Asianet Suvarna News Asianet Suvarna News

ಬೆಂಗಳೂರಿಗರೇ ಎಚ್ಚರ: ಜೋರು ಮಳೆಯಿದ್ದರೂ 2 ದಿನ ನೀರಿಗೆ ಅಭಾವ!

Bengaluru Drinking Water Supply: ಮಂಡ್ಯದ‌ಲ್ಲಿ ಜಲಮಂಡಳಿಯ ಮೂರನೇ ಹಂತದ  ಟಿಕೆ ಹಳ್ಳಿ ಪಂಪಿಂಗ್ ಸ್ಟೇಷನ್‌ನಲ್ಲಿ ನೀರು ನುಗ್ಗಿದ ಪರಿಣಾಮ ಎರಡು ದಿನ ಅರ್ಧ ಬೆಂಗಳೂರಿಗೆ ನೀರು ಸರಬರಾಜು ಕಡಿತಗೊಳ್ಳಲಿದೆ
 

Bengaluru water supply to be affected as BWSSB pumping station flooded in Mandya mnj
Author
First Published Sep 5, 2022, 4:34 PM IST

ಬೆಂಗಳೂರು (ಸೆ. 05): ಮಂಡ್ಯದ‌ಲ್ಲಿ (Mandya) ಜಲಮಂಡಳಿಯ ಮೂರನೇ ಹಂತದ  ಟಿಕೆ ಹಳ್ಳಿ ಪಂಪಿಂಗ್ ಸ್ಟೇಷನ್‌ನಲ್ಲಿ ನೀರು ನುಗ್ಗಿದ ಪರಿಣಾಮ ಎರಡು ದಿನ ಅರ್ಧ ಬೆಂಗಳೂರಿಗೆ (Bengaluru) ನೀರು ಸರಬರಾಜು ಕಡಿತಗೊಳ್ಳಲಿದೆ. ಭಾರೀ ಮಳೆಗೆ ಬೆಂಗಳೂರು ನೀರು ಸರಬರಾಜು ಘಟಕ ಮುಳುಗಡೆಯಾಗಿದ್ದು ಇಂದು ಮತ್ತೆ ನಾಳೆ ಅರ್ಧ ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಮಿತವಾಗಿ ನೀರು ಬಳಸುವಂತೆ BWSSB ಮನವಿ ಮಾಡಿದೆ.  ಈ ಬೆನ್ನಲ್ಲೇ BWSSB ಅಧ್ಯಕ್ಷ, ಇಂಜಿನಿಯರ್‌ ಮಂಡ್ಯಕ್ಕೆ ದೌಡಾಯಿಸಿದ್ದಾರೆ. ಇನ್ನು ಬೆಂಗಳೂರು ನೀರು ಸರಬರಾಜು ಘಟಕ ಮುಳಗಡೆ ಹಿನ್ನಲೆ ಟಿ.ಕೆ.ಹಳ್ಳಿ ಘಟಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ರಾತ್ರಿ ಸುರಿದ ಮಳೆಯಿಂದ ಭೀಮ ನದಿ ಉಕ್ಕಿ ಹರಿಯುತ್ತಿದ್ದು ನದಿಯ ನೀರು ಘಟಕಕ್ಕೂ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಘಟಕದಲ್ಲಿರುವ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಡೆಯಾಗಿವೆ. ಯಂತ್ರೋಪಕರಣ ಮುಳುಗಡೆಯಿಂದ ಬೆಂಗಳೂರಿಗೆ  800 MLD (ಮಿಲಿ ಲೀಟರ್ ಪರ್ ಡೇ) ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ನೀರು ಪೂರೈಕೆ ಸ್ಥಗಿತದಿಂದ ಅರ್ಧ ಬೆಂಗಳೂರಿಗೆ ಸಮಸ್ಯೆ ಉಂಟಾಗಲಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿಯಿಂದ ಘಟಕದಿಂದ ನೀರು ಹೊರ ಹಾಕುವ ಕಾರ್ಯಾಚರಣೆ ಆರಂಭವಾಗಿದೆ. 

ಸಿಎಂ ಬೊಮ್ಮಾಯಿ ಭೇಟಿ:  ಬೆಂಗಳೂರು ಕುಡಿಯುವ ನೀರಿನ ಘಟಕ ಮುಳುಗಡೆ ಹಿನ್ನೆಲೆ ಟಿಕೆ ಹಳ್ಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ.  ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿಕೆ ಹಳ್ಳಿಯಲ್ಲಿ ಮುಳುಗಡೆಯಾಗಿರುವ ಕುಡಿಯುವ ನೀರಿನ ಘಟಕವನ್ನು ಸಿಎಂ ಬೊಮ್ಮಾಯಿ ವೀಕ್ಷಿಸಿದ್ದಾರೆ.  ಸಿಎಂಗೆ ಸಚಿವ ಆರ್ ಅಶೋಕ್, ಭೈರತಿ ಬಸವರಾಜು ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. 

ಯಾವೆಲ್ಲ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ?: ಇಂದು (ಸೆ. 05) ಮತ್ತು ನಾಳೆ (ಸೆ. 06) ಅರ್ಧ ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.  ಬೆಂಗಳೂರಿನ ಹೊಯ್ಸಳ ನಗರ, ಚಾಮರಾಜಪೇಟೆ, ಹನುಮಂತನಗರ, ಶ್ರೀನಗರ, ರಾಘವೇಂದ್ರ ಬ್ಲಾಕ್, ಕಾಳದಾಸ ಲೇಔಟ್, ಬ್ಯಾಟರಾಯನಪುರ,  ಗವಿಪುರಂ, ಲಕ್ಷ್ಮೀಪುರ, ಬಸಪ್ಪ ಲೇಔಟ್, ಯಲಹಂಕ, ಜಕ್ಕೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಬಿಇಎಲ್ ಲೇಔಟ್,  ಹೆಚ್.ಎಂ. ಲೇಔಟ್, ದಾಸರಹಳ್ಳಿ, ಶೆಟ್ಟಹಳ್ಳಿ, ಮಲ್ಲಸಂದ್ರ, ಬಗಲಗುಂಟೆ, ಟಿ.ದಾಸರಹಳ್ಳಿ, ಪೀಣ್ಯ, ರಾಜ್‌ಗೋಪಾಲನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಹೆಚ್.ಎಂ.ಐ ವಾರ್ಡ್ 

Heavy Rain in Bengaluru: ಇನ್ನೂ ಮೂರು ಗಂಟೆ ಭಾರಿ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ

ನಂದಿನಿ ಲೇಔಟ್, ಆರ್.ಆರ್.ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ, ಕೆಂಗುಂಟೆ, ಜಗಜ್ಯೋತಿ ಲೇಔಟ್, ಜ್ಞಾನಭಾರತಿ ಲೇಔಟ್,  ಐಡಿಯಲ್ ಹೋಮ್ಸ್, ಬಿಇಎಂಎಲ್ ಲೇಔಟ್, ಪಟ್ಟಣಗೆರೆ, ಚೆನ್ನಸಂದ್ರ, ಕೊತ್ತನೂರು ದಿಣ್ಣೆ, ಜೆ.ಪಿ.ನಗರ 6, 7 & 8ನೇ ಹಂತ, ವಿಜಯಬ್ಯಾಂಕ್ ಲೇಔಟ್, ಕೂಡ್ಲು, ಆಂಜನಾಪುರ, ಬೊಮ್ಮನಹಳ್ಳಿ, ಕೆ.ಆರ್.ಪುರಂ, ರಾಮಮೂರ್ತಿನಗರ, ಮಹದೇವಪುರ,  ಎ.ನಾರಾಯಣಪುರ, ಮಾರತ್‌ ಹಳ್ಳಿ, ಹೂಡಿ, ವೈಟ್ ಫೀಲ್ಡ್, ನಾಗರಬಾವಿ, 

ಹೆಚ್.ಎಸ್.ಆರ್.ಲೇಔಟ್, ಜೆ.ಪಿ.ನಗರ, ಹೆಚ್.ಐ.ಆರ್.ಲೇಔಟ್, ದೊಮ್ಮಲೂರು, ಬನ್ನೇರುಘಟ್ಟ ರಸ್ತೆ, ಜಂಬೂಸವಾರಿ ದಿಣ್ಣಿ,, ಲಗ್ಗೆರೆ, ಶ್ರೀಗಂಧದ ಕಾವಲ್,  ಟೆಲಿಕಾಂ ಲೇಔಟ್, ಶ್ರೀನಿವಾಸ ನಗರ, ಬಾಹುಬಲಿ ನಗರ, ಜಾಲಹಳ್ಳಿ, ಏರೋ ಇಂಜಿನ್, ಓ.ಎಂ.ಬಿ.ಆರ್. ಬೊಮ್ಮನಹಳ್ಳಿ, ಅರಕೆರೆ, ಬಿ.ಹೆಚ್.ಇ.ಎಲ್ ಲೇಔಟ್,  ಸುಂಕದಕಟ್ಟೆ, ಬ್ಯಾಡರಹಳ್ಳಿ, ಸರ್.ಎಂ.ವಿ.ಲೇಔಟ್, ಕೊಟ್ಟಗೆಪಾಳ್ಯ, ಎಲ್.ಐ.ಸಿ.ಲೇಔಟ್, ನಾಗದೇವನಹಳ್ಳಿ, ಮೈಸೂರು ರಸ್ತೆ, ಶಿರ್ಕೆ, ಚಿಕ್ಕಗೊಲ್ಲರಹಟ್ಟಿ, ಸುಬ್ಬಣ್ಣ ಗಾರ್ಡನ್, ನಾಯಂಡನಹಳ್ಳಿ, ಕಾಮಾಕ್ಷಿಪಾಳ್ಯ, ರಂಗನಾಥಪುರ, ಗೋವಿಂದರಾಜ್‌ನಗರ, ಕೆ.ಹೆಚ್.ಬಿ.ಕಾಲೋನಿ, 

ಮೂಡಲಪಾಳ್ಯ, ಆದರ್ಶ ನಗರ, ಬಿಡಿಎ ಲೇಔಟ್, ಮುನೇಶ್ವರನಗರ, ಕೊಡಿಗೇ ಹಳ್ಳಿ,  ಅಮೃತಹಳ್ಳಿ, ಕೋಗಿಲು, ಜೆ.ಪಿ.ಪಾರ್ಕ್, ಸದ್ಗುಂಟೆ ಪಾಳ್ಯ, ಕಸವನಹಳ್ಳಿ, ಕೋನೆನಾ ಅಗ್ರಹಾರ, ಸುಧಾಮನಗರ, ಮುರುಗೇಶ್ ಪಾಳ್ಯ, ಪಾಳ್ಯ, ಹೆಚ್.ಆರ್.ಬಿ.ಆರ್.ಲೇಔಟ್, ನಾಗವಾರ, ಬಾಲಾಜಿಲೇಔಟ್, ಬಿ.ಜಿ.ಎಸ್.ಲೇಔಟ್, ಎಸ್.ಬಿ.ಎಂ.ಕಾಲೋನಿ,  ಬಿಟಿಎಸ್ ಲೇಔಟ್‌, ಸಾರ್ವಭೌಮನಗರ, ಹುಳಿಮಾವು, ಬಂಡೆಪಾಳ್ಯ, ಸರಸ್ವತಿ ಪುರಂ, ರಾಘವೇಂದ್ರ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ರಾಮಯ್ಯ ಲೇಔಟ್,  ಪ್ರಗತಿ ಲೇಔಟ್, ಸಿಲ್ಕ್ ಬೋರ್ಡ್ ಕಾಲೋನಿ, ಮಂಗಮ್ಮನಪಾಳ್ಯ

ಮಳೆ ಸಂತ್ರಸ್ತರಿಗೆ ವಾರದೊಳಗೆ ಪರಿಹಾರ ನೀಡಿ: ಸಚಿವ ಭೈರತಿ ಬಸವರಾಜ್

ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮಿನಾರಾಯಣಪುರ, ಸೋಮಸುಂದರ ಪಾಳ್ಯ, ದೊಡ್ಡನೆಕುಂದಿ, ಗರುಡಾಚಾರ್ ಪಾಳ್ಯ, ಸಪ್ತಗಿರಿಲೇಔಟ್, ಮುನ್ನೇಮಕೊಳಲ, ಇಸ್ರೋ ಲೇಔಟ್, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯನಗರ, ರಮೇಶ್ ನಗರ, ಅಣ್ಣಸಂದ್ರಪಾಳ್ಯ, ಪಟಾಲಮ್ಮ ಲೇಔಟ್, ಗಾಯತ್ರಿ‌ ಲೇಔಟ್, ಮಂಜುನಾಥ ನಗರ, ರಾಮಾಂಜನೇಯ ಲೇಔಟ್, ಮಾರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Follow Us:
Download App:
  • android
  • ios