Asianet Suvarna News Asianet Suvarna News

ಬೆಂಗಳೂರು ದಕ್ಷಿಣದ ತಾಲೂಕು ಪಂಚಾಯತ್ ಚುನಾವಣೆ ದಿಢೀರ್ ಮುಂದೂಡಿಕೆ

ಜೆಡಿಎಸ್ ಜೊತೆಗೆ ಸೇರಿ ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗುತ್ತಿದ್ದಂತೆ ಇತ್ತ ತಮ್ಮ ಬೆಂಬಲಿಗರಿಗೆ ಅಧಿಕಾರ ಕೈ ತಪ್ಪಲಿದೆ ಎಂದು ಬೆಂಗಳೂರು ದಕ್ಷಿಣದ ತಾಲೂಕು ಪಂಚಾಯತ್ ಚುನಾವಣೆ ಮುಂದೂಡಿಕೆ ಮಾಡಿಸುವಲ್ಲಿ ಅನರ್ಹ ಶಾಸಕ ಸೋಮಶೇಖರ್ ಸಫಲರಾಗಿದ್ದಾರೆ ಎನ್ನಲಾಗಿದೆ.  

Bengaluru South Taluk Panchayat Election Postponed
Author
Bengaluru, First Published Aug 28, 2019, 12:01 PM IST
  • Facebook
  • Twitter
  • Whatsapp

ಬೆಂಗಳೂರು [ಆ.28]: ಬೆಂಗಳೂರು ದಕ್ಷಿಣದ ತಾಲೂಕು ಪಂಚಾಯತ್ ಚುನಾವಣೆ ರಾತ್ರೋ ರಾತ್ರಿ ಮುಂದೂಡಿಕೆಯಾಗಿದೆ. ಬಿಜೆಪಿ ಹಾಗೂ ಅನರ್ಹ ಶಾಸಕರ ನಡುವೆ ಪೈಟ್ ನಡೆಯುತ್ತಿದ್ದು, ತಮ್ಮ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ಮಾಡಲು ಯಶವಂತಪುರ ಕ್ಷೇತ್ರದ ಅನರ್ಹ ಶಾಸಕ ಸೋಮಶೇಖರ್ ಚುನಾವಣೆ ಮುಂದೂಡಿಸಿದ್ದಾರೆ.

ಚುನಾವಣೆಯಲ್ಲಿ ಸೋಲುವ ಭಯದಿಂದ ಬುಧವಾರ ನಡೆಯಬೇಕಿದ್ದ ಚುನಾವಣೆಯಲ್ಲಿ ಅನರ್ಹ ಶಾಸಕ ಸೋಮಶೇಖರ್ ಮುಂದೆ ಹೋಗುವಂತೆ ಮಾಡಿದ್ದಾರೆ ಎನ್ನಲಾಗಿದೆ. 

ಒಟ್ಟು 21 ಜನ ಸದಸ್ಯ ಬಲ ಹೊಂದಿರುವ ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಸೋಮಶೇಖರ್ ಬಣ 10 ಸದಸ್ಯ ಬಲ ಹೊಂದಿದೆ, ಇತ್ತ ಬಿಜೆಪಿ 7, ಜೆಡಿಎಸ್ 4 ಸದಸ್ಯ ಬಲ ಹೊಂದಿದೆ. ಇದರಿಂದ ಆರ್. ಅಶೋಕ್ ಅವರ ಪ್ರಭಾವ ಬಳಸಿ ರಾತ್ರೋ ರಾತ್ರಿ ಚುನಾವಣೆ ಮುಂದೂಡಿಕೆ ಮಾಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್ ನಲ್ಲಿರುವ ತಮ್ಮ ಬೆಂಬಲಿಗರನ್ನೇ ಅಧ್ಯಕ್ಷರನ್ನಾಗಿ ಮಾಡಲು ಸೋಮಶೇಖರ್ ಪಟ್ಟು ಹಿಡಿದಿದ್ದು, ಆರ್.ಅಶೋಕ್ ಕರೆಸಿ ಮಾತುಕತೆ ನಡೆಸಿದ್ದು, ಆದರೆ ಇದಕ್ಕೆ ಸ್ಥಳೀಯ ಬಿಜೆಪಿ ನಾಯಕರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.  ಅಲ್ಲದೇ ಸೋಮಶೇಖರ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. 

ಜೆಡಿಎಸ್ ಜೊತೆಗೂಡಿ ಅಧ್ಯಕ್ಷ ಚುನಾವಣೆ ಎದುರಿಸುವ ಇರಾದೆ ಬಿಜೆಪಿಯದ್ದಾಗಿದ್ದು, ಇವರಿಗೆ ಗೆಲುವು ಸಿಗಲಿದೆ ಎಂದು ತಿಳಿಯುತ್ತಿದ್ದಂತೆ ಚುನಾವಣೆ ಮುಂದೂಡಿಕೆ ಮಾಡಲಾಗಿದೆ.

Follow Us:
Download App:
  • android
  • ios