ಸಾರ್ವಜನಿಕ ಗಣೇಶ ಹಬ್ಬಕ್ಕೆ ಅನುಮತಿ ಹಿನ್ನೆಲೆ ಬೆಸ್ಕಾಂ ಇಲಾಖೆ ಹೊಸ ಆದೇಶ
- ಸಾರ್ವಜನಿಕ ಗಣೇಶ ಹಬ್ಬಕ್ಕೆ ಅನುಮತಿ ಹಿನ್ನೆಲೆ ಬೆಸ್ಕಾಂ ಇಲಾಖೆ ಹೊಸ ಆದೇಶ
- ಪೆಂಡಾಲ್ ಹಾಕುವ ಪ್ರತಿವೊಬ್ಬರು 1200 ರೂ ಪಾವತಿಸಬೇಕು ಎಂದು ಆದೇಶ ನೀಡಿದೆ.
ಕೋಲಾರ (ಸೆ.09): ಸಾರ್ವಜನಿಕ ಗಣೇಶ ಹಬ್ಬಕ್ಕೆ ಅನುಮತಿ ಹಿನ್ನೆಲೆ ಬೆಸ್ಕಾಂ ಇಲಾಖೆ ಹೊಸ ಆದೇಶ ನೀಡಿದೆ. ಪೆಂಡಾಲ್ ಹಾಕುವ ಪ್ರತಿವೊಬ್ಬರು 1200 ರೂ ಪಾವತಿಸಬೇಕು ಎಂದು ಆದೇಶ ನೀಡಿದೆ.
ಈ ಆದೇಶ ಸಂಬಂಧ ಹಿಂದೂ ಪರ ಸಂಘಟನೆಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಗುಮ್ಮಟನಗರಿಯಲ್ಲೂ ಶುರುವಾಯ್ತು ದೇಶಿ ಮಣ್ಣಿನ ಗಣೇಶನ ಟ್ರೆಂಡ್!
ಆದೇಶ ಸಂಬಂಧ ಬೆಸ್ಕಾಂ ಅಧಿಕಾರಿಗಳು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಕೋಲಾರದ ನಗರಸಭೆಯ ಕಚೇರಿಯಲ್ಲಿ ಗಲಾಟೆ ನಡೆದಿದೆ.
ಉದ್ದೇಶಪೂರಕವಾಗಿ ಆದೇಶ ಮಾಡಿದ್ದೀರಿ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಉಚಿತವಾಗಿ ವಿದ್ಯುತ್ ನೀಡಲು ಆಗುವುದಿಲ್ಲ ಎಂದು ಪಟ್ಟು ಹಿಡಿದಿವೆ.
ಸರ್ಕಾರವೂ ಕೂಡ ಅನೇಕ ರೀತಿಯ ನಿಯಮಗಳನ್ನು ಗಣೇಶ ಚತುರ್ಥಿಗಾಗಿ ರೂಪಿಸಿದ್ದು ಈ ಸಂಬಂಧ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.