Asianet Suvarna News Asianet Suvarna News

ದೇಗುಲ ರಕ್ಷಣೆ ಹೆಸರಲ್ಲಿ 5 ಪರ್ಸೆಂಟ್‌ ಲಾಭಕ್ಕೆ ಕಾಂಗ್ರೆಸ್‌ ಯತ್ನ: ತೇಜಸ್ವಿ

*  ತೇಜಸ್ವಿ ಸೂರ್ಯ-ಪ್ರತಾಪ್‌ ಸಿಂಹಗೆ ಘೇರಾವ್‌ 
*  ಕಾಂಗ್ರೆಸ್ಸಿಗರಿಗೆ ರಾತ್ರೋರಾತ್ರಿ ಮಂದಿರದ ಬಗ್ಗೆ ಪ್ರೀತಿ ಬಂದಿದೆ
*  ಮೂರ್ತಿಭಂಜಕ ಟಿಪ್ಪು ಜಯಂತಿ ಮಾಡಿದವರ ಬಗ್ಗೆ ಜನಕ್ಕೆ ಗೊತ್ತಿದೆ

Bengaluru South BJP MP Tejasvi Surya Slams Congress grg
Author
Bengaluru, First Published Sep 17, 2021, 8:39 AM IST
  • Facebook
  • Twitter
  • Whatsapp

ಚಿಕ್ಕಮಗಳೂರು(ಸೆ.17):  ಮಂದಿರ ರಕ್ಷಣೆ ಹೋರಾಟದಲ್ಲಿ 5 ಪರ್ಸೆಂಟ್‌ ಲಾಭ ತೆಗೆದುಕೊಳ್ಳೋಣ ಎಂದು ಕಾಂಗ್ರೆಸ್‌ ಹೊರಟಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ. 

ನಂಜನಗೂಡಿನ ಹುಚ್ಚಗಣಿ ದೇವಾಲಯ ತೆರವು ವಿರೋಧಿಸಿ ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪ್ರತಾಪ್‌ ಸಿಂಹ ಅವರಿಗೆ ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

'ಉತ್ತರ ಕೊಡಿ' ಪ್ರತಾಪ್ ಸಿಂಹ-ತೇಜಸ್ವಿ ಸೂರ್ಯಗೆ ಹಿಂದು ಕಾರ್ಯಕರ್ತರ ಮುತ್ತಿಗೆ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂದಿರ ರಕ್ಷಣೆ ಹೋರಾಟದಲ್ಲಿ ತಮಗೂ 5 ಪರ್ಸೆಂಟ್‌ ಲಾಭ ಬರಲಿ ಅಂತಾ ಕಾಂಗ್ರೆಸ್‌ ಯೋಚಿಸುತ್ತಿದೆ. ಹೀಗಾಗಿ ರಾತ್ರೋರಾತ್ರಿ ಮಂದಿರದ ಬಗ್ಗೆ ಪ್ರೀತಿ ಬಂದಿದೆ ಎಂದು ಹೇಳಿದರು. ಆಷಾಡಭೂತಿತನ ತೋರಿಸುತ್ತಿರುವ ಕಾಂಗ್ರೆಸ್ಸಿಗರ ನಾಟಕವನ್ನು ಜನ ನಂಬುವುದಿಲ್ಲ. ಮೂರ್ತಿಭಂಜಕ ಟಿಪ್ಪು ಜಯಂತಿ ಮಾಡಿದವರ ಬಗ್ಗೆ ಜನಕ್ಕೆ ಗೊತ್ತಿದೆ. ನಾಟಕ ಮಾಡುವುದನ್ನು ಕಾಂಗ್ರೆಸ್‌ ಮೊದಲು ನಿಲ್ಲಿಸಲಿ ಎಂದರು.
 

Follow Us:
Download App:
  • android
  • ios