ಇನ್ಪ್ಲೂಎನ್ಜಾ ಪ್ಲೂ ಮುನ್ನೆಚ್ಚರಿಕೆ ವಹಿಸಿ: ಡೀಸಿ
ಭಾರತದಲ್ಲಿ ಋುತುಮಾನದ ಇನ್ಪ್ಲೂಎನ್ ಜಾ ಪ್ಲೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ಪ್ಲೂಎನ್ ಜಾ ನಿಯಂತ್ರಣ ಹಾಗೂ ತಡೆಗಟ್ಟುವ ಚಟುವಟಿಕೆಗಳನ್ನು ಹೆಚ್ಚಿಸುವಂತೆ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ಫä್ಲ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ತುಮಕೂರು ಡಿಎಚ್ಓ ಮತ್ತು ಟಿಎಚ್ಓ ಅವರಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ನಿರ್ದೇಶನ ನೀಡಿದರು.
ತುಮಕೂರು : ಭಾರತದಲ್ಲಿ ಋುತುಮಾನದ ಇನ್ಪ್ಲೂಎನ್ ಜಾ ಪ್ಲೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ಪ್ಲೂಎನ್ ಜಾ ನಿಯಂತ್ರಣ ಹಾಗೂ ತಡೆಗಟ್ಟುವ ಚಟುವಟಿಕೆಗಳನ್ನು ಹೆಚ್ಚಿಸುವಂತೆ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ಫä್ಲ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ತುಮಕೂರು ಡಿಎಚ್ಓ ಮತ್ತು ಟಿಎಚ್ಓ ಅವರಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ರಾಜ್ಯಗಳಲ್ಲಿ ಈ ರೋಗವು ಹರಡುತ್ತಿದ್ದು, ಈ ಸಾಂಕ್ರಾಮಿಕ ರೋಗ ಬಾಧಿತ ವ್ಯಕ್ತಿಯು ಕೆಮ್ಮುವಾಗ ಅಥವಾ ಸೀನುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡಬಹುದಾಗಿದ್ದು, ಅದರಲ್ಲೂ 15 ವರ್ಷ ಒಳಗಿನ ಹಾಗೂ 65 ವರ್ಷ ಮೇಲ್ಪಟ್ಟವಯಸ್ಸಿನವರಿಗೆ ಪ್ಲೂ ಬರುವ ಸಾಧ್ಯತೆ ಹೆಚ್ಚಿದ್ದು, ಕೆಮ್ಮು, ನೆಗಡಿ ಇದ್ದವರು ಮಾಸ್್ಕ ಧರಿಸುಕೊಂಡು, ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಮುನ್ನೆಚ್ಚರಿಕೆ ವಹಿಸಬೇಕು, ಆರೋಗ್ಯ ಕಾರ್ಯಕರ್ತೆಯರು ಪ್ಲೂ ಲಸಿಕೆಯನ್ನು ಪಡೆಯುವುದನ್ನು ಕಡ್ಡಾಯ ಮಾಡಬೇಕೆಂದು ತಿಳಿಸಿದರು.
ಮತದಾರರ ಪಟ್ಟಿನಿರಂತರ ಪರಿಷ್ಕರಣೆಯಡಿ ಅರ್ಜಿಗಳ ವಿಲೇವಾರಿಯನ್ನು ಆದ್ಯತೆ ಮೇರೆಗೆ ಮುಗಿಸಬೇಕು. ತುಮಕೂರು ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಬಾಕಿ ಪ್ರಕರಣಗಳು ಇದ್ದು, ಪಾಲಿಕೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ರೂಟ್ ಮ್ಯಾಪ್ ಮತ್ತು ಸೆಕ್ಟರ್ ಮ್ಯಾಪ್ಗಳನ್ನು ಸರಿಯಾಗಿ ಪರಿಶೀಲಿಸಿ ಆರ್ಓಗಳು ಸಿದ್ಧಪಡಿಸಿ ಕಳುಹಿಸಬೇಕು, ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳನ್ನು ಪರಿಶೀಲಿಸಬೇಕು. ಆರ್.ಓ., ಎ.ಆರ್.ಓ ಹಾಗೂ ಮುಖ್ಯಾಧಿಕಾರಿಗಳು ಕಡ್ಡಾಯವಾಗಿ ಮತಗಟ್ಟೆಗಳಿಗೆ ಭೇಟಿ ನೀಡಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕು, ಸದ್ಯದಲ್ಲೇ ಪ್ರಿಂಟಿಂಗ್ ಪ್ರೆಸ್ ಮತ್ತು ಕೇಬಲ್ ಮಾಲೀಕರ ಸಭೆ ಕರೆದು ನಿಯಮ 171-ಎ ಬಗ್ಗೆ ಮಾಹಿತಿ ನೀಡಬೇಕು. ಪಾವಗಡ, ಶಿರಾ, ಮಧುಗಿರಿ ಗಡಿ ಭಾಗದ ತಾಲೂಕುಗಳಲ್ಲಿ ಈಗಾಗಲೇ ಗಡಿ ಸಭೆಗಳನ್ನು ನಡೆಸಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದ್ದು, ಈ ಚೆಕ್ಪೋಸ್ಟ್ಗಳಿಗೆ ನಿಯಮಿತವಾಗಿ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿದರು.
ಚುನಾವಣಾ ಕಾರ್ಯದ ನಿಮಿತ್ತ ಜಿಲ್ಲೆಗೆ ಆಗಮಿಸುವ ಚುನಾವಣಾ ವೀಕ್ಷಕರು ವಾಸ್ತವ್ಯ ಮಾಡುವ ಐಬಿ, ಲೈಸನ್ ಅಧಿಕಾರಿ, ಸ್ಟೆನೋಗ್ರಾಫರ್, ಗಣಕಯಂತ್ರ ಸೇರಿದಂತೆ ಮೂಲಸೌಕರ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಬೇಕೆಂದರು.
ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕಿರುವ ಕುರಿತು ಬಿಇಓಗಳಿಂದ ಪಟ್ಟಿಪಡೆದು ನರೇಗಾ ಕನ್ವರ್ಜೆನ್ಸ್ ಅನುದಾನ ಬಳಸಿ ತ್ವರಿತ ಗತಿಯಲ್ಲಿ ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ಶೌಚಾಲಯವನ್ನು ಶಾಲಾವರಣದಲ್ಲಿ ನಿರ್ಮಿಸಬೇಕು. ಶೌಚಾಲಯವಿಲ್ಲದ ಮತಗಟ್ಟೆಗಳ ಬಗ್ಗೆ ಪಟ್ಟಿಮಾಡಿ ನರೇಗಾ ಅಡಿ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸಿ, ಅನುಮೋದನೆ ಪಡೆದು ಶೌಚಾಲಯ ನಿರ್ಮಾಣ ಮಾಡುವಂತೆ ಸೂಚಿಸಿದರು.
ಇ.ವಿ.ಎಂ., ವಿವಿಪ್ಯಾಟ್ ಮೂಲಕ ಸಾರ್ವಜನಿಕರಿಗೆ ಮತದಾನದ ಕುರಿತು ಅರಿವು ಮೂಡಿಸುವ ಕೆಲಸ ಜಿಲ್ಲೆಯಲಿ ವ್ಯಾಪಕವಾಗಿ ನಡೆದಿರುತ್ತದೆ. ಇಂದು ಕೊನೆಯ ದಿನವಾಗಿದ್ದು, ವಿವಿಪ್ಯಾಟ್ಗಳನ್ನು ಸುರಕ್ಷಿತವಾಗಿ ಸ್ಟ್ರಾಂಗ್ ರೂಮ್ನಲ್ಲಿ ಇರಿಸುವಂತೆ ಸೂಚಿಸಿದ ಅವರು, ಎಷ್ಟುಮಂದಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂಬುವುದರ ಕುರಿತು ವರದಿ ನೀಡಬೇಕು ಎಂದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಉಪಸ್ಥಿತರಿದ್ದರು.
‘ವಸ್ತು ಜಪ್ತಿ ಮಾಡಿ, ಪ್ರಕರಣ ದಾಖಲಿಸಿ’
ಚುನಾವಣಾ ಸಮೀಪಿಸಿದಂತೆ ಕುಕ್ಕರ್, ಸೀರೆ ಇತರೆ ಉಡುಗೊರೆಗಳನ್ನು ಕೊಡುವುದರ ಮೂಲಕ ಮತದಾರರಿಗೆ ಆಮಿಷವನ್ನೊಡ್ಡಿ ಮತ ಸೆಳೆಯುವ ಪ್ರಯತ್ನ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ವಸ್ತುಗಳನ್ನು ಜಪ್ತಿ ಮಾಡಬೇಕು. ಆರ್ಓ ಮತ್ತು ಎಆರ್ಓಗಳು ಈ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಬೇಕು. ಯುಡಿಐಡಿ ಕಾರ್ಡ್ ವಿತರಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಬಹುತೇಕ ಎಲ್ಲಾ ತಾಲೂಕುಗಳಲ್ಲೂ ನಿಗಧಿತ ಗುರಿ ಮುಟ್ಟಲಾಗಿದ್ದು, ಕುಣಿಗಲ್, ಗುಬ್ಬಿ, ಮಧುಗಿರಿ ತಾಲೂಕುಗಳ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸೂಚಿಸಿದರು.