ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು ಟು ತುಮಕೂರು ಮೆಟ್ರೋ ಕಾರ್ಯ ಚುರುಕು!

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ ಕನಸು ನನಸಾಗುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ತುಮಕೂರಿಗೂ ನಮ್ಮ ಮೆಟ್ರೋ ಓಡಾಟ ನಡೆಸಲಿದೆ. 

Bengaluru Tumakuru Namma Metro 19 Elevated Stations Proposed For 52 41 Km Line gvd

ಬೆಂಗಳೂರು (ಏ.01): ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ ಕನಸು ನನಸಾಗುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ತುಮಕೂರಿಗೂ ನಮ್ಮ ಮೆಟ್ರೋ ಓಡಾಟ ನಡೆಸಲಿದೆ. ಕಲ್ಪತರು ನಾಡು ತುಮಕೂರಿಗೆ ಮೆಟ್ರೋ ವಿಸ್ತರಣೆ ಯೋಜನೆಗೆ ಬಿಎಂಆರ್‌ಸಿಎಲ್‌‌ ವೇಗ ನೀಡಿದ್ದು, ಈಗಾಗಲೇ ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. 19 ನಿಲ್ದಾಣಗಳನ್ನೊಳಗೊಂಡ 52.41 ಕಿಲೋ ಮೀಟರ್‌ ವಿಸ್ತರಣೆಯಾಗಲಿರುವ ನಮ್ಮ ಮೆಟ್ರೋ, ಕಾರ್ಯ ಸಾಧ್ಯತಾ ವರದಿಗಾಗಿ  ಬಿಎಂಆರ್‌‌ಸಿಎಲ್‌ ಅಧಿಕಾರಿಗಳು ಟೆಂಡರ್‌ ಆಹ್ವಾನ ಮಾಡಿದ್ದಾರೆ. 

ಯೋಜನೆಯ ಸಾಧಕ-ಭಾದಕಗಳ ಕುರಿತಾಗಿ ಕಾರ್ಯಸಾಧ್ಯತಾ ವರದಿಗಾಗಿ ಟೆಂಡರ್ ಆಹ್ವಾನಿಸಿದ್ದು, ಶೀಘ್ರದಲ್ಲೇ ಸಮಗ್ರ ಯೋಜನಾ ವರದಿ(DPR)ಗೂ  BMRCL ಟೆಂಡರ್‌ ಆಹ್ವಾನ ಮಾಡಲಿದೆ. ಸಾರ್ವಜನಿಕ & ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಮಟ್ರೋ ಮಹತ್ವದ ಯೋಜನೆಯಲ್ಲಿ ತುಮಕೂರು-ಬೆಂಗಳೂರು ನಡುವೆ ಮೆಟ್ರೋ ಯೋಜನೆಯಿಂದ ತಡೆರಹಿತ ಪ್ರಯಾಣದ ಅನುಭವವಾಗಲಿದೆ. ಪ್ರಯಾಣಕ್ಕೆ ಅನುಕೂಲದ ಜೊತೆಗೆ ತುಮಕೂರು ರಸ್ತೆಯಲ್ಲಿ ಬಂಡವಾಳ ಹೂಡಿಕೆಗೂ ಅನುಕೂಲವಾಗಲಿದ್ದು, ಮಾದವಾರದಿಂದ ತುಮಕೂರು ಕೇಂದ್ರ ಭಾಗದವರೆಗೂ ನಮ್ಮ ಮೆಟ್ರೋ ವಿಸ್ತರಣೆಯಾಗಲಿದೆ.ಈ ಬಗ್ಗೆ ಮೆಟ್ರೋ ಮಹತ್ವದ ಯೋಜನೆ ಕುರಿತಾಗಿ BMRCL ಅಧಿಕಾರಿಗಳಿ ಮಾಹಿತಿ ನೀಡಿದ್ದಾರೆ.

ಮುಂಬೈ ದಾಳಿಕೋರರನ್ನ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸದಾನಂದ ವಸಂತ್ NIA ಡಿಜಿಯಾಗಿ ಅಧಿಕಾರ ಸ್ವೀಕಾರ

ಜಯದೇವ ಮೆಟ್ರೋ ನಿಲ್ದಾಣದಲ್ಲಿ ಲೋಡ್‌ ಟೆಸ್ಟ್: ವರ್ಷಾಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿರುವ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದ ಇಂಟರ್‌ ಚೇಂಜ್‌ ಜಯದೇವ ಮೆಟ್ರೋ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸದ್ಯ ಗುಲಾಬಿ ಮಾರ್ಗದ ಹಂತದಲ್ಲಿ ಲೋಡ್ ಟೆಸ್ಟಿಂಗ್‌ ನಡೆಸಲಾಗುತ್ತಿದೆ.

ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರ (ಹಳದಿ ಮಾರ್ಗ) ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದ (ಗುಲಾಬಿ ಮಾರ್ಗ) ಭಾಗವಾಗಿದ್ದು, ಇವೆರಡು ಮಾರ್ಗವನ್ನು ಒಗ್ಗೂಡಿಸುತ್ತಿದೆ. ಪ್ರಯಾಣಿಕರು ಮಾರ್ಗ ಬದಲಾವಣೆ ಮಾಡಿಕೊಳ್ಳಲು ಈ ನಿಲ್ದಾಣ ಅವಕಾಶ ಕಲ್ಪಿಸಲಿದೆ. ಕಳೆದ ತಿಂಗಳು ನಿಲ್ದಾಣದ ಹಳದಿ ಮಾರ್ಗದ ಮಟ್ಟದಲ್ಲಿ ಲೋಡ್‌ ಟೆಸ್ಟ್‌ ನಡೆಸಲಾಗಿತ್ತು. ಉಸುಕು ತುಂಬಿದ ಸಾವಿರಕ್ಕೂ ಹೆಚ್ಚು ಚೀಲಗಳನ್ನಿಟ್ಟು ಮೆಟ್ರೋ ನಿಲ್ದಾಣದ ಸಾಮರ್ಥ್ಯ ಪರೀಕ್ಷಿಸಲಾಗಿತ್ತು. ಇದೀಗ ಗುಲಾಬಿ ಮಾರ್ಗದ ಲೋಡ್‌ ಟೆಸ್ಟ್‌ ನಡೆಸಲಾಗುತ್ತಿದೆ.

‘ಜೆಡಿಎಸ್‌’ನವರನ್ನು ಕೆರಳಿಸಬೇಡಿ: ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ಡಿಸೆಂಬರ್‌ ವೇಳೆಗೆ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುತ್ತಿದ್ದಂತೆ ಈ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಮುಂದೆ 2025 ರಲ್ಲಿ ಗುಲಾಬಿ ಮಾರ್ಗದಲ್ಲಿ ರೈಲುಗಳ ಸಂಚಾರ ಶುರುವಾದ ಬಳಿಕ ಪೂರ್ಣ ಪ್ರಮಾಣದಲ್ಲಿ ನಿಲ್ದಾಣ ಬಳಕೆ ಆಗಲಿದೆ. 19,826 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿರುವ ಈ ನಿಲ್ದಾಣ ಜನದಟ್ಟಣೆಯ ವೇಳೆ ಸುಮಾರು 25 ಸಾವಿರ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಜಯದೇವ ಮೆಟ್ರೋ ನಿಲ್ದಾಣದ ಶೇ.96ರಷ್ಟು ನಿರ್ಮಾಣ ಕಾರ್ಯ ಮುಗಿದಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ.

Latest Videos
Follow Us:
Download App:
  • android
  • ios