಾಥ್‌ ನೇತೃತ್ವದ ಗ್ರಾಮಾಂತರ ಪೊಲೀಸ್‌ ಠಾಣಾ​ಧಿಕಾರಿ ದೇವರಾಜ, ಸಿಬ್ಬಂದಿ ಎಂ. ನಾಗರಾಜ್‌, ಆದರ್ಶ ಶೆಟ್ಟಿ, ಹನುಮಂತ ಆವಟಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಕಾರ್ಯಾಚರಣೆ ತಂಡವನ್ನು ಜಿಲ್ಲಾ ರಕ್ಷಣಾ​ಧಿಕಾರಿ ಹಾಗೂ ಹೆಚ್ಚುವರಿ ರಕ್ಷಣಾಧಿ​ಕಾರಿ ಅಭಿನಂದಿಸಿದ್ದಾರೆ.
 

Follow Us:
Download App:
  • android
  • ios