Asianet Suvarna News Asianet Suvarna News

ಶೀಘ್ರದಲ್ಲಿ ರೆಡಿಯಾಗ್ತಿದೆ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ: ಕೇವಲ 2.5 ಗಂಟೆಗಳಲ್ಲಿ ಆರಾಮಾಗಿ ಪ್ರಯಾಣ ಮಾಡ್ಬೋದು!

262-ಕಿಲೋಮೀಟರ್ ದೂರದ ನಾಲ್ಕು-ಲೇನ್ ಹೆದ್ದಾರಿಯು ಮಾರ್ಚ್ 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೂರು ರಾಜ್ಯಗಳ ಮೂಲಕ ಹಾದುಹೋಗುವ ಈ ಹೈಸ್ಪೀಡ್ ಕಾರಿಡಾರ್ ಬೆಂಗಳೂರು - ಚೆನ್ನೈ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 2.5 ಗಂಟೆಗಳೆಗೆ ಕಡಿತಗೊಳಿಸಲಿದೆ.

bengaluru to chennai in 2 5 hours why bangalore chennai expressway is a game changer for south india ash
Author
First Published May 17, 2023, 1:48 PM IST

ಬೆಂಗಳೂರು (ಮೇ 17, 2023): ಬೆಂಗಳೂರಿಂದ ಚೆನ್ನೈಗೆ ಹೋಗ್ಬೇಕಂದ್ರೆ ಹಲವರು ವಿಮಾನ ಅಥವಾ ರೈಲಿನಲ್ಲಿ ಪ್ರಯಾಣ ಮಾಡಲು ಬಯಸುತ್ತಾರೆ. ಏಕೆಂದರೆ ಕಾರು - ಬಸ್ಸಲ್ಲಿ ಹೋಗೋದು ಲಾಂಗ್‌ ಜರ್ನಿ ಅಂತ ಹೇಳ್ತಾರೆ. ಆದರೆ, ಇನ್ನೊಂದು ವರ್ಷದಲ್ಲಿ ಇದು ಬದಲಾಗುತ್ತೆ. ಯಾಕೆ ಅಂತೀರಾ..? ಕರ್ನಾಟಕದಲ್ಲಿ ಬಹು ನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 

ಹೌದು, 262-ಕಿಲೋಮೀಟರ್ ದೂರದ ನಾಲ್ಕು-ಲೇನ್ ಹೆದ್ದಾರಿಯು ಮಾರ್ಚ್ 2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೂರು ರಾಜ್ಯಗಳ ಮೂಲಕ ಹಾದುಹೋಗುವ ಈ ಹೈಸ್ಪೀಡ್ ಕಾರಿಡಾರ್ ಬೆಂಗಳೂರು - ಚೆನ್ನೈ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 2.5 ಗಂಟೆಗಳೆಗೆ ಕಡಿತಗೊಳಿಸಲಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಇನ್ಮುಂದೆ ಚೆನ್ನೈ - ಬೆಂಗಳೂರು ರೈಲು ಪ್ರಯಾಣ ಸಲೀಸು: ಸಮಯದಲ್ಲೂ ಭಾರಿ ಉಳಿತಾಯ

ಎರಡು ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಈ ಹೆದ್ದಾರಿ ನಿರ್ಮಾಣ ಹಂತದಲ್ಲಿರುವ ದಕ್ಷಿಣ ಭಾರತದ ಅತಿದೊಡ್ಡ ಮೂಲ ಯೋಜನೆಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ ಬರುವ ಪ್ರಮುಖ ನಗರಗಳು ಕರ್ನಾಟಕದ ಹೊಸಕೋಟೆ ಮತ್ತು ಬಂಗಾರಪೇಟೆ, ಆಂಧ್ರಪ್ರದೇಶದ ಪಲಮನೇರ್ ಮತ್ತು ಚಿತ್ತೂರು ಹಾಗೂ ತಮಿಳುನಾಡಿನ ಶ್ರೀಪೆರಂಬದೂರು ಎಂದು ತಿಳಿದುಬಂದಿದೆ. ಈ ಹೆದ್ದಾರಿಯ ನಿರ್ಮಾಣವನ್ನು ದಕ್ಷಿಣ ಭಾರತದಲ್ಲಿ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುತ್ತದೆ, ಹಾಗೂ ವಿವಿಧ ರಾಜ್ಯಗಳ ಬಹು ನಗರಗಳ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ವರದಿಯಾಗಿದೆ.

ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಹೈಲೈಟ್ಸ್‌

  • ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದುಹೋಗುವ ನಾಲ್ಕು-ಲೇನ್ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ.
  • ಈ ಹೆದ್ದಾರಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸುತ್ತಿರುವ 26 ಹೊಸ ಹಸಿರು ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ.
  • 262 ಕಿಲೋಮೀಟರ್‌ಗಳಲ್ಲಿ 85 ಕಿಮೀ ತಮಿಳುನಾಡಿನಲ್ಲಿ, 71 ಕಿಮೀ ಆಂಧ್ರಪ್ರದೇಶದಲ್ಲಿ ಮತ್ತು 106 ಕಿಮೀ ರಸ್ತೆ ಕರ್ನಾಟಕದಲ್ಲಿ ಹಾದುಹೋಗುತ್ತದೆ
  • ಪ್ರಸ್ತುತ ಪ್ಲ್ಯಾನ್‌ ಪ್ರಕಾರ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದರೂ ಮುಂದಿನ ವರ್ಷಾಂತ್ಯಕ್ಕೆ ಹೆದ್ದಾರಿ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಇದೆ. NHAI ಈ ಯೋಜನೆಯನ್ನು ನಿರ್ಮಾಣದ ಮೂರು ಹಂತಗಳಾಗಿ ವಿಂಗಡಿಸಿದೆ.
  • ಯೋಜನೆಯ ಅಂದಾಜು ವೆಚ್ಚ 16,700 ಕೋಟಿ ಆಗಿದ್ದು, ಮೇ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದ್ದಾರೆ.
  • ಹೈ-ಸ್ಪೀಡ್ ಕಾರಿಡಾರ್ ಆಶಾದಾಯಕವಾಗಿ ಎರಡೂ ಮೆಗಾಸಿಟಿಗಳ ಆರ್ಥಿಕ ಚಟುವಟಿಕೆಗಳನ್ನು ಮತ್ತು ಹೆದ್ದಾರಿಯ ಉದ್ದಕ್ಕೂ ಶ್ರೇಣಿ -3 ನಗರಗಳನ್ನು ಬಲಪಡಿಸುತ್ತದೆ. ಅಲ್ಲದೆ, ಇದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಕೈಗಾರಿಕಾ ಕೇಂದ್ರಗಳನ್ನು ಚೆನ್ನೈ ಬಂದರಿಗೆ ಸಂಪರ್ಕಿಸುತ್ತದೆ.
  • ಈ ಮಾರ್ಗದಲ್ಲಿರುವ ನಗರಗಳಲ್ಲಿ ಕರ್ನಾಟಕದ ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್), ಆಂಧ್ರದ ಪಲಮನೇರ್, ಚಿತ್ತೂರು ಮತ್ತು ತಮಿಳುನಾಡಿನ ರಾಣಿಪೇಟ್ ಸೇರಿವೆ.
  • ಚೆನ್ನೈನಲ್ಲಿ, ಎಕ್ಸ್‌ಪ್ರೆಸ್‌ವೇಗೆ ತಡೆರಹಿತ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಪಲ್ಲವರಂ ಮೇಲ್ಸೇತುವೆಯನ್ನು ಚೆನ್ನೈ ಬೈಪಾಸ್‌ಗೆ (ಪೆರುಂಗಲತ್ತೂರ್ - ಮಾಧವರಂ) ತಾಂಬರಂನಲ್ಲಿ ಸಂಪರ್ಕಿಸುವ ಕಾರಿಡಾರ್ ಅನ್ನು ಯೋಜಿಸುತ್ತಿದೆ. ಅಲ್ಲದೆ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಮತ್ತು ಪೂರ್ವ ಕರಾವಳಿ ರಸ್ತೆಯಿಂದ ಜಿಎಸ್‌ಟಿ ರಸ್ತೆಗೆ ರಸ್ತೆ ಸಂಪರ್ಕವನ್ನು ಸಹ ವರ್ಧಿಸಲಾಗುತ್ತದೆ.
  • ಪ್ರಸ್ತುತ, ರಸ್ತೆ ಮೂಲಕ ಚೆನ್ನೈ ಮತ್ತು ಬೆಂಗಳೂರು ನಡುವಿನ ಸರಾಸರಿ ಪ್ರಯಾಣದ ಸಮಯ 5 - 6 ಗಂಟೆಗಳು. ಇನ್ನು, ಹೊಸ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರವನ್ನು 300 ಕಿ.ಮೀ ನಿಂದ 262 ಕಿ.ಮೀಗೆ ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು 2-3 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.
  • ಎಕ್ಸ್‌ಪ್ರೆಸ್‌ವೇಯನ್ನು ಗಂಟೆಗೆ 120 ಕಿಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ ಮತ್ತು ನಿಧಾನವಾಗಿ ಚಲಿಸುವ ವಾಹನಗಳು, ಬೈಕ್‌ಗಳು ಮತ್ತು ಆಟೋ ರಿಕ್ಷಾಗಳನ್ನು ಕಾರಿಡಾರ್‌ನಲ್ಲಿ ಅನುಮತಿಸಲಾಗುವುದಿಲ್ಲ.
     

ಇದನ್ನೂ ಓದಿ: 17 ಸಾವಿರ ಕೋಟಿ ರೂ. ಮೊತ್ತದ ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ 2024ರ ವೇಳೆಗೆ ಸಿದ್ಧ: ನಿತಿನ್‌ ಗಡ್ಕರಿ 

Follow Us:
Download App:
  • android
  • ios